ಕೋಟಿ ಹಣ ವಂಚನೆ ಆರೋಪಕ್ಕೆ ಓಂ ಪ್ರಕಾಶ್ ರಾವ್ ಮೊದಲ ಪ್ರತಿಕ್ರಿಯೆ- 'ಹೌದು, ಹಣ ತೆಗೆದುಕೊಂಡಿರೋದು ನಿಜ'

Published : Aug 22, 2026, 03:00 PM IST
Om Prakash Rao

ಸಾರಾಂಶ

ಅವರ ಜೊತೆ ಮಾತಿಗೆ ಮಾತು ಬೆಳೆದು ಚಿಕ್ಕ ಪುಟ್ಟ ವೈಮನಸ್ಯ ಆಗಿದೆ. ಅದಕ್ಕೆ ಅವರು ಈ ರೀತಿ ಆರೋಪ ಮಾಡುತ್ತಿದ್ದಾರೆ. ಸಿನಿಮಾ ನಿಧಾನ ಆಗಿದ್ದಕ್ಕೆ‌ ಈ ರೀತಿ ಜಗಳ ಆಗಿದೆ. ಧಮ್ಕಿ ಹಾಕೋಕೆ ನಾನೇನು ರೌಡಿನಾ..? ಇದು ಜಗಳ ಮಾಡಿ ಮಾತುಕತೆ ಮಾಡುವಂತದ್ದಲ್ಲ…

Om Prakash Rao fraud case-Sandalwood director cheating allegations-Om Prakash Rao latest statement-Om Prakash Rao response: ಸ್ಯಾಂಡಲ್‌ವುಡ್ ನಿರ್ದೇಶಕ ಓಂ ಪ್ರಕಾಶ್ ರಾವ್ ಮೇಲೆ ಮಾಡಲಾಗಿರುವ ರೂ. 3.85 ಕೋಟಿ ವಂಚನೆ ಆರೋಪಕ್ಕೆ ಸ್ವತಃ ನಿರ್ದೇಶಕರ ಪ್ರತಿಕ್ರಿಯೆ.

ಸ್ಯಾಂಡಲ್‌ವುಡ್ ನಿರ್ದೇಶಕ ಓಂ ಪ್ರಕಾಶ್ ರಾವ್ ಮೇಲೆ 3.85 ಕೋಟಿ ವಂಚನೆ ಆರೋಪ ಬಂದಿರುವುದು, ಭಾಸ್ಕರ್ ಶೆಟ್ಟಿ ಎಂಬವರು ದೂರು ನೀಡಿರುವುದು ಗೊತ್ತೇ ಇದೆ. ಇದೀಗ ಈ ಬಗ್ಗೆ 'ಸುವರ್ಣ ನ್ಯೂಸ್ ಡಿಜಿಟಲ್‌'ಗೆ ಸ್ವತಃ ಓಂ ಪ್ರಕಾಶ್ ರಾವ್ ಮೊಟ್ಟಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಈ ಬಗ್ಗೆ ಓಂ ಪ್ರಕಾಶ್ ರಾವ್ ಅವರು 'ಹೌದು, ಹಣ ತೆಗೆದುಕೊಂಡಿರುವುದು ನಿಜ. ಸಮಯಕ್ಕೆ ಸರಿಯಾಗಿ ಕೊಡೋದಕ್ಕೆ ಆಗಲಿಲ್ಲ ಏನ್ ಮಾಡ್ಲಿ? ಭಾಸ್ಕರ್ ಶೆಟ್ಟಿ ಪ್ರಚಾರಕ್ಕಾಗಿ ಹೀಗೆ ಮಾಡಿದ್ದಾರೆ. ಅವರಿಗೆ ನಾನು ಹೀರೋ ಅಂತ ಹೇಳಬೇಕಂತೆ. ಅದು ಸಾಧ್ಯವಿಲ್ಲ. ಇನ್ನು 10 ವರ್ಷ ಆದರೂ ನಾನು ಅವರನ್ನು 'ಹೀರೋ' ಅಂತ ಪರಿಚಯಿಸಲ್ಲ.

ವಾಸುದೇವ್ ರೆಡ್ಡಿ ದೇವರಂತ ಮನುಷ್ಯ. ನನ್ನ ಹೆಂಡತಿ, ಮಗನ ಹೆಸರನ್ನು ಬಳಕೆ ಮಾಡಿದ್ದಾರೆ. ಇದು ಬೇಸರ ಆಯ್ತು , ಹೀಗೆಲ್ಲ ಮಾಡಿದರೆ ದುಡ್ಡು ಸಿಗತ್ತಾ..? ಹಣವನ್ನು ನಾನೇ ಕೊಡಬೇಕು' ಎಂದಿದ್ದಾರೆ. ಸದ್ಯ, ಓಂ ಪ್ರಕಾಶ್ ರಾವ್ ಅವರು ತಾವು ಹಣವನ್ನು ಪಡೆದಿದ್ದು ನಿಜ ಎಂದು ಒಪ್ಪಿಕೊಂಡಿದ್ದು, ಈ ಕೇಸ್ ಮುಂದೆ ಯಾವ ದಿಕ್ಕಿನಲ್ಲಿ ಹೋಗಲಿದೆ ಎಂಬುದನ್ನು ಕಾದು ನೋಡಬೇಕಿದೆ!

ಹಿರಿಯ ನಿರ್ದೇಶಕ ಓಂ ಪ್ರಕಾಶ್ ರಾವ್ ಈ ಆರೋಪದ ಬಳಿಕ ಪತ್ರಿಕಾಗೋಷ್ಠಿ ಕರೆದಿದ್ದು, ಅದರಲ್ಲಿ ಹೀಗೆ ಹೇಳಿದ್ದಾರೆ. 'ನಾನು ಅವರಿಗೆ ಧಮ್ಕಿ ಹಾಕಿಲ್ಲ.. ಸಿನಿಮಾ ಮಾಡೋದು ತಡ ಆಗಿರೋದ್ರಿಂದ.. ಈ ರೀತಿ ಬೇಸರ ಮಾಡಿಕೊಂಡಿದ್ದಾರೆ.. ಆ ಸಿನಿಮಾದಲ್ಲಿ ಭಾಸ್ಕರ್ ಶೆಟ್ಟಿ ಕೂಡ ನಟಿಸಿದ್ದಾರೆ.. ಅವರನ್ನು ಹೀರೋ ಅಂತಾ ಪ್ರಮೋಟ್ ಮಾಡಿಲ್ಲ ಅನ್ನೋದಕ್ಕೆ ಈ ರೀತಿ ಆರೋಪ ಮಾಡಿದ್ದಾರೆ..

ಇನ್ನೂ 5 ದಿನಗಳ ಶೂಟಿಂಗ್ ಬಾಕಿಯಿದೆ.. ಅವ್ರು ಫೈನಾನ್ಸ್ ಕೊಡ್ಸಿದ್ದಾರೆ ಹೊರತು.. ಅವ್ರಿಂದ ಅಷ್ಟು ದುಡ್ಡು ಪಡೆದಿಲ್ಲ.. ಅವ್ರು ಒಂದು ಪೊಲೀಸ್ ಪಾತ್ರದಲ್ಲಿ ನಟಿಸಿದ್ದಾರೆ.. ಹಾಗಂತ ಅವ್ರನ್ನು ಹೀರೋ ಅಂತಾ ನಾನು ಪ್ರಮೋಟ್ ಮಾಡಲ್ಲ.. ಸುಮ್ಮನೆ ಸಿನಿಮಾ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ.. ಬೇರೆ ಸಿನಿಮಾ ಮಾಡಬೇಡಿ ಅಂತ ಅವರು ಹೇಳಿದ್ರೆ ಕ್ಯಾಕರ್ಸಿ ಮುಖಕ್ಕೆ ಉಗಿಯುತ್ತೇನೆ..

ಅವರ ಜೊತೆ ಮಾತಿಗೆ ಮಾತು ಬೆಳೆದು ಚಿಕ್ಕ ಪುಟ್ಟ ವೈಮನಸ್ಯ ಆಗಿದೆ. ಅದಕ್ಕೆ ಅವರು ಈ ರೀತಿ ಆರೋಪ ಮಾಡುತ್ತಿದ್ದಾರೆ. ಸಿನಿಮಾ ನಿಧಾನ ಆಗಿದ್ದಕ್ಕೆ‌ ಈ ರೀತಿ ಜಗಳ ಆಗಿದೆ. ಧಮ್ಕಿ ಹಾಕೋಕೆ ನಾನೇನು ರೌಡಿನಾ..? ಇದು ಜಗಳ ಮಾಡಿ ಮಾತುಕತೆ ಮಾಡುವಂತದ್ದಲ್ಲ. ಯಾರೋ ಒಬ್ಬರ ಪ್ರಚಾರಕ್ಕೆ ಈ ರೀತಿ ಆಗಬಾರದು.. ನಾನು 10 ಸಿನಿಮಾ ಮಾಡುತ್ತೇನೆ ನೀವ್ಯಾರು ಕೇಳೋಕೆ? ಈ ಚಿತ್ರಕ್ಕೆ ಹೀರೋ, ಹೀರೋಯಿನ್ ಎಲ್ಲಾನೂ ನಿಮಿಕಾ‌ ರತ್ನಾಕರ್..' ಎಂದಿದ್ದಾರೆ 'ಫೀನಿಕ್ಸ್' ನಿರ್ದೇಶಕ ಓಂ ಪ್ರಕಾಶ್ ರಾವ್.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಟ-ನಿರ್ದೇಶಕ ಓಂ ಪ್ರಕಾಶ್ ರಾವ್ ವಿರುದ್ಧ 3.85 ಕೋಟಿ ವಂಚಿಸಿದ ಆರೋಪ – ಕೇಸ್ ದಾಖಲು
ಟಾಕ್ಸಿಕ್ ಸಿನಿಮಾದ ಯಾವುದೇ ದೃಶ್ಯಕ್ಕೆ ಕಟ್ ಇಲ್ಲ, CBFC ಪತ್ರದ ಬೆನ್ನಲ್ಲೇ ಧುರಂಧರ್‌ಗೆ ಹೋಲಿಸಿದ ಫ್ಯಾನ್ಸ್