
ಬೆಂಗಳೂರು (ಜ. 14): ಉಪೇಂದ್ರ ಹಾಗೂ ಆರ್ ಚಂದ್ರು ಕಾಂಬಿನೇಷನ್‌ನ ‘ಕಬ್ಜ’ ಚಿತ್ರಕ್ಕೆ ಸಾಹುಕಾರ ರಾಜಕಾರಣಿ ಎಂಟ್ರಿ ಆಗಿದ್ದಾರೆ. ರಾಜಕಾರಣಿ ಎಂಟಿಬಿ ನಾಗರಾಜ್ ಏಳು ಭಾಷೆಯಲ್ಲಿ ತಯಾರಾಗುತ್ತಿರುವ ಬಹು ಕೋಟಿ ವೆಚ್ಚದ ‘ಕಬ್ಜ’ ಚಿತ್ರದ ಮೂಲಕ ಸಿನಿಮಾ ನಿರ್ಮಾಪಕರಾಗಿ ಬರುತ್ತಿದ್ದಾರೆ.
ಕಮಲಿ ಕ್ಯಾತೆ; ಧಾರಾವಾಹಿ ನಿರ್ದೇಶಕನ ವಿರುದ್ಧ ಇದೆಂಥಾ ದೂರು
ಉಪ್ಪಿ ಲುಕ್‌ಗೆ ಎಂಟಿಬಿ ಫಿದಾ
ಸಿನಿಮಾ ಸೆಟ್ಟೇರಿದಾಗ ನಿರ್ದೇಶನ ಮತ್ತು ನಿರ್ಮಾಣದ ಸಾರಥಿಯಾಗಿ ಇದ್ದಿದ್ದು ಆರ್ ಚಂದ್ರು ಒಬ್ಬರೇ. ಮೊದಲಿನಿಂದಲೂ ಎಂಟಿಬಿ ನಾಗರಾಜ್ ಅವರಿಗೆ ಆಪ್ತರಾಗಿದ್ದ ಆರ್ ಚಂದ್ರು, ಚಿತ್ರದ ಆಹ್ವಾನ ಪತ್ರಿಕೆಗೆ ಹಾಗೂ ಸಿನಿಮಾ ಕುರಿತ ಸಂಕ್ಷಪ್ತ ವಿವರಣೆಗಳನ್ನು ಒಳಗೊಂಡ ಕಿರು ಹೊತ್ತಿಗೆ ನೀಡಿದ್ದರು.
ಪಿ ಶೇಷಾದ್ರಿ, ರಮೇಶ್ ಭಟ್ ಸೇರಿ ಹಲವರಿಗೆ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ
ಆಹ್ವಾನ ಪತ್ರಿಕೆಯಲ್ಲಿ ಉಪೇಂದ್ರ ರೆಟ್ರೋ ಲುಕ್ ನೋಡಿದ ಎಂಟಿಬಿ, ಚಿತ್ರದ ಕತೆ ಕೇಳಿದ್ದಾರೆ. ಆರ್. ಚಂದ್ರು ವಿಷನ್ ಕೇಳಿ ಖುಷಿಯಾದ ಎಂಟಿಬಿ, ‘ಕಬ್ಜ’ ಚಿತ್ರದ ನಿರ್ಮಾಣದಲ್ಲಿ ನೇರ ಪಾಲುದಾರಿಕೆ ಪಡೆದುಕೊಂಡಿದ್ದಾರೆ. ‘ನಮ್ಮ ಚಿತ್ರದ ಮೂಲಕ ಎಂಟಿಬಿ ನಾಗರಾಜ್ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಬರುತ್ತಿರುವುದು ಖುಷಿ ವಿಚಾರ. ಸಿನಿಮಾ ಮತ್ತಷ್ಟುಅದ್ದೂರಿಯಾಗಿ ಮೂಡಿ ಬರಲು ಅನುಕೂಲವಾಗಲಿದೆ’ ಎನ್ನುತ್ತಾರೆ ಆರ್ ಚಂದ್ರು.
9 ಸೆಟ್‌ಗಳ ಪೈಕಿ 4 ಸೆಟ್ ರೆಡಿ
‘ಕಬ್ಜ’ ಚಿತ್ರಕ್ಕೆ ಒಟ್ಟು 9 ಸೆಟ್‌ಗಳನ್ನು ಹಾಕಲಾಗುತ್ತಿದೆ. ಈ ಪೈಕಿ ನಾಲ್ಕು ಸೆಟ್‌ಗಳನ್ನು ಬೆಂಗಳೂರಿನಲ್ಲಿ ಈಗಾಗಲೇ ಹಾಕಿದ್ದಾರೆ. ಒಂದೊಂದು ಸೆಟ್ ಅನ್ನು 1.5 ಕೋಟಿ ವೆಚ್ಚದಲ್ಲಿ ಕಲಾ ನಿರ್ದೇಶಕ ಶಿವಕುಮಾರ್ ನಿರ್ಮಿಸಿದ್ದಾರೆ. ‘ಕೆಜಿಎಫ್’ ಕಲಾ ನಿರ್ದೇಶಕನಾಗಿ ಕೆಲಸ ಮಾಡಿದ ಶಿವಕುಮಾರ್ ಅವರಿಗೆ ‘ಕಬ್ಜ’ ಮತ್ತೊಂದು ಸವಾಲಿನ ಸಿನಿಮಾ ಆಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.