
ನಟ ಧ್ರುವ ಸರ್ಜಾ ಅವರು ಸಿನಿಮಾ ಮಾಡ್ತೀನಿ ಎಂದು ನನ್ನ ಬಳಿ ಮೂರು ಕೋಟಿ ರೂಪಾಯಿ ಹಣ ಪಡೆದಿದ್ದರು. ಆದರೆ ನನ್ನ ಜೊತೆ ಸಿನಿಮಾ ಮಾಡಿಲ್ಲ, ಹೀಗಾಗಿ ಬಡ್ಡಿ ಸಮೇತ ಹಣ ವಾಪಾಸ್ ಕೊಡಿ ಎಂದು ಅವರು ಮುಂಬೈನಲ್ಲಿ ದೂರು ದಾಖಲಿಸಿದ್ದರು. ಆಮೇಲೆ ಚಕ್ರವರ್ತಿ ಚಂದ್ರಚೂಡ್ ಅವರು ಈ ಬಗ್ಗೆ ಮಾತನಾಡಿ, “ರಾಘವೇಂದ್ರ ಹೆಗಡೆ ಅವರು ತಮಿಳು, ತೆಲುಗು ಸಿನಿಮಾ ಮಾಡ್ತೀನಿ ಅಂತ ಹೇಳಿದ್ರು, ಅದಕ್ಕೆ ಧ್ರುವ ಒಪ್ಪಲಿಲ್ಲ. ಹೀಗಾಗಿ ದೂರು ದಾಖಲಾಗಿದೆ” ಎಂದಿದ್ದರು. ಆಮೇಲೆ ಎಲ್ಲರೂ ರಾಘವೇಂದ್ರ ಅವರನ್ನು ಕನ್ನಡ ವಿರೋಧಿ ಎಂದು ಬಿಂಬಿಸಿದ್ದರು. ಕನ್ನಡ ವಿರೋಧಿ ಅಂತ ಬಿಂಬಿಸಿದ್ದಕ್ಕೆ ರಾಘವೇಂದ್ರ ಹೆಗಡೆ ಆಕ್ರೋಶ ಹೊರಹಾಕಿದ್ದಾರೆ. ಜಗ್ಗುದಾದಾ ಸಿನಿಮಾ ಡೈರೆಕ್ಟರ್, ಧ್ರುವ ಸರ್ಜಾ ವಿವಾದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ.
“ನಾನು ಜಗ್ಗುದಾದಾ ಸಿನಿಮಾ ಮಾಡಿದ್ದೆ...ಶನಿ ಸೀರಿಯಲ್...ಮಹಾಕಾಳಿ ಮಾಡಿದ್ದೆ. ಧ್ರುವ ಸರ್ಜಾ ಅವರಿಗೆ ಎರಡನೇ ಸಿನಿಮಾ ಮಾಡಬೇಕಿತ್ತು. ಕೆಡಿ ಮುಗಿಸಬೇಕು ಅಂತ ಕೇಳಿಕೊಂಡಿದ್ರು, ಆಯ್ತು ಅಂತ ನಾನು 8 ವರ್ಷ ಕಾದೆ. ಅದಾದ ನಂತರ ತಮಿಳಿನ ಅಮರನ್ ಸಿನಿಮಾ ರಿಲೀಸ್ ಆಗುತ್ತೆ, ಅದ್ರಲ್ಲಿ ಕಥೆ ಬದಲಾಯಿಸಿ ಅಂದ್ರು. ಕನ್ನಡ ಸಿನಿಮಾ ಮಾಡ್ತಿನಿ ಅಂತ ಹೇಳಿದ್ದೆ. ಆಗ ಧ್ರುವ ಅವರು ಪ್ಯಾನ್ ಇಂಡಿಯಾ ಮಾಡ್ತಿದ್ದೀವಿ, ಕೆಲವು ದಿನ ಕಳೆದ ನಂತರ ಮಾಡಿ ಅಂದ್ರು” ಎಂದಿದ್ದಾರೆ ರಾಘವೇಂದ್ರ ಹೆಗಡೆ.
“ನನ್ನ ಸಿನಿಮಾ ಮುಗಿಯೋವರೆಗೂ ನೀವು ಮಾಡೋ ಹಾಗಿಲ್ಲ ಅಂತ ಪೀಪಲ್ಸ್ ಮೀಡಿಯಾದಿಂದ ನನಗೆ ನೋಟೀಸ್ ಬರುತ್ತೆ. ಅಲ್ಲಿಗೆ 12 ವರ್ಷ ಆಗುತ್ತೆ ಹಾಗಾದ್ರೆ ವೇಸ್ಟ್ ಆಗುತ್ತೆ ಅಂದೆ. ಕಾನೂನು ಪ್ರಕಾರ ನನ್ನ ಹಣ ವಾಪಸ್ ಕೊಡಿ ಅಂತ ಕೇಳಿದ್ದೆ. ಅಶ್ವಿನ್‌ಗೆ ನಮ್ಮ ಹಾಗೂ ಧ್ರುವ ಸರ್ಜಾ ಅವರ ನಡುವಿನ ಮಾತುಕತೆ ಗೊತ್ತಿಲ್ಲ. ಆಮೇಲೆ ನಾನು ನಂತರ ನೋಟೀಸ್ ಕಳಿಸಿದೆ. ಈಗ ನಾನು ತಮಿಳು, ತೆಲುಗು ಸಿನಿಮಾ ಮಾಡ್ತಿದ್ದೇನೆ, ಕನ್ನಡ ವಿರೋಧಿ ಅಂತ ಹೇಳಿದ್ದಾರೆ. ಸೋಲ್ಡ್ಜರ್ ಕನ್ನಡ ಸಿನಿಮಾ ಮಾಡೋದು ಅಂತ ಅಗ್ರಿಮೆಂಟ್ ಇದೆ. ತಮಿಳು, ತೆಲುಗು ಸಿನಿಮಾ ಮಾಡೋದಿದ್ರೆ ನಾನು ಯಾಕೆ ಧ್ರುವ ಸರ್ಜಾ ಜೊತೆ ಮಾಡಬೇಕು? ತಮಿಳು, ತೆಲುಗು ನಟರ ಜೊತೆ ಸಿನಿಮಾ ಮಾಡ್ತಿದ್ದೆ” ಎಂದಿದ್ದಾರೆ ರಾಘವೇಂದ್ರ ಹೆಗಡೆ.
“ನ್ಯಾಯಾಲಯದಲ್ಲಿ ಧ್ರುವ ಸರ್ಜಾ ಅವರು, “ನನ್ನ ಕೋ ಪ್ರೊಡ್ಯೂಸರ್ ಅವರಿಂದ ಒತ್ತಡ ಇದೆ. ನಾನು ಎಂಟು ವರ್ಷದಿಂದ ಯಾವುದೇ ಸಿನಿಮಾ ಮಾಡಿಲ್ಲ. ಸಿನಿಮಾ ಸೋಲಲಿ, ಗೆಲ್ಲಲಿ ಅದು ಬೇರೆ ವಿಷಯ. ಆದರೆ ಎಲ್ಲರೂ ನಾನು ಖಾಲಿ ಕುಳಿತಿದ್ದೇನೆ ಅಂತ ಹೇಳ್ತಿದ್ರು. ಇದು ನನಗೆ ಬಹಳ ಬೇಸರ ತಂದಿದೆ” ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.