
ಬೆಂಗಳೂರು: ಹೊಂಬಾಳೆ ಫಿಲಂಸ್ ಸಂಸ್ಥೆಯ ಮುಖ್ಯಸ್ಥ, ಕೆಜಿಎಫ್ ಸಿನಿಮಾ ನಿರ್ಮಾಪಕ ವಿಜಯ್ ಕಿರಗಂದೂರು ಚಲನಚಿತ್ರ ಕಾರ್ಮಿಕರ ಒಕ್ಕೂಟಕ್ಕೆ 32 ಲಕ್ಷ ರು. ನೆರವು ನೀಡಿದ್ದಾರೆ. ಈ ಮೂಲಕ ಸಂಕಷ್ಟದಲ್ಲಿರುವ ಸಿನಿಮಾ ಕಾರ್ಮಿಕರ ನೆರವಿಗೆ ಧಾವಿಸಿದ್ದಾರೆ.
ಹುಟ್ಟೂರು ಮಂಡ್ಯದ ನೆರವಿಗೆ ಮುಂದಾದ ಕೆಜಿಎಫ್ ನಿರ್ಮಾಪಕ
ಇಂಥಾ ಸಂಕಷ್ಟಸಮಯದಲ್ಲಿ ಸಿನಿಮಾ ಕಾರ್ಮಿಕರಿಗೆ ಧ್ವನಿಯಾಗಿದ್ದಕ್ಕೆ, ಅವರಿಗೆ ಸಹಾಯ ಹಸ್ತ ಚಾಚಿದ್ದಕ್ಕೆ ವಿಜಯ್ ಕಿರಗಂದೂರು ಹಾಗೂ ಹೊಂಬಾಳೆ ಫಿಲಂಸ್‌ಗೆ ಕೃತಜ್ಞತೆ ಸಲ್ಲಿಸುತ್ತೇನೆ.- ಸಾ.ರಾ. ಗೋವಿಂದು, ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ
ಪ್ರಸ್ತುತ ಕಾರ್ಮಿಕರ ಒಕ್ಕೂಟದಲ್ಲಿ 21 ವಿಭಾಗಗಳಿವೆ. ಅದರಲ್ಲಿ 3200ರಷ್ಟುಸಿನಿಮಾ ಕಾರ್ಮಿಕರಿದ್ದಾರೆ. ಪ್ರತಿಯೊಬ್ಬರ ಬ್ಯಾಂಕ್ ಅಕೌಂಟ್ ಖಾತೆಯ ವಿವರಗಳನ್ನು ತರಿಸಿಕೊಂಡು, ತಲಾ 1000 ರು.ನಂತೆ ಅಷ್ಟೂಕಾರ್ಮಿಕರ ಖಾತೆಗೂ ಮೊತ್ತವನ್ನು ವರ್ಗಾಯಿಸಲಾಗಿದೆ. ವಿಜಯ ಕಿರಗಂದೂರು ಅವರ ಈ ನೆರವಿಗೆ ಚಲನಚಿತ್ರ ಕಾರ್ಮಿಕರ ಒಕ್ಕೂಟದ ಕಾರ್ಯದರ್ಶಿ ರವೀಂದ್ರನಾಥ್ ಕೃತಜ್ಞತೆ ಸಲ್ಲಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.