
ಕನ್ನಡ ಚಿತ್ರರಂಗದಲ್ಲಿ ಮೀ ಟೂ ಎಂಬ ದೊಡ್ಡ ಅಲೆ ಎಬ್ಬಿಸಿದ್ದು ನಟಿ ಶ್ರುತಿ ಹರಿಹರನ್. ದೊಡ್ಡ ಸ್ಟಾರ್ ನಟನ ಎದುರು ತೊಡೆ ತಟ್ಟಿದ್ದು ದೊಡ್ಡ ಸುದ್ದಿ ಆಗಿತ್ತು. ಆ ಸಮಯದಲ್ಲಿ ಮಾನಸಿಕ ಆರೋಗ್ಯ ಹೇಗಿತ್ತು? ಈ ಆ ಘಟನೆ ಬಗ್ಗೆ ಯೋಚನೆ ಮಾಡಿದರೆ ಏನನಿಸುತ್ತದೆ? ಆ ಘಟನೆಯಿಂದ ಇಂಡಸ್ಟ್ರಿ ಬದಲಾಗಿದ್ಯಾ? ಹೀಗೆ ಸಾಕಷ್ಟು ವಿಚಾರಗಳ ಬಗ್ಗೆ ನಟಿ ಶ್ರುತಿ ಹರಿಹರನ್ ಹಂಚಿಕೊಂಡಿದ್ದಾರೆ.
'ನನ್ನ ಚಿತ್ರರಂಗ ಆಗಲೇ ದೊಡ್ಡ ಮಟ್ಟದಲ್ಲಿ ಬೆಳೆದಿತ್ತು. ಹೀಗಾಗಿ ಸಣ್ಣ ಸಣ್ಣದು ಕೂಡ ದೊಡ್ಡದಾಗಿ ತೋರಿಸಲಾಗುತ್ತದೆ. ಮೀಟೂ ಮೋಮೆಂಟ್‌ನಲ್ಲಿ ನಾನು ಹೇಳಿದ ವ್ಯಕ್ತಿ ಸಿಕ್ಕಾಪಟ್ಟೆ ದೊಡ್ಡ ಸ್ಟಾರ್..ಸೂಪರ್ ಸ್ಟಾರ್. ಆ ಘಟನೆಯನ್ನು ಹಿಂದೆ ತಿರುಗೆ ನೋಡಿದಾಗಲೆಲ್ಲಾ ಇದನ್ನು ಬೇರೆ ರೀತಿಯಲ್ಲಿ ಹ್ಯಾಂಡಲ್ ಮಾಡಬಹುದಿತ್ತಾ ಅಂತ. ಏಕೆಂದರೆ ಕೆಲವೊಮ್ಮೆ ನಮ್ಮ ಕೈಯಿಂದ ಕಂಟ್ರೋಲ್ ಬಿಟ್ಟು ಹೋಗಿ ಬಿಡುತ್ತದೆ. ಏನ್ ಆಗುತ್ತಿದೆ ಅಂತಾನೇ ಗೊತ್ತಾಗುವುದಿಲ್ಲ. ಹೇಳ್ಬೇಕಾ ಬೇಡವಾ? ಇದರಿಂದ ಏನ್ ಆಗುತ್ತೆ? ಇದರ ಹಿಂದಿರುವ ಪ್ರಭಾವ ಏನು? ಸಾಕಷ್ಟು ಹೆಣ್ಣುಮಕ್ಕಳು ಸತ್ಯ ಹೇಳುತ್ತಿದ್ದಾರೆ ನಿಜಕ್ಕೂ ಅವರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ನಾನು ಈ ಘಟನೆಯನ್ನು ಎಕ್ಸ್‌ಪ್ರೆಸ್ ಮಾಡುವ ಮುನ್ನ ಅಂದುಕೊಳ್ಳುತ್ತಿದ್ದರು ಕನ್ನಡ ಇಂಡಸ್ಟ್ರಿ ಕೂಡ ಬಹಳ ಸೇಫ್ ಅಂತ. ಇದು ಇಂಡಸ್ಟ್ರಿ ವಿಚಾರ ಅಲ್ಲ individual ವಿಚಾರ. ಇದೊಂದು ದೊಡ್ಡ ಕಥೆ..ಯಾಕೆ ಆಯ್ತು ಏನ್ ಆಯ್ತು ಅಂತ ಮಾತನಾಡಿದರೂ ಸಾಲದು ಅಷ್ಟು ಇರುತ್ತದೆ. ಹಿಂದೆ ತಿರುಗಿ ನೋಡಿದಾಗ ನನ್ನ ಬಗ್ಗೆ ತುಂಬಾ ಹೆಮ್ಮೆ ಆಗುತ್ತದೆ. ನಾನು ಅವತ್ತು ಅದನ್ನು ಮಾಡಿರಲಿಲ್ಲ ಅಂದಿದ್ದರೆ ಖಂಡಿತ ಇಂಡಸ್ಟ್ರಿಯಲ್ಲಿ ಬದಲಾವಣೆ ನೋಡುತ್ತಿರಲಿಲ್ಲ. ನಾನು ಮಾತ್ರವಲ್ಲ ಹಲವು ಮಹಿಳಾ ಆರ್ಟಿಸ್ಟ್‌ಗಳ ಜೊತೆ ಮಾತನಾಡಿದ್ದೀನಿ. ಹೆಣ್ಣು ಮಕ್ಕಳ ಜೊತೆ ವರ್ತಿಸುವ ಮುನ್ನ ಈಗ ತುಂಬಾ ಯೋಚನೆ ಮಾಡುತ್ತಾರೆ. ಆ ಚಿಕ್ಕ ಹೆದರಿಕೆ ಆ ಚಿಕ್ಕ ಯೋಚನೆ ತುಂಬಾ ಮುಖ್ಯವಾಗುತ್ತದೆ. ನಾಳೆ ನನ್ನ ಮಗಳು ಅಲ್ಲ ಯಾರ ಮಕ್ಕಳೇ ಆಗಲಿ ಹೆದರಿಕೊಳ್ಳಬಾರದು. ಸಿನಿಮಾ ಇಂಡಸ್ಟ್ರಿ ಸೇಫ್ ಅಲ್ಲ ಕೊಡಳು ಅಂತಿದ್ದರು ಯಾಕೆ? ಈ ನೋಡಿ ಎಷ್ಟು ಬದಲಾಗುತ್ತದೆ' ಎಂದು ರಾಪಿಡ್ ರಶ್ಮಿ ಯುಟ್ಯೂಬ್ ಚಾನೆಲ್‌ನಲ್ಲಿ ಶ್ರುತಿ ಮಾತನಾಡಿದ್ದಾರೆ.
ಚೈತ್ರಾ ವಾಸುದೇವ್ 2ನೇ ಮದುವೆ ಮಾಡಿಕೊಂಡ ಸ್ಥಳದಲ್ಲೇ ಮಾಜಿ ಪತಿಯ 2ನೇ ಮದುವೆ; ತಲೆ ಕೆಡಿಸಿಕೊಂಡ ನೆಟ್ಟಿಗರು
'ನನಗೆ ಅನಿಸಿದ್ದು ನಾನು ಹೇಳಲೇ ಬೇಕು. ಈಗ ನನಗೆ ಹೆದರಿಕೆ ಇಲ್ಲ. ಒಂತ ಹಂತ ತಲುಪುವವರೆಗೂ ಅಷ್ಟೇ ಭಯ ಆಮೇಲೆ ಹೋಗುತ್ತದೆ. ಈಗ ನನ್ನ ಕೆಲಸ ಮಾತನಾಡಬೇಕು. ಸತ್ಯ ಹೇಳುವುದಕ್ಕೆ ಯಾಕೆ ಹೆದರಿಕೊಳ್ಳಬೇಕು? ನಡೆದಿರುವ ಘಟನೆಗಳ ಬಗ್ಗೆ ಯಾವುದೇ ವಿಷಾದವಿಲ್ಲ. ಮೀ ಟೂ ನಂತರ ನಾನು ಪ್ರೆಗ್ನೆಂಟ್ ಆದೆ ಆಗ ಸಂಪೂರ್ಣ ಬ್ರೇಕ್ ತೆಗೆದುಕೊಂಡು ಫ್ಯಾಮಿಲಿ ಮಗು ಜೊತೆ ಚೆನ್ನಾಗಿ ಸಮಯ ಕಳೆದೆ. ಬೇಸರ ಖುಷಿ ಆದರೂ ವ್ಯಕ್ತ ಪಡಿಸಿಕೊಂಡಿದ್ದೆ. ಆ ಸಮಯಲ್ಲಿ ನಾನು ಯಾರೊಟ್ಟಿಗೂ ಮಾತನಾಡುತ್ತಿರಲಿಲ್ಲ. ಈಗ ನನ್ನ ಕೆಲಸಗಳು ನಡೆಯುತ್ತಿದೆ ತುಂಬಾ ಖುಷಿಯಾಗಿದ್ದೀನಿ. ನನ್ನ ಮಗುವಿಗೆ 8 ತಿಂಗಳು ಅಗುತ್ತಿದ್ದಂತೆ ಕೊರೋನಾ ಶುರುವಾಯ್ತು. ಮಾನಸಿಕವಾಗಿ ಸಂಪೂರ್ಣವಾಗಿ ಹೀಲ್ ಆಗಿದ್ದೀನಿ. ಈ ನಾಲ್ಕು ವರ್ಷ ತುಂಬಾ ಸಮಯ ತೆಗೆದುಕೊಂಡಿದ್ದೀನಿ. ನಾನು ಡಿಪ್ರೆಸ್ ಆಗಿದ್ನಾ ಇಲ್ವಾ ಗೊತ್ತಿಲ್ಲ ಆದರೆ ಆತಂಕ ಇತ್ತು' ಎಂದು ಶ್ರುತಿ ಹರಿಹರನ್ ಹೇಳಿದ್ದಾರೆ.
ಗಂಡ ಯಾವಾಗಲೂ ಅದು ಮಾಡು ಇದು ಮಾಡು ಅಂತ ಕೆಲಸ ಹೇಳಬಾರದು; ದಿಯಾ ನಟಿ ಖುಷಿ ಹೇಳಿಕೆ ವೈರಲ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.