ದಾಸರ ಕೀರ್ತನೆ, ವಚನ ಬರೆದ ಪೂಜಾ ಗಾಂಧಿ; ಕೈ ಬರಹಕ್ಕೆ ಜೈ ಎಂದ ಕನ್ನಡಿಗರು

Published : Jan 17, 2023, 03:45 PM ISTUpdated : Jan 17, 2023, 04:18 PM IST
ದಾಸರ ಕೀರ್ತನೆ, ವಚನ ಬರೆದ ಪೂಜಾ ಗಾಂಧಿ; ಕೈ ಬರಹಕ್ಕೆ ಜೈ ಎಂದ ಕನ್ನಡಿಗರು

ಸಾರಾಂಶ

ಕನ್ನಡ ಕಲಿತು ಬರೆಯುತ್ತಿರುವ ನಟಿ ಪೂಜಾ ಗಾಂಧಿ. 17 ವರ್ಷ ಮುಂಗಾರು ಮಳೆ ಜರ್ನಿ ಪೂರೈಸಿದ ಸುಂದರಿ....

ಮುಂಗಾರು ಮಳೆ ಚಿತ್ರದ ಮೂಲಕ 2006ರಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪಂಜಾಬಿ ಹುಡುಗಿ ಪೂಜಾ ಗಾಂಧಿ ದಂಡುಪಾಳ್ಯ ಭಾಗ 3 ಚಿತ್ರದ ನಂತರ ಲೈಮ್ ಲೈಟ್‌ನಿಂದ ದೂರ ಉಳಿದು ಬಿಟ್ಟಿದ್ದಾರೆ. ಮೊದಲ ಸಿನಿಮಾದಲ್ಲಿ ಒಂದು ಕನ್ನಡ ಅಕ್ಷರವೂ ಗೊತ್ತಿರಲಿಲ್ಲ, ಸಿನಿಮಾ ಮಾಡುತ್ತಾ ಮಾಡುತ್ತಾ ಕನ್ನಡಿಗರ ಪ್ರೀತಿಯಿಂದ ಕನ್ನಡ ಮಾತನಾಡಲು ಆರಂಭಿಸಿದ್ದರು. ಆದರೆ ಬರೆಯಲು ಬರುತ್ತಾ ಎಂದು ಇಷ್ಟು ದಿನ ಕೇಳುತ್ತಿದ್ದವರಿಗೆ ಇಲ್ಲ ಎನ್ನುತ್ತಿದ್ದ ಪೂಜಾ ಹೊಸ ವರ್ಷಕ್ಕೆ ಅದನೇ ರೆಸಲ್ಯೂಷನ್ ಮಾಡಿಕೊಂಡು ಕನ್ನಡ ಬರೆಯಲು ಕಲಿತಿದ್ದಾರೆ. 

ಪೂಜಾ ಪೋಸ್ಟ್‌:

ಎಲ್ಲರಿಗೂ ಹೊಸ ವರ್ಷದ ಶುಭಾಶುಗಳು. ಮುಂಗಾರು ಮಳೆ ಸಿನಿಮಾ ಬಿಡುಗಡೆಯಾಗಿ 17 ವರ್ಷ ಪೂರೈಸಿದೆ. ಶೂಟಿಂಗ್‌ನ ಮೊದಲ ದಿನ ಒಂದು ಅಕ್ಷರವೂ ಕನ್ನಡ ಗೊತ್ತಿರಲಿಲ್ಲ ಈಗ ನೋಡಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವ ಕನ್ನಡ ಓದಲು ಹಾಗೂ ಬರೆಯುವುದಕ್ಕೆ ಕಲಿತಿರುವೆ. ಲವ್ ಯು' ಎಂದು ಪೂಜಾ ಬರೆದುಕೊಂಡಿದ್ದಾರೆ. 

ಪೂಜೆ ಸುಳ್ಳು ಹೇಳುತ್ತಿದ್ದಾರೆ ಬಹುಷ ಸಣ್ಣ ಪುಟ್ಟ ಕನ್ನಡ ಕಲಿತು ಈ ರೀತಿ ಬಿಲ್ಡಪ್ ಕೊಡುತ್ತಿರಬಹುದು ಎನ್ನುವವರಿಗೆ ಸಾಕ್ಷಿ ಸಮೇತ ಉತ್ತರ ಕೊಟ್ಟಿದ್ದಾರೆ. ಪ್ರಸ್ತುತ ಎಂಬ ಕೀರ್ತನೆಯನ್ನು ಪುರಂದರ ಸಾಹಿತ್ಯ ದರ್ಶನ ಸಂಪುಟ 1ರಿಂದ ಆರಿಸಿಕೊಂಡು ಒಂಡು ಪೇಜ್‌ ಬರೆದಿದ್ದಾರೆ. ಪೂಜೆ ಕೈ ಬರಹ ನೋಡಿ ಕನ್ನಡಿಗರು ಫಿದಾ ಆಗಿದ್ದಾರೆ. ವಾವ್! ಸೂಪರ್ ಆಗಿದೆ ಎಂದು ಕಾಮೆಂಟ್ ಮಾಡುತ್ತಾರೆ. ಇದೊಂದೇ ಅಂದುಕೊಂಡು ಸುಮ್ಮನಾಗಬೇಡಿ ಬಸವಣ್ಣ ಅವರ ಕಾಯಕವೇ ಕೈಲಾಸ ವಚನ ಕೂಡ ಬರೆದು ತೋರಿಸಿದ್ದಾರೆ. ಪರ್ಫೆಕ್ಟ್‌ ಅಲ್ಲದಿದ್ದರೂ ಸೂಪರ್ ಅಗಿದೆ ಎನ್ನುತ್ತಾರೆ, ಅಲ್ಲಿ ಇಲ್ಲಿ ಸಣ್ಣ ಪುಟ್ಟ ತಪ್ಪು ಮಾಡಿ ತಿದ್ದಿದ್ದಾರೆ.  

ನೆಟ್ಟಿಗರ ರಿಯಾಕ್ಷನ್:

'ಪೂಜಾ ಗಾಂಧಿ ಬರೆದಿರುವ ಕನ್ನಡ ನೋಡಿ ಎಷ್ಟು ಮುದ್ದಾಗಿದೆ ಹಾಗು ಸ್ಪಷ್ಟವಾಗಿದೆ. ಇಲ್ಲೇ ನೂರಾರು ವರ್ಷ ನೆಲೆಸಿರುವ ಸಾಕಷ್ಟು ಜನರು ಕನ್ನಡವನ್ನು ಕಡೆಗಣಿಸಿದ್ದಾರೆ. ಅದರಲ್ಲಿ ಈ ನಟಿ ವಿಶೇಷ. ಅವರು ಕನ್ನಡದ ಬಗ್ಗೆ ಬೆಳೆಸಿಕೊಂಡಿರುವ ಬದ್ಧತೆ ಮೆಚ್ಚುವಂತದ್ದು. ಅಭಿಮಾನ ಬೇರೆ, ಕಲಿಕೆ ಮತ್ತು ಬಳಕೆ ಮುಖ್ಯ. ಅಭಿಮಾನ ಆಮೇಲೆ. ಪೂಜಾ ಗಾಂಧಿ ಅವರನ್ನು ವಲಸಿಗರು ಮತ್ತು ಇಲ್ಲೇ ಇರುವ ಎಡಬಿಡಂಗಿಗಳು ನೋಡಿ ನಾಗರೀಕತೆ ಬೆಳೆಸಿಕೊಳ್ಳಬಬೇಕು. ಕನ್ನಡತಿ ಪೂಜಾ ಗಾಂಧಿ ಅವರೇ ನೀವು ಕನ್ನಡಿಗರ ಮನಸ್ಸು ಹಿಂದೆಯೂ ಗೆದ್ದಿದ್ದೀರಿ ಈಗಲೂ ಗೆಲ್ಲುತ್ತಿದ್ದೀರಿ' ಎಂದು ಮಧು ಕಲ್ಲಹಳ್ಳಿ ಬರೆದುಕೊಂಡಿದ್ದಾರೆ. 

ಪೂಜಾ ಮದುವೆ ಆಗಿದ್ದು ಒಬ್ರನ್ನ ಆದ್ರೆ ಗೂಗಲ್‌ ತೋರಿಸ್ತಾ ಇರೋದೇ ಇನ್ನೊಬ್ರನ್ನ!

ಕನ್ನಡ ಚಿತ್ರರಂಗಕ್ಕೆ ಕಾಲಿಡುವ ಮುನ್ನ ಪೂಜಾ ಗಾಂಧಿ ಎರಡು ಹಿಂದಿ ಸಿನಿಮಾ, ಒಂದು ತಮಿಳು ಮತ್ತು ಒಂದು ಬೆಂಗಾಲಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.  ಒಟ್ಟು 40 ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿರುವ ಪೂಜಾ ಗಾಂಧಿ  ಕೃಷ್ಣ , ಗೋಕುಲ ಮತ್ತು ದಂಡುಪಾಳ್ಯ ಚಿತ್ರಕ್ಕೆ ಬೆಸ್ಟ್‌ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. 2015ರಲ್ಲಿ ಅಭಿನೇತ್ರಿ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಪೂಜಾ ಸಿನಿಮಾ ಮಾತ್ರ ಸೀಮಿತವಾಗಿರಲಿಲ್ಲ, 2016ರಲ್ಲಿ ಕಿರುತೆರೆ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 3ರಲ್ಲಿ ಸ್ಪರ್ಧಿಸಿ ಫಿನಾಲೆ ವಾರಕ್ಕೆ ಕಾಲಿಟ್ಟಿದ್ದರು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ