ರಿಯಾಲಿಟಿ ಶೋ ಆಧರಿಸಿದ ಕತೆಯ ಚಿತ್ರ 'ಮೈಲಾಪುರ'; ಅತಿಥಿ ಪಾತ್ರದಲ್ಲಿ ನಿಧಿ ಸುಬ್ಬಯ್ಯ!

Kannadaprabha News   | Asianet News
Published : Mar 19, 2021, 09:23 AM IST
ರಿಯಾಲಿಟಿ ಶೋ ಆಧರಿಸಿದ ಕತೆಯ ಚಿತ್ರ 'ಮೈಲಾಪುರ'; ಅತಿಥಿ ಪಾತ್ರದಲ್ಲಿ ನಿಧಿ ಸುಬ್ಬಯ್ಯ!

ಸಾರಾಂಶ

ಒಂದು ರಿಯಾಲಿಟಿನಲ್ಲಿ ಶೋ ಹಿಂದೆ ಏನೆಲ್ಲ ಕತೆಗಳು ನಡೆಯಬಹುದು ಎನ್ನುವ ಕುತೂಹಲ ಇದ್ದೇ ಇದೆ. ಕಿರುತೆರೆ ಜಗತ್ತಿನಲ್ಲಿ ಬಹಳಷ್ಟುರಿಯಾಲಿಟಿ ಶೋಗಳು ಮೂಡಿ ಬರುತ್ತಿರುವ ಹಿನ್ನೆಲೆಯಲ್ಲಿ ಈ ಕುತೂಹಲಕ್ಕೆ ಮತ್ತಷ್ಟುಮಹತ್ವ ಇದ್ದೇ ಇರುತ್ತದೆ. ಈ ಕಾರಣಕ್ಕಾಗಿಯೇ ಏನೋ, ಇದೇ ಪ್ರಶ್ನೆಯನ್ನಿಟ್ಟುಕೊಂಡು ‘ಮೈಲಾಪುರ’ ಎನ್ನುವ ಸಿನಿಮಾ ರೂಪಗೊಂಡಿದೆ

ಮೈಲಾಪುರ ಎನ್ನುವ ಹಳ್ಳಿಯಲ್ಲಿ ನಡೆಯುವ ಕತೆ ಇದಾಗಿದ್ದು, ರಿಯಾಲಿಟಿ ಶೋ ಹಿಂದಿನ ತಂತ್ರ, ಕುತಂತ್ರ, ರೋಚಕತೆ, ಸಾಹಸಗಳನ್ನು ಈ ಸಿನಿಮಾ ಬಿಂಬಿಸುತ್ತದೆ. ಫಣೀಶ್‌ ಭಾರದ್ವಾಜ್‌ ಈ ಚಿತ್ರದ ನಿರ್ದೇಶಕರು. ಅಂತರಿಕ್ಷ ವಿ ಈ ಚಿತ್ರವನ್ನು ನಿರ್ಮಿಸಿದ್ದು, ಮೊನ್ನೆಯಷ್ಟೆಚಿತ್ರತಂಡ ಮಾಧ್ಯಮಗಳ ಮುಂದೆ ಬಂದು ಚಿತ್ರದ ಕುರಿತು ಹೇಳಿಕೊಂಡಿತು.

ಹಾಲು ಕರೆಯೋಕೆ ಗೊತ್ತಿದ್ದರೆ ಮಾತ್ರ ದನ ಸಾಕಬೇಕು; ದರ್ಶನ್‌ ಹೇಳಿದ ಕತೆ! 

ಹಿರಿಯ ಸಂಗೀತ ನಿರ್ದೇಶಕ ರಾಜನ್‌ ನಾಗೇಂದ್ರ ಖ್ಯಾತಿಯ ನಾಗೇಂದ್ರ ಅವರ ಪತ್ನಿ ಜಯಲಕ್ಷ್ಮೀ ಹಾಗೂ ಸಾಲುಮರದ ತಿಮ್ಮಕ್ಕ, ಅಪ್ಪು ಯುವ ಬ್ರಿಗೇಡ್‌ನ ಮುರಳೀಧರ್‌, ಲೇಡೀಸ್‌ ಕ್ಲಬ್‌ನ ಶುಭಾ ಅತಿಥಿಗಳಾಗಿ ಭಾಗವಹಿಸಿದ್ದರು. ‘ರಿಯಾಲಿಟಿ ಶೋವೊಂದನ್ನು ಆಧರಿಸಿ ಈ ಸಿನಿಮಾ ಮಾಡಿದ್ದೇನೆ. ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳಲು ಬರುವ ಸ್ಪರ್ಧಿಗಳ ಸುತ್ತ ಈ ಸಿನಿಮಾ ಸಾಗುತ್ತದೆ. ಇಲ್ಲಿ ಆಪ್ತವಾದ ಪ್ರೇಮ ಕತೆಯೂ ಇದೆ’ ಎಂದರು ಫಣೀಶ್‌.

ಮೂಡಿಗೆರೆ ರಾಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಪುನೀತ್‌ ರಾಜ್‌ಕುಮಾರ್! 

ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರೆಲ್ಲರೂ ಕುಳಿತು ನೋಡಬಹುದಾದ ಕತೆ ಇದರಲ್ಲಿದೆ ಎಂಬುದು ನಿರ್ಮಾಪಕರ ಮಾತು. ಭರತ್‌ ಕುಮಾರ್‌, ಐಶ್ವರ್ಯ ಸಿಂಧೋಗಿ ಚಿತ್ರದ ಮುಖ್ಯ ಜೋಡಿ. ನಿಧಿ ಸುಬ್ಬಯ್ಯ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ನನ್ನದು ಚಿತ್ರದಲ್ಲಿ ಭಗ್ನ ಪ್ರೇಮಿಯ ಪಾತ್ರ’ ಎಂದು ಭರತ್‌ ಕುಮಾರ್‌ ಹೇಳಿಕೊಂಡರು. ಚಿತ್ರತಂಡದ ಮಾತುಕತೆಗೂ ಮುನ್ನ ನಿಧಿ ಸುಬ್ಬಯ್ಯ ಕಾಣಿಸಿಕೊಂಡಿರುವ ಹಾಡಿನ ಪ್ರದರ್ಶನ ಮಾಡಲಾಯಿತು. ಆನಂದ್‌ ಇಳಯರಾಜಾ ಛಾಯಾಗ್ರಾಹಣ ಮಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ