Asianet Suvarna News Asianet Suvarna News

ನಾವು ದರ್ಶನ್ ನೋಡಬೇಕು ಜೈಲಿನೊಳಗೆ ಬಿಡಿ ಎಂದ ಅಭಿಮಾನಿಗಳು; ಬಾಯ್ತುಂಬಾ ಬೈದು ಕಳಿಸಿದ ಪೊಲೀಸರು

ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ಆರೋಪದಲ್ಲಿ ವಿಚಾರಣಾಧೀನ ಕೈದಿಯಾಗಿ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲು ಸೇರಿದ ನಟ ದರ್ಶನ್ ನೋಡಲು ಅಭಿಮಾನಿಗಳು ಜೈಲಿನ ಮುಂದೆ ಜಮಾಯಿಸಿದ್ದಾರೆ.

Fans gathered in front of Parappana Agrahara central Jail to see actor Darshan sat
Author
First Published Jun 25, 2024, 4:13 PM IST | Last Updated Jun 25, 2024, 4:59 PM IST

ಬೆಂಗಳೂರು (ಜೂ.25): ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ಆರೋಪದಲ್ಲಿ ವಿಚಾರಣಾಧೀನ ಕೈದಿಯಾಗಿ ಪರಪ್ಪನ ಅಗ್ರಹಾರ ಸೆಂಟರ್ ಜೈಲು ಸೇರಿದ ನಟ ದರ್ಶನ್ ನೋಡಲು ಅವರ ಅಭಿಮಾನಿಗಳು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿ ಪರಪ್ಪನ ಅಗ್ರಹಾರ ಜೈಲಿನ ಮುಂದೆ ಜಮಾಯಿಸಿದ್ದಾರೆ. ಜೊತೆಗೆ, ನಾವು ಜೈಲಿನೊಳಗೆ ಹೋಗಬೇಕು ಬಿಡಿ ಎಂದು ಕೇಳಿದ್ದಾರೆ.

ಪ್ರೀತಿ ಕುರುಡು ಎನ್ನುವುದನ್ನು ನಾವು ಕೇಳಿದ್ದೇವೆ, ಕೆಲವು ಪ್ರಕರಣಗಳಲ್ಲಿ ನೈಜವಾಗಿ ನೋಡಿರುತ್ತೇವೆ. ಆದರೆ, ಅಭಿಮಾನವೂ ಕುರುಡಾಗಲು ಹೇಗೆ ಸಾಧ್ಯ ಹೇಳಿ.. ಸ್ಯಾಂಡಲ್‌ವುಡ್‌ ಸಿನಿಮಾದ ನಾಯಕ ದರ್ಶನ್‌ಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಚಾಲೆಂಜಿಂಗ್ ಸ್ಟಾರ್ ಸೇರಿ ಅನೇಕ ಬಿರುದುಗಳಿವೆ. ಇನ್ನು ಸಿನಿಮಾ ನೋಡಿದವರು ನಾಯಕ ಪಾತ್ರವನ್ನು ನೋಡಿ ಅಭಿಮಾನಿಗಳು ಆಗುವುದು ಕೂಡ ಸಾಮಾನ್ಯವಾಗಿದೆ. ಆದರೆ, ಯಾವುದೇ ವ್ಯಕ್ತಿಯ ಅಭಿಮಾನಿ ಆಗುವುದಕ್ಕೂ ಮುನ್ನ ವೈಯಕ್ತಿಕ ಜೀವನವನ್ನೂ ನೋಡಬೇಕು. ಇದ್ಯಾವುದನ್ನೂ ನೋಡದೇ ಅವರ ಅಭಿಮಾನಿಗಳಾದವರಿಗೆ ನಟ ದರ್ಶನ್ ಕೊಲೆ ಮಾಡಿದ್ದಾನೆ ಎಂಬ ಆರೋಪವನ್ನು ಅರಗಿಸಿಕೊಳ್ಳಲೂ ಸಾಧ್ಯವಾಗಿಲ್ಲ. ಆದರೆ, ವಾಸ್ತವ ಜಗತ್ತಿನಲ್ಲಿ ದರ್ಶನ್ ಆರೋಪಿಯಾಗಿದ್ದು, ವಿಚಾರಣಾಧೀನ ಕೈದಿಯಾಗಿ ಸೆಂಟ್ರಲ್ ಜೈಲು ಕೂಡ ಸೇರಿದ್ದಾನೆ.

ನಟ ದರ್ಶನ್ ಫ್ಯಾನ್ಸ್ ಮೇಲೆ ಬಿತ್ತು ಮತ್ತೊಂದು ಕೇಸ್; ಉಮಾಪತಿಗೌಡಗೆ ಬೆದರಿಕೆಯೊಡ್ಡಿದ್ದ ಅಭಿಮಾನಿ ಅರೆಸ್ಟ್ 

ತಮ್ಮ ಸಿನಿಮಾ ಹೀರೋ ದರ್ಶನ್ ಕೊಲೆ ಆರೋಪದಲ್ಲಿ ಜೈಲು ಸೇರಿದ್ದಾನೆ ಎಂಬುದನ್ನು ತಿಳಿದಿದ್ದರೂ ರಾಜ್ಯದ ವಿವಿಧೆಡೆಯಿಂದ ಪರಪ್ಪನ ಅಗ್ರಹಾರ ಜೈಲಿನ ಬಳಿ ಬಂದು ತಾವು ದರ್ಶನ್ ಅವರನ್ನು ನೋಡಬೇಕು ಒಳಗೆ ಬಿಡಿ ಎಂದು ಪೊಲೀಸರ ಮುಂದೆ ಮನವಿ ಮಾಡುತ್ತಿದ್ದಾರೆ. ಬಳ್ಳಾರಿ, ಬೆಳಗಾವಿ, ಕೋಲಾರ, ಪಾವಗಡ ಸೇರಿ ವಿವಿಧಡೆಯಿಂದ ದರ್ಶನ್ ಭೇಟಿಗೆ ಅಭಿಮಾನಿಗಳು ಆಗಮಿಸಿದ್ದಾರೆ. ಆದರೆ, ಇದು ಗಂಭೀರ ಪ್ರಕರಣವಾಗಿದ್ದರಿಂದ ಮತ್ತು ಆತ ಸೆಲೆಬ್ರಿಟಿ ಆಗಿದ್ದರಿಂದ ಭೇಟಿಗೆ ಅವಕಾಶ ನೀಡದೇ ಎಲ್ಲ ಅಭಿಮಾನಿಗಳನ್ನು ವಾಪಸ್ ಕಳಿಸಲಾಗಿದೆ.

ಪರಪ್ಪನ ಅಗ್ರಹಾರ ಜೈಲಿನ ಬಳಿ ನಿಂತು ಸುಮಾರು ಗಂಟೆಗಳ ಕಾಲ ಪೊಲೀಸರಿಗೆ ದರ್ಶನ್ ಭೇಟಿ ಮಾಡಲು ಅವಕಾಶ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಅದರಲ್ಲಿ ಮಹಿಳೆಯರು ಹಾಗೂ ಯುವತಿಯರೂ ಕೂಡ ಇದ್ದಾರೆ. ಆದರೆ, ಪೊಲೀಸರು ನೀವು ದರ್ಶನ್ ಭೇಟಿ ಮಾಡಲು ಅವಕಾಶವಿಲ್ಲವೆಂದು ಹೇಳಿ ವಾಪಸ್ ಕಳುಹಿಸಿದ್ದಾರೆ. ಇದು ಘಂಭೀರ ಪ್ರಕರಣವಾಗಿದ್ದು, ದರ್ಶನ್ ಭೇಟಿ ಮಾಡಲು ಕುಟುಂಬಸ್ಥರಿಗೆ ಮತ್ತು ಅವರ ಕೇಸ್ ನಡೆಸುವ ವಕೀಲರಿಗೆ ಮಾತ್ರ ಅವಕಾಶ ಇರುತ್ತದೆ. ಇಲ್ಲಿ ಅಭಿಮಾನಿಗಳು ಸೇರಿ ಬೇರೆ ಯಾರಿಗೂ ಭೇಟಿ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ. ನೀವು ಇಲ್ಲಿ ನಿಂತುಕೊಳ್ಳಬಾರದು ಹೊರಡಿ ಎಂದು ಅಲ್ಲಿಂದ ಅವರನ್ನು ವಾಪಸ್ ಕಳಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ನಿರ್ಮಾಪಕ ಸೌಂದರ್ಯ ಜಗದೀಶ್ ಕೊಟ್ಟ ಹಣದಲ್ಲಿ ಪವಿತ್ರಾಗೌಡ ಮನೆ ಖರೀದಿ?

ನಿರ್ಮಾಪಕ ಉಮಾಪತಿಗೌಡಗೆ ಬೆದರಿಕೆ ಹಾಕಿದ್ದ ನಟ ದರ್ಶನ್ ಅಭಿಮಾನಿ ವಿರುದ್ಧ 2 ಎಫ್‌ಐಆರ್: ಕೊಲೆ ಕೇಸಿನಲ್ಲಿ ಜೈಲು ಸೇರಿರುವ ನಟ ದರ್ಶನ್ ಅಭಿಮಾನಿ ಚೇತನ್ ಕನ್ನಡ ಸಿನಿಮಾ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರಿಗೆ ಬೆದರಿಕೆ ಹಾಕಿ ಅವ್ಯಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದನು. ಇದರ ಬೆನ್ನಲ್ಲಿಯೇ ಉಮಾಪತಿಗೌಡ ಅವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆರಂಭದಲ್ಲಿ ಎನ್‌ಸಿಆರ್ ದಾಖಲಿಸಿಕೊಂಡ ಪೊಲೀಸರು ಬೆದರಿಕೆ ಹಾಕಿದ್ದ ಚೇತನ್‌ನನ್ನು ಕರೆಸಿ ವಾರ್ನಿಂಗ್ ನೀಡಿದ್ದರು. ಇದರ ಬೆನ್ನಲ್ಲಿಯೇ ದರ್ಶನ್ ಅಭಿಮಾನಿ ಚೇತನ್ ವಿಡಿಯೋವೊಂದನ್ನು ಮಾಡಿ ಉಮಾಪತಿ ಶ್ರೀನಿವಾಸ್ ಗೌಡ ಅವರಿಗೆ ಕ್ಷಮೆ ಕೇಳಿ, ದರ್ಶನ್ ವಿರುದ್ಧ ಕಾನೂನಿನ ನಿಯಮಗಳಲ್ಲಿರುವಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿ ಪೋಸ್ಟ್ ಮಾಡಿಕೊಂಡಿದ್ದನು. ಪೊಲೀಸರು ಇಷ್ಟಕ್ಕೆ ಬಿಡದೇ ಆತನ ವಿರುದ್ಧ ಎರಡು ಕೇಸುಗಳನ್ನು ದಾಖಲಿಸಿದ್ದಾರೆ.

Latest Videos
Follow Us:
Download App:
  • android
  • ios