ಕಂಬ್ಲಿಹುಳ' ಅನ್ನೋ ಸಿನಿಮಾ ಮೂಲಕ ಸಿನಿಪ್ರಿಯರ ಮೆಚ್ಚುಗೆ ಗಳಿಸಿದ್ದಅಂಜನ್ ನಾಗೇಂದ್ರ ಈ ಚಿತ್ರಕ್ಕೆ ಹೀರೋ. ಅವರಿಗೆ ಜೋಡಿಯಾಗಿ ವೆನ್ಯಾ ರೈ ನಟಿಸಿದ್ದಾರೆ. ಸಂಜನಾ ದಾಸ್ ಕೂಡ ಒಂದು ಪ್ರಮುಖ ಪಾತ್ರ ನಿಭಾಯಿಸುತ್ತಿದ್ದಾರೆ.
ಹಯವದನ ನಿರ್ದೇಶನದ 'ಎಲ್ಲೋ ಜೋಗಪ್ಪ ನಿನ್ನರಮನೆ' ಹಯವದನ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮೊಟ್ಟಮೊದಲ ಸಿನಿಮಾ. ಈ ಚಿತ್ರ ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿದೆ. ಫಸ್ಟ್ ಲುಕ್ ಮೂಲಕ ಗಮನ ಸೆಳೆದ ಚಿತ್ರತಂಡವೀಗ ಮತ್ತೊಂದು ಸಮಾಚಾರ ಹೊತ್ತು ನಿಮ್ಮ ಮುಂದೆ ಬಂದಿದೆ. ಎಲ್ಲೋ ಜೋಗಪ್ಪ ನಿನ್ನರಮನೆ ಸಿನಿಮಾದ ರೋಮ್ಯಾಂಟಿಕ್ ಹಾಡಿಗೆ ರಕ್ಷಿತಾ ಸುರೇಶ್ ಧ್ವನಿಯಾಗಿದ್ದಾರೆ. ಇತ್ತೀಚಿಗಷ್ಟೇ ಚೆನ್ನೈನ ಯೂನೋ ಸ್ಟುಡಿಯೋದಲ್ಲಿ ಸಾಂಗ್ ರೆಕಾರ್ಡಿಂಗ್ ಮಾಡಲಾಗಿದೆ.
ಈ ಹಿಂದೆ ರಕ್ಷಿತಾ ಸುರೇಶ್ ಕಾಟೇರ ಸಿನಿಮಾದ ಯಾವ ಜನುಮದ ಗೆಳತಿ ಹಾಗೂ ಉಪಾಧ್ಯಕ್ಷ ಸಿನಿಮಾದ ನನಗೆ ನೀನು ಸಾಂಗ್ ಸೇರಿದಂತೆ ಹಲವು ಕನ್ನಡ ಹಾಡುಗಳಿಗೆ ಕಂಠ ಕುಣಿಸಿದ್ದಾರೆ. ಮೂಲತಃ ಮೈಸೂರಿನವರಾದ ರಕ್ಷಿತಾ ಸುರೇಶ್, ತಮಿಳಿನ 'ಪೊನ್ನಿಯಿನ್ ಸೆಲ್ವನ್' ಸೇರಿದಂತೆ ಹಲವು ತೆಲುಗು ಚಿತ್ರಗಳಿಗೂ ಹಾಡು ಆಡಿದ್ದಾರೆ. ಶಾರುಖ್ ಖಾನ್ ನಟನೆಯ 'ಜವಾನ್' ಹಾಡಿಗೂ ಧ್ವನಿಯಾಗಿರುವ ರಕ್ಷಿತಾ ಆಸ್ಕರ್ ಪ್ರಶಸ್ತಿ ವಿಜೇತ ಎಆರ್ ರೆಹಮಾನ್ ಅವರ ಅಚ್ಚುಮೆಚ್ಚಿನ ಗಾಯಕಿ ಅನ್ನೋದೇ ವಿಶೇಷ.
ದಿವಂಗತ ಶಂಕರ್ ನಾಗ್ ಬಗ್ಗೆ ಸಿಂಪಲ್ ಸ್ಟಾರ್ ಹೇಳಿದ್ದೇನು; ಯಾಕೆ ಶಾಕ್ ಆಗಿದ್ದಾರೆ ರಕ್ಷಿತ್ ಶೆಟ್ಟಿ?
ಕಂಬ್ಲಿಹುಳ' ಅನ್ನೋ ಸಿನಿಮಾ ಮೂಲಕ ಸಿನಿಪ್ರಿಯರ ಮೆಚ್ಚುಗೆ ಗಳಿಸಿದ್ದಅಂಜನ್ ನಾಗೇಂದ್ರ ಈ ಚಿತ್ರಕ್ಕೆ ಹೀರೋ. ಅವರಿಗೆ ಜೋಡಿಯಾಗಿ ವೆನ್ಯಾ ರೈ ನಟಿಸಿದ್ದಾರೆ. ಸಂಜನಾ ದಾಸ್ ಕೂಡ ಒಂದು ಪ್ರಮುಖ ಪಾತ್ರ ನಿಭಾಯಿಸುತ್ತಿದ್ದಾರೆ. ಬಿರಾದರ್, ಶರತ್ ಲೋಹಿತಾಶ್ವ, ದಾನಪ್ಪ, ಸ್ವಾತಿ, ದಿನೇಶ್ ಮಂಗಳೂರು, ಲಕ್ಷ್ಮೀ ನಾಡಗೌಡ ಮುಂತಾದವರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.
ತಮಿಳು ಸಿನಿಮಾದಲ್ಲಿ ಕನ್ನಡದ ಬಿಗ್ ಬಾಸ್ ವಿನ್ನರ್ ರೂಪೇಶ್ ಎಂಟ್ರಿ; ಯಾವ ಸಿನಿಮಾಗೆ ಫಿಕ್ಸ್ ಆದ್ರು ನೋಡಿ!
'ಎಲ್ಲೋ ಜೋಗಪ್ಪ ನಿನ್ನರಮನೆ' ಸಿನಿಮಾ ಟೈಟಲ್ ಕೇಳಿ ಗ್ರಾಮೀಣ ಸೊಗಡಿನ ಸಿನಿಮಾ ಅಂದುಕೊಳ್ಳಬಹುದು. ಆದರೆ, ಈ ಸಿನಿಮಾದ ಥೀಮ್ ಬೇರೆನೇ ಇದೆ. ಇದು ಒಂದು ಜರ್ನಿ ಸಿನಿಮಾ. ತಂದೆ ಮತ್ತು ಮಗನ ಬಾಂಧವ್ಯದ ಕಹಾನಿ ಇದೆ. ಬೆಂಗಳೂರಿನಿಂದ ಶುರುವಾದ ಪ್ರಯಾಣ ಹಿಮಾಲಯದವರೆಗೆ ಹೋಗುತ್ತದೆ. ಭಾವನಾತ್ಮಕವಾದ ಈ ಸಿನಿಮಾ ಯುವ ಜನರಿಗೆ ಹೆಚ್ಚು ಮನರಂಜನೆ ನೀಡುತ್ತದೆ. ಹಲವು ರಾಜ್ಯಗಳ ಅನೇಕ ಲೊಕೇಷನ್ಗಳಲ್ಲಿ ಈ ಸಿನಿಮಾದ ಶೂಟಿಂಗ್ ಮಾಡಲಾಗಿದೆ.
ಮಹಿಳಾ ಪ್ರಧಾನ 'ತಪಸ್ವಿ'ಯಲ್ಲಿ ರವಿಚಂದ್ರನ್; ಮ್ಯಾಥ್ಯೂ ಸಿನಿಮಾದಲ್ಲಿ ಕ್ರೇಜಿ ಸ್ಟಾರ್ ಪಾತ್ರವೇನು?
ಶಿವ ಪ್ರಸಾದ್ ಸಂಗೀತ, ನಟರಾಜ್ ಮದ್ದಾಲ ಛಾಯಾಗ್ರಹಣ, ರವಿಚಂದ್ರನ್ ಸಂಕಲನ ಈ ಚಿತ್ರಕ್ಕಿದೆ. ಪ್ರಮೋದ್ ಮರವಂತೆ ಮತ್ತು ರವೀಂದ್ರ ಮುದ್ದಿ ಸಾಹಿತ್ಯ ಬರೆದಿದ್ದಾರೆ. ಭಜರಂಗಿ ಮೋಹನ್ ನೃತ್ಯ ನಿರ್ದೇಶನ ಮಾಡಿದ್ದಾರೆ. ನರಸಿಂಹ ಸಾಹಸ ನಿರ್ದೇಶನ ಈ ಸಿನಿಮಾಗಿದೆ. ‘ಪೆಂಡೋರಾಸ್ ಬಾಕ್ಸ್ ಪ್ರೊಡಕ್ಷನ್’ ಮತ್ತು ‘ಕೃಷ್ಣಛಾಯಾ ಚಿತ್ರ’ ಬ್ಯಾನರ್ ಮೂಲಕ ಪವನ್ ಸಿಮಿಕೇರಿ ಹಾಗೂ ಸಿಂಧು ಹಯವದನ ಅವರು ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.