ಮತ್ತೆ ಡ್ರಗ್‌ ಮಾಫಿಯಾ; ಬಿಡುಗಡೆಯ ಹಾದಿಯಲ್ಲಿ ಜಾಕ್‌ಪಾಟ್‌!

Kannadaprabha News   | Asianet News
Published : Dec 08, 2020, 09:31 AM IST
ಮತ್ತೆ ಡ್ರಗ್‌ ಮಾಫಿಯಾ; ಬಿಡುಗಡೆಯ ಹಾದಿಯಲ್ಲಿ ಜಾಕ್‌ಪಾಟ್‌!

ಸಾರಾಂಶ

ಚಿತ್ರೀಕರಣ ಮುಗಿಸಿದರೂ ಕೊರೋನಾ ಕಾರಣಕ್ಕೆ ಬಿಡುಗಡೆಯ ಭಾಗ್ಯ ದೊರೆಯದ ‘ಜಾಕ್‌ಪಾಟ್‌’ ಚಿತ್ರ ಇದೇ ತಿಂಗಳಲ್ಲಿ ಪ್ರೇಕ್ಷಕರ ಮುಂದೆ ಬರುವ ತಯಾರಿ ಮಾಡಿಕೊಳ್ಳುತ್ತಿದೆ. 

 ಈ ಹಿಂದೆ ‘ಎಟಿಎಂ’ ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದ ಅಮರ್‌ ಅವರ ಎರಡನೇ ಚಿತ್ರವಿದು.

ನವೀನ್‌ ಚನ್ನರಾಯಪಟ್ಟಣ ಈ ಸಿನಿಮಾದ ಪ್ರದಾನ ಪಾತ್ರದಾರಿ. ಚಂದ್ರು ಬಿ ಗೌಡ ಪೊಲೀಸ್‌ ಅಧಿಕಾರಿಯಾಗಿ ಬಣ್ಣ ಹಚ್ಚಿದ್ದಾರೆ. ಶೋಭಿತಾ ಶಿವಣ್ಣ, ಕುಶಾಂತ್‌, ಟಿ ಎಸ್‌ ನಾಗಾಭರಣ ಮುಂತಾದವರು ‘ಜಾಕ್‌ಪಾಟ್‌’ನ ಇತರೆ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಭಿನಂದನ್‌ ಶೆಟ್ಟಿಅವರು ಛಾಯಾಗ್ರಾಹಣ ಮಾಡಿದ್ದಾರೆ. ಮೂರು ಹಾಡುಗಳನ್ನು ಸಂಯೋಜಿಸಿರುವುದು ರವಿ ದೇವ್‌.‘ಮಾಚ್‌ರ್‍ ಹೊತ್ತಿಗೆ ಕೊರೋನಾ ಶುರುವಾಗಿ ಶೂಟಿಂಗ್‌ಗಳು ಅರ್ಧಕ್ಕೆ ನಿಂತವು. ಹೀಗಾಗಿ ತಡವಾಗಿಯಾದರೂ ಶೂಟಿಂಗ್‌ ಸೇರಿದಂತೆ ಎಲ್ಲ ಕೆಲಸಗಳನ್ನು ಮುಗಿಸಿ ಸಿನಿಮಾ ಬಿಡುಗಡೆಗೆ ತಯಾರಿ ಮಾಡಿಕೊಂಡಿದ್ದೇವೆ. ಎಲ್ಲರು ನೋಡುವಂತಹ ಸಿನಿಮಾ ಇದು. ಧೈರ್ಯವಾಗಿ ಈ ಚಿತ್ರವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ’ ಎಂದರು ಅಮರ್‌.

ಕಾಶ್ಮೀರದಲ್ಲಿ ರಕ್ಷಿತ್‌ ಶೆಟ್ಟಿ;ಕೊರೆಯುವ ಚಳಿಯಲ್ಲೂ ಚಾರ್ಲಿ ಹಂಗಾಮ! 

ಡ್ರಗ್‌ ಮಾಫಿಯಾ ಸುದ್ದಿಗಳು ಸಿನಿಮಾ ಆಚೆಗೂ ಇತ್ತೀಚೆಗೆ ಸಾಕಷ್ಟುಸದ್ದು ಮಾಡಿದೆ. ಆ ಸುದ್ದಿಗಳ ಕತೆ ಇದಲ್ಲ. ಆದರೂ ಆಕಸ್ಮಿಕವಾಗಿ ಸಿಕ್ಕಿದ ಡ್ರಗ್ಸ್‌ನ್ನು ಬೆಂಗಳೂರಿನಲ್ಲಿ ಮಾರಿ ಹಣ ಸಂಪಾದಿಸಬೇಕೆಂದುಕೊಳ್ಳುವ ಯುವಕ, ಇದರ ಜಾಡು ಹಿಡಿದು ಆತನನ್ನು ಹಿಂಬಾಲಿಸುವ ಪೊಲೀಸ್‌ ಅಧಿಕಾರಿ... ಇದರ ಸುತ್ತ ನಡೆಯುವಂಥ ಸಸ್ಪೆನ್ಸ್‌ ಥ್ರಿಲ್ಲರ್‌ ಕತೆಯನ್ನು ಒಳಗೊಂಡಿರುವ ಚಿತ್ರವಿದು.ಅಲ್ಲದೆ ಯಾರಿಗೆ ‘ಜಾಕ್‌ಪಾಟ್‌’ ಹೊಡೆಯುತ್ತದೆ ಎಂಬುದೇ ಚಿತ್ರದ ಕ್ಲೈಮ್ಯಾಕ್ಸ್‌. ಸಕಲೇಶಪುರ ಹಾಗೂ ಬೆಂಗಳೂರು ಸುತ್ತಾಮುತ್ತಾ ಸುಮಾರು 42 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.

ಪುನೀತ್‌ ಯುವರತ್ನ ಜ.22ಕ್ಕೆ ತೆರೆಗೆ; ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌ ಹೇಳಿದ್ದೇನು? 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಶಿರಸಿ ಸಾಯಿಬಾಬಾಗೆ ಬಲು ದುಬಾರಿಯ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ: ಕಾರಣವೂ ರಿವೀಲ್​!
34th Wedding Anniversary : ಅಂಬಿ ನೆನಪಲ್ಲಿ ಸುಮಲತಾ ಭಾವನಾತ್ಮಕ ಪೋಸ್ಟ್