ವಿಜಯಪುರದಲ್ಲಿ ಚಂದನ್ ಶೆಟ್ಟಿ ಮುಖ ರಂಗೇರುವಂತೆ ಮಾಡಿದ ಅಜ್ಜಿ ಹೇಳಿದ್ದಿಷ್ಟು!

Published : Jan 17, 2025, 02:03 PM ISTUpdated : Jan 17, 2025, 03:53 PM IST
ವಿಜಯಪುರದಲ್ಲಿ ಚಂದನ್ ಶೆಟ್ಟಿ ಮುಖ ರಂಗೇರುವಂತೆ ಮಾಡಿದ ಅಜ್ಜಿ ಹೇಳಿದ್ದಿಷ್ಟು!

ಸಾರಾಂಶ

ಸ್ಟೇಜ್ ಮೇಲೆ ಫುಲ್ ಎನರ್ಜಿಟಿಕ್ ಆಗಿ ಡಾನ್ಸ್ ಮಾಡಿರುವ ಚಂದನ್ ಶೆಟ್ಟಿಯವರು, ಈಗಾಗಲೇ ಭಾರೀ ವೈರಲ್ ಆಗಿರುವ ಕಾಟನ್ ಕ್ಯಾಂಡಿ ಮ್ಯೂಸಿಕ್ ವಿಡಿಯೋಗೆ ಮತ್ತಷ್ಟು ಶಕ್ತಿ ತುಂಬಿದ್ದಾರೆ. ಸ್ಟೇಜ್‌ ಮೇಲಿದ್ದ ಚಂದನ್ ಶೆಟ್ಟಿಯವರನ್ನು ತಾವು ನೋಡಿ ಮಾತನಾಡಲೇಬೇಕು ಎಂದು ಅಜ್ಜಿಯೊಬ್ಬರು ಪಟ್ಟುಹಿಡಿದಿದ್ದಾರೆ. ಅದು...

ನಟ, ಸಿಂಗರ್ ಹಾಗೂ ಮ್ಯೂಸಿಕ್ ಡೈರೆಕ್ಟರ್ ಚಂದನ್ ಶೆಟ್ಟಿಯವರು (Chandan Shetty) ನಿನ್ನೆ ವಿಜಯಪುರ (ವಿಜಾಪುರ)ಕ್ಕೆ ಹೋಗಿದ್ದರು. ಇತ್ತೀಚೆಗೆ ಬಿಡುಗಡೆಯಾದ 'ಕಾಟನ್ ಕ್ಯಾಂಡಿ' ಮ್ಯೂಸಿಕ್ ವಿಡಿಯೋ ಸೂಪರ್ ಹಿಟ್ ಆದ ಹಿನ್ನೆಲೆಯಲ್ಲಿ ಚಂದನ್ ಅಲ್ಲಿ ಹೋಗಿ ಸ್ಟೇಜ್‌ ಶೋ ಮಾಡಿದ್ದಾರೆ. ಅಲ್ಲಿ ಅಸಂಖ್ಯಾತ ಅಭಿಮಾನಿಗಳು ಅವರನ್ನು ಸುತ್ತುವರಿದಿದ್ದು ಭಾರಿ ಪ್ರೀತಿ-ಅಭಿಮಾನ ಪ್ರದರ್ಶಿಸಿದ್ದಾರೆ. ಸ್ಟೇಜ್ ಶೋದಲ್ಲಿ ಕಾಟನ್ ಕ್ಯಾಂಡಿ ಆಲ್ಬಂ ಸಾಂಗ್‌ನಲ್ಲಿ ಅವರೊಂದಿಗೆ ಹೆಜ್ಜೆ ಹಾಕಿರುವ ನಟಿ ಸುಷ್ಮಿತಾ ಗೋಪಿನಾಥ್ ಸಹ ಹಾಜರಿದ್ದು, ಚಂದನ್‌ ಜೊತೆ 'ಥಕಧಿಮಿತ' ಮಾಡಿದ್ದಾರೆ. 

ವಿಜಯಪುರದಲ್ಲಿ ಚಂದನ್ ಶೆಟ್ಟಿ ಅವರಿಗೆ ಅಭೂತಪೂರ್ವ ಸ್ವಾಗತ ದೊರಕಿದ್ದು ಮಾತ್ರವಲ್ಲ, ಹಲವರು ಮತ್ತೆ ಮತ್ತೆ ಅಲ್ಲಿಗೆ ಬರುವಂತೆ ಬೇಡಿಕೆ ಇಟ್ಟಿದ್ದಾರಂತೆ. ಸ್ಟೇಜ್ ಮೇಲೆ ಫುಲ್ ಎನರ್ಜಿಟಿಕ್ ಆಗಿ ಡಾನ್ಸ್ ಮಾಡಿರುವ ಚಂದನ್ ಶೆಟ್ಟಿಯವರು, ಈಗಾಗಲೇ ಭಾರೀ ವೈರಲ್ ಆಗಿರುವ ಕಾಟನ್ ಕ್ಯಾಂಡಿ ಮ್ಯೂಸಿಕ್ ವಿಡಿಯೋಗೆ ಮತ್ತಷ್ಟು ಶಕ್ತಿ ತುಂಬಿದ್ದಾರೆ. ಜೊತೆಗೆ, ಕಾಟನ್ ಕ್ಯಾಂಡಿ ಇಡೀ ಟೀಮ್ ಅಲ್ಲಿ ಹಾಜರಿದ್ದು, ಚಂದನ್‌ ಅವರಿಗೆ ಸಾಥ್ ನೀಡಿ, ಅಲ್ಲಿದ್ದ ಅಭಿಮಾನಿಗಳ ಪುಳಕಕ್ಕೆ ಕಾರಣರಾಗಿದ್ದಾರೆ. 

ಟ್ಯೂನ್ ಕದ್ದ ಆರೋಪಕ್ಕೆ ಚಂದನ್ ಶೆಟ್ಟಿ ಕಿಡಿ, ಮಾನನಷ್ಟ ಮೊಕದ್ದಮೆಗೆ ಮೊರೆ?

ಇನ್ನು, ವಿಜಯಪುರದ ಈವೆಂಟ್‌ನಲ್ಲಿ ಅಚ್ಚರಿ ಹುಟ್ಟಿಸುವ ಒಂದೆರಡು ಘಟನೆಗಳು ಕೂಡ ನಡೆದಿವೆ. ಸ್ಟೇಜ್‌ ಮೇಲಿದ್ದ ಚಂದನ್ ಶೆಟ್ಟಿಯವರನ್ನು ತಾವು ನೋಡಿ ಮಾತನಾಡಲೇಬೇಕು ಎಂದು ಅಜ್ಜಿಯೊಬ್ಬರು ಪಟ್ಟುಹಿಡಿದಿದ್ದಾರೆ. ಅದು ಚಂದನ್ ಗಮನಕ್ಕೆ ಬರುತ್ತಿದ್ದಂತೆ, ಅವರೇ ಸ್ಟೇಜ್‌ನಿಂದ ಕೆಳಗಿಳಿದು ಹೋಗಿ ಅಜ್ಜಿಯನ್ನು ಮಾತನಾಡಿಸಿದ್ದಾರೆ. ಖುಷಿಯಾದ ಅಜ್ಜಿ 'ಮತ್ತೆ ಮದ್ವೆಯಾಗ್ಬೇಕ್ ಕಣಪ್ಪ ನೀನು.. ಒಳ್ಳೇ ಹುಡುಗ ನೀನು, ಒಳ್ಳೇ ಹುಡುಗಿ ಹುಡುಕಿ ಮತ್ತೆ ಮದ್ವೆಯಾಗಿ ಬಿಟ್ಟೋದವ್ಳ ಮುಂದೆ ಚೆನ್ನಾಗಿ ಬದುಕ್ಬೇಕು ನೀನು.. ' ಎಂದಿದ್ದಾರೆ. ಆ ಮಾತು ಕೇಳಿ ಚಂದನ್ ಶೆಟ್ಟಿಯವರ ಮುಖ ಕೆಂಪಾಗಿದೆ. 

ಇನ್ನೊಬ್ಬರು ಅಜ್ಜಿ ಚಂದನ್ ಶೆಟ್ಟಿಯವರ ಹಾಡು ತಾವು ಕೇಳಲೇಬೇಕು ಎಂದು ಮನೆಯಲ್ಲಿ ಹಠ ಹಿಡಿದು ಅದನ್ನು ತಮ್ಮ ಮೊಬೈಲಿಗೆ ಹಾಕಿಸಿಕೊಂಡು ಕೇಳಿಸಿಕೊಂಡರು. ಈ ಸಂಗತಿಯನ್ನು ಚಂದನ್ ಶೆಟ್ಟಿಯವರ ಅಭಿಮಾನಿಯೊಬ್ಬರು ಸ್ವತಃ ವಿಜಯಪುರದಲ್ಲಿ ಹೇಳಿಕೊಂಡಿದ್ದಾರೆ. ಈ ಎಲ್ಲ ಸಂಗತಿ ತಿಳಿದು ಚಂದನ್ ಶೆಟ್ಟಿಯವರು 'ಈ ನನ್ನ ಪ್ರಯತ್ನ ಯುಥ್ ಜೊತೆಗೆ ಬೇರೆ ಹಿರಿಯ ವಯೋಮಾನದವರಿಗೂ ತಲುಪಿರುವುದು ನನಗೆ ಖುಷಿ ಕೊಟ್ಟಿದೆ' ಎಂದಿದ್ದಾರೆ. 

ಚಂದನ್ ಶೆಟ್ಟಿ ಮೇಲೆ ಟ್ಯೂನ್ ಕದ್ದ ಆರೋಪ, 'ಕಾಟನ್ ಕ್ಯಾಂಡಿ' ಪಾರ್ಟಿ ಸಾಂಗ್‌ ಇನ್ ಟ್ರಬಲ್!

ಕಳೆದ ತಿಂಗಳು, ಅಂದರೆ 27 ಡಿಸೆಂಬರ್ 2024ರಂದು ಈ ಕಾಟನ್ ಕ್ಯಾಂಡಿ (Cotton Candy) ರಿಲೀಸ್ ಆಗಿದೆ. ಈ ಮೊದಲಿನ ಎಲ್ಲದಕ್ಕಿಂತ ವಿಶೇಷವಾದ ಸಂಗೀತದ ರಸದೌತಣ ಇದರಲ್ಲಿದೆ ಎನ್ನಬಹುದು. ಕಾರಣ, ಈ ವಿಡಿಯೋವನ್ನು ಹೆಚ್ಚು ಅದ್ದೂರಿಯಾಗಿ ಶೂಟ್ ಮಾಡಲಾಗಿದೆ, ಈ ಮ್ಯೂಸಿಕ್ ಸಾಂಗ್‌ಗೆ ಹೆಚ್ಚಿನ ತಯಾರಿ ಮಾಡಿಕೊಂಡಿದ್ದರು ಚಂದನ್ ಶೆಟ್ಟಿ. ಈ ಮ್ಯೂಸಿಕ್ ವಿಡಿಯೋವನ್ನು ಸ್ವತಃ ಚಂದನ್ ಶೆಟ್ಟಿಯವರೇ ನಿರ್ದೇಶನ ಕೂಡ ಮಾಡಿದ್ದು ಚೆಂದಚೆಂದದ ಲೊಕೇಶನ್‌ಗಳಲ್ಲಿ ಶೂಟಿಂಗ್ ಮಾಡಿದ್ದಾರೆ. 

ಈ ಬಗ್ಗೆ ಚಂದನ್ ಶೆಟ್ಟಿ ಅವರು 'ನನಗೆ ಈ ಕಾಟನ್ ಕ್ಯಾಂಡಿ ತುಂಬಾ ಮುಖ್ಯವಾದ ಪ್ರಾಜೆಕ್ಟ್ ಆಗಿದೆ. ಏಕೆಂದರೆ, ಇತ್ತೀಚೆಗೆ ನನ್ನ ಯಾವುದೇ ಹೊಸ ಸಾಂಗ್ ಬಿಡುಗಡೆ ಆಗಿಲ್ಲ. ನನ್ನ ಅಭಿಮಾನಿಗಳು ಬೇಡಿಕೆ ಇಟ್ಟಿದ್ದರು, ಆದರೆ ನನಗೆ ನನ್ನ ಬೇರೆಬೇರೆ ಕೆಲಸಗಳ ಕಾರಣಕ್ಕೆ ಕೊಡಲು ಅಸಾಧ್ಯವಾಗಿತ್ತು. ಇದೀಗ ಎಲ್ಲವೂ ಅಂದುಕೊಂಡಂತೆ ಮೂಡಿ ಬಂದಿದ್ದು, ವಿಡಿಯೋ ಸಾಂಗ್ ಲಾಂಚ್ ಬಳಿಕ ಇದೊಂದು ಟ್ರೆಂಡ್ ಸಾಂಗ್ ಆಗಿದೆ. ಇದು ನಾನು ನನ್ನ ಫ್ಯಾನ್ಸ್ ಹಾಗೂ ಮ್ಯೂಸಿಕ್ ಲವರ್‌ ಗಳಿಗೆ ಕೊಟ್ಟ ನ್ಯೂ ಈಯರ್‌ಗೆ ಗಿಫ್ಟ್' ಎಂದಿದ್ದಾರೆ. 

ಕನ್ನಡ ಸಿನಿಮಾಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸೌಂಡ್ ಮಾಡುತ್ತಿರುವ, ಟ್ರೆಂಡಿಂಗ್‌ನಲ್ಲಿರುವ ಗಾಯಕ, ಮ್ಯೂಸಿಕ್ ಕಂಪೋಸರ್, ಲಿರಿಸಿಸ್ಟ್ ಮತ್ತು ರ್‍ಯಾಪರ್ ಅಂದ್ರೆ ಅದು ಚಂದನ್ ಶೆಟ್ಟಿ ಮತ್ತೆ ಹೊಸ ಹುರುಪಿನೊಂದಿಗೆ ಪುಟಿದೇಳುತ್ತಿದ್ದಾರೆ. ತಮ್ಮ ಹೊಚ್ಚ ಹೊಸ ಶೈಲಿಯ ಕಾಟನ್ ಕ್ಯಾಂಡಿ ಹಾಡಿನ ಮೂಲಕ ಯುವ ಜನತೆ ಹುಚ್ಚೆದ್ದು ಕುಣಿಯುವಂತೆ ಮಾಡಿದ್ದಾರೆ. ಈ ಮೊದಲು ಬಂದಿದ್ದ 'ಪಾರ್ಟಿ ಆಂಥಮ್, ಚಾಕಲೇಟ್ ಗರ್ಲ್ (Chocolate Girl) ಹಾಡು, ಮೊದಲಾದ ಹಾಡುಗಳು ಸೋಶಿಯಲ್ ಮೀಡೀಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. 

ವೈರಾಗ್ಯಕ್ಕೆ ಒಳಗಾದ್ರಾ ನಿತ್ಯಾ ಮೆನನ್, ಸನ್ಯಾಸಿನಿ ಆಗೋದು ಪಕ್ಕಾ ಆಗೋಯ್ತಾ? 

ಇದೀಗ ಚಂದನ್ ಶೆಟ್ಟಿ ಹೊಸ ವರ್ಷಕ್ಕೆ ಮತ್ತೊಂದು ಪಾರ್ಟಿ ಹಾಡಿನ (party song) ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಈ ಬಾರಿಯ ಈ ಪಾರ್ಟಿ ಹಾಡಲ್ಲಿ ನಟಿ ಸುಷ್ಮಿತಾ ಗೋಪಿನಾಥ್ ಕಾಣಿಸಿಕೊಂಡಿದ್ದಾರೆ. ಸುಷ್ಮಿತಾ ಅವರು ಕನ್ನಡ ಹಾಗೂ ತೆಲುಗು ಸಿನಿಮಾಗಳು, ಜಾಹೀರಾತುಗಳಲ್ಲಿ ನಟಿಸಿ ಮೆಚ್ಚುಗೆ ಪಡೆದಿರುವ ನಟಿ. ಇದೀಗ ಚಂದನ್ ಹಾಗೂ ಸುಷ್ಮಿತಾ ಜೋಡಿ ತಮ್ಮ ಕಾಟನ್ ಕ್ಯಾಂಡಿ ಹಾಡಿನ ಮೂಲಕ ಮೋಡಿ ಮಾಡಿದ್ದಾರೆ. ಗ್ರೀಷ್ಮಾ ಗೌಡ ಅವರು ಈ ಹಾಡಿನ ಸಹ-ನಿರ್ಮಾಪಕರು.

ಚಂದನ್ ಶೆಟ್ಟಿ 2011 ರಿಂದಲೂ ತಮ್ಮ ರ್‍ಯಾಪ್ ಸಾಂಗ್ಸ್‌ಗಳ (Rap songs) ಮೂಲಕ ಸದ್ದು ಮಾಡುತ್ತಿದ್ದಾರೆ. ಇಲ್ಲಿವರೆಗೆ ಬರೋಬ್ಬರಿ 15ಕ್ಕಿಂತ ಹೆಚ್ಚು ಹಾಡುಗಳನ್ನು ಇವರು ಕಂಪೋಸ್ ಮಾಡಿ ಹಾಡಿದ್ದಾರೆ. ಜೊತೆಗೆ, ಸಿನಿಮಾಗಳಲ್ಲೂ ಹಾಡುವ ಮೂಲಕ ಅಲ್ಲೂ ಗೆಲುವಿನ ನಗೆ ಬೀರಿದ್ದಾರೆ. ಇದೀಗ ಹೊಸ ವರ್ಷಕ್ಕೆ 'ಕಾಟನ್ ಕ್ಯಾಂಡಿ' ಹೆಸರಿನ ಹೊಸ ಹಾಡಿನೊಂದಿಗೆ ಫ್ಯಾನ್ಸ್‌ ಮುಂದೆ ಬಂದಿದ್ದಾರೆ. 

ಶೃತಿ ಹಾಸನ್ ಯಾಕಷ್ಟು ಹಾಟ್? ಕಮಲ್ ಪುತ್ರಿ ಮಾಡ್ತಾಳೆ ಸಿಕ್ಕಾಪಟ್ಟೆ ವರ್ಕೌಟ್.!

ಚಂದನ್ ಶೆಟ್ಟಿಯವರ ಮೂರೇ ಮೂರು ಪೆಗ್ಗಿಗೆ ಹಾಡು, ಇವತ್ತಿಗೂ ಯುವಕರ ಫೇವರಿಟ್ ಆಗಿದೆ. ಅಷ್ಟೇ ಅಲ್ಲದೇ  'ಲಕಲಕ ಲ್ಯಾಂಬರ್ಗಿನಿ, ಟಕೀಲಾ, ತ್ರೀ ಪೆಗ್, ಪಾಟಿ ಫ್ರೀಕ್, ಟಾಪ್‌ ಟು ಗಾಂಚಾಲಿ, ಕರಾಬು, ಕೋಲುಮಂಡೆ' ಹಾಡುಗಳು ಸಖತ್ ಸೌಂಡ್ ಮಾಡಿದ್ದವು. ಇದೀಗ ಹೊಸ ಹಾಡು 'ಕಾಟನ್ ಕ್ಯಾಂಡಿ' ಮೂಲಕ ಹೊಸ ವರ್ಷದ ಗಿಫ್ಟ್ ಕೊಟ್ಟು ಫ್ಯಾನ್ಸ್ ಹಾಗೂ ಸಿನಿಪ್ರೇಕ್ಷಕರನ್ನು ಕುಣಿಸುತ್ತಿದ್ದಾರೆ ಚಂದನ್ ಶೆಟ್ಟಿ. ಇದೀಗ, ತಮ್ಮ ಕಾಟನ್ ಕ್ಯಾಂಡಿಯನ್ನು ಇನ್ನಷ್ಟು ಹೆಚ್ಚು ಜನರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಚಂದನ್ ಶೆಟ್ಟಿ.

 
 
 
 
 
 
 
 
 
 
 
 
 
 
 

A post shared by Bijapur places (@bijapur_places)

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?