
'ಉಗ್ರಂ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ದೇಶಕನಾಗಿ ಎಂಟ್ರಿ ಕೊಟ್ಟ ಪ್ರಶಾಂತ್ ನೀಲ್, ತಮ್ಮ ಎರಡನೇ ಚಿತ್ರ 'ಕೆಜಿಎಫ್' ಮೂಲಕ ಇಡೀ ಭಾರತವೇ ತನ್ನ ಕಡೆ ತಿರುಗಿ ನೋಡುವಂತೆ ಮಾಡಿದ್ದಾರೆ. ಚಾಪ್ಟರ್ 1ರಲ್ಲಿ ನೀಲ್ ಕೈ ಚಳಕಕ್ಕೆ ಬೆರಗಾದ ದಕ್ಷಿಣ ಭಾರತೀಯ ಚಿತ್ರರಂಗ ಇದೀಗ ಈ ಫೋಟೋ ನೋಡಿ ಶಾಕ್ ಆಗಿದ್ದಾರೆ.
ಹೌದು! ನಿರ್ದೇಶಕ ಪ್ರಶಾಂತ್ ನೀಲ್ ವ್ಯಾಕ್ಸಿನ್ ಪಡೆದು ಕೊಂಡಿದ್ದಾರೆ. 'ಕೊನೆಗೂ ವ್ಯಾಕ್ಸಿನ್ ಪಡೆದುಕೊಂಡೆ. ನೀವು ತೆಗೆದುಕೊಂಡಿಲ್ಲವಾದರೆ ದಯವಿಟ್ಟು ಸ್ಲಾಟ್ ಬುಕ್ ಮಾಡಿಕೊಂಡು ನೀವು, ನಿಮ್ಮ ಕುಟುಂಬದವರು ತೆಗೆದುಕೊಳ್ಳಿ,' ಎಂದು ಬರೆದುಕೊಂಡಿದ್ದಾರೆ. ಫೋಟೋದಲ್ಲಿ ನೋಡಿದ ಹಾಗೆ ನೀಲ್ ವ್ಯಾಕ್ಸಿನ್ ಪಡೆಯುವಾಗ ಕಣ್ಣು ಮುಚ್ಚಿಕೊಂಡು ಕೂತಿದ್ದಾರೆ.
Zooಗಳಿಗೆ 40 ಲಕ್ಷ ರು. ಸಂಗ್ರಹ; ದರ್ಶನ್‌ಗೆ ಕೃತಜ್ಞತೆ ತಿಳಿಸಿದ ಲಿಂಬಾವಳಿ!
ನೀಲ್ ಫೋಟೋ ಹಂಚಿಕೊಂಡಿನ್ನು ಮೂರು ಗಂಟೆಗಳಾಗಿಲ್ಲ, ಅಷ್ಟರಲ್ಲಿಯೇ ಸಿಕ್ಕಾಪಟ್ಟೆ ವೈರಲ್ ಅಗಿದೆ. 'ಇತಿಹಾಸ ಸೃಷ್ಟಿಸಿದ ನಿಮಗೆ ಸೂಜಿ ಭಯವೇ?' , 'ರಾಕಿ ಬಾಯ್ ನಿಮ್ಮನ್ನು ಕಾಪಾಡಲು ಬರುತ್ತಾನೆ' , 'ನರ್ಸ್ ಕಂಡರೆ ನಾಚಿಕೆ ಇರಬೇಕು,' ಎಂದು ಕಾಮೆಂಟ್ ಮಾಡಿದ್ದಾರೆ.
ಕೆಲವು ದಿನಗಳ ಹಿಂದೆ ಹುಟ್ಟುಹಬ್ಬ ಆಚರಿಸಿಕೊಂಡ ನೀಲ್‌ಗೆ ಇಡೀ ಭಾರತೀಯ ಚಿತ್ರರಂಗದ ಸ್ಟಾರ್ ನಟರು ವಿಭಿನ್ನವಾಗಿ ಶುಭ ಹಾರೈಸಿದ್ದರು. ಕೆಜಿಎಫ್ ಚಾಪ್ಟರ್ 2ರ ನಿರೀಕ್ಷೆಯಲ್ಲಿರುವುದರ ಬಗ್ಗೆ ತಿಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.