ದಕ್ಷಿಣ ಸಿನಿಮಾ ನಟಿ ಕತೆ 5 ಭಾಷೆಗಳಲ್ಲಿ ಬರುತ್ತಿರುವುದು ಮೊದಲು: ಇಂದ್ರಜಿತ್‌ ಲಂಕೇಶ್‌

By Kannadaprabha NewsFirst Published Dec 11, 2020, 9:05 AM IST
Highlights

ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿರುವ ಸಿನಿಮಾ ‘ಶಕೀಲಾ’ ಲಾಕ್‌ಡೌನ್‌ ನಂತರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಬಹುಭಾಷೆಯ ಸಿನಿಮಾ. ಮಲಯಾಳಂ ನಟಿ ಶಕೀಲ ಜೀವನ ಚರಿತ್ರೆ ಆಧರಿತ ಚಿತ್ರದ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌. ಇತ್ತೀಚೆಗೆ ಚಿತ್ರತಂಡ ಟ್ರೇಲರ್‌ ಬಿಡುಗಡೆ ಮಾಡಿತು. ಕ್ರಿಸ್‌ಮಸ್‌ ಹಬ್ಬದ ಸಡಗರವಾಗಿ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ ಎಂಬುದು ಹೈಲೈಟ್‌.

ಶಕೀಲಾ ಪಾತ್ರದಲ್ಲಿ ಬಾಲಿವುಡ್‌ ನಟಿ ರಿಚ್ಚಾ ಛಡ್ಡಾ ನಟಿಸಿದ್ದಾರೆ. ಸುಚೇಂದ್ರ ಪ್ರಸಾದ್‌, ಪಂಕಜ್‌ ತ್ರಿಪಾಠಿ, ರಾಜೀವ್‌ ಪಿಳ್ಳೈ, ಸಮರ್ಜಿತ್‌ ಲಂಕೇಶ್‌, ಸಂದೀಪ್‌ ಮಲಾನಿ ಹಾಗೂ ಎಸ್ಟರ್‌ ನರೋನಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವೀರ ಸಮಥ್‌ರ್‍ ಸಂಗೀತ, ಸಂತೋಷ್‌ ರೈ ಪಾತಾಜೆ ಛಾಯಾಗ್ರಾಹಣ ಮಾಡಿದ್ದಾರೆ. ಸಾಮಿ ನಾನ್ವಾನಿ ಹಾಗೂ ಶರವಣಪ್ರಸಾದ್‌ ಈ ಚಿತ್ರದ ನಿರ್ಮಾಪಕರು. ನಿರ್ಮಾಪಕರಾದ ಸೂರಪ್ಪ ಬಾಬು, ಜಾಕ್‌ ಮಂಜು, ವಿತರಕ ಭಾಷಾ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ನಟಿ ಶಕೀಲಾ ಅವರೇ ಆಗಮಿಸಿ ತಮ್ಮ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿದ್ದು ಅಂದಿನ ವಿಶೇಷ. ಮಾಧ್ಯಮಗಳ ಮುಂದೆ ಬಂದ ಚಿತ್ರತಂಡ ಹೇಳಿದ್ದೇನು?

1. ಡಿಸೆಂಬರ್‌ 25ಕ್ಕೆ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ತೆರೆಗೆ ಬರುತ್ತಿದೆ. ಐದೂ ಭಾಷೆ ಸೇರಿ ಎರಡರಿಂದ ಎರಡೂವರೆ ಸಾವಿರ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ.

ಕೋಟಿಗಟ್ಟಲೆ ಹಣವಿಲ್ಲ, ಬಂಗಲೆ ಇಲ್ಲ, ಚಿಕ್ಕ ಮನೆ, ಒಂಟಿ ಜೀವನ: ಲೈಫ್ ಬಗ್ಗೆ ಶಕೀಲಾ ಮಾತು 

2. ದಕ್ಷಿಣ ಭಾರತ ಸಿನಿಮಾ ನಟಿಯೊಬ್ಬರ ಬಯೋಪಿಕ್‌ ಐದು ಭಾಷೆಗಳಲ್ಲಿ ಬರುತ್ತಿರುವುದು ಇದೇ ಮೊದಲು. ಆರಂಭದಲ್ಲಿ ಕೇವಲ ಹಿಂದಿ ಭಾಷೆಯಲ್ಲಿ ಶುರುವಾಗಿದ್ದ ಈ ಚಿತ್ರ ಈಗ ಪ್ಯಾನ್‌ ಇಂಡಿಯಾ ಸಿನಿಮಾ ಆಗಿದೆ.

3. 1990ರಿಂದ 2000ದ ದಶಕದಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ದ ಶಕೀಲಾ ಅತ್ಯಂತ ಜನಪ್ರಿಯ ನಟಿಯಾಗಿದ್ದರು. ಒಂದೇ ವರ್ಷದಲ್ಲಿ ಅವರು ನಟಿಸಿದ ಹತ್ತಾರು ಸಿನಿಮಾಗಳು ಬಿಡುಗಡೆ ಆಗುತ್ತಿದ್ದವು. ಆರಂಭದಲ್ಲಿ ಈಕೆಯ ಬದುಕು ಅಷ್ಟು ಸುಲಭವಾಗಿರಲಿಲ್ಲ. ಅವರು ಕೂಡ ಜೀವನದಲ್ಲಿ ಕಷ್ಟಗಳನ್ನು ಕಂಡಿದ್ದಾರೆ. ಅದು ಈಗ ಸಿನಿಮಾ ಆಗಿ ತೆರೆಗೆ ಬರುತ್ತಿದೆ.

click me!