ತೂಕದ ಬಗ್ಗೆ ನೋವಾಗುತ್ತೆ, ಆ ಘಟನೆ ನಡೆದಿರಲಿಲ್ಲ ಅಂದ್ರೆ ನನ್ನ ಮೇಲೆ ದಯೆ ಇರುತ್ತಿರಲಿಲ್ಲ: ಮೇಘನಾ ರಾಜ್

Published : Aug 12, 2023, 02:13 PM IST
 ತೂಕದ ಬಗ್ಗೆ ನೋವಾಗುತ್ತೆ, ಆ ಘಟನೆ ನಡೆದಿರಲಿಲ್ಲ ಅಂದ್ರೆ ನನ್ನ ಮೇಲೆ ದಯೆ ಇರುತ್ತಿರಲಿಲ್ಲ: ಮೇಘನಾ ರಾಜ್

ಸಾರಾಂಶ

ಬಾಡಿ ಶೇಮಿಂಗ್ ಎದುರಿಸಿದ ನಟಿ ಮೇಘನಾ ರಾಜ್. ಇಂಗ್ಲಿಷ್‌ ಸಂದರ್ಶನದಲ್ಲಿ ದಯೆ ಬಗ್ಗೆ ಮಾತನಾಡಿದ ನಟಿ..ರೀಲ್ಸ್ ವೈರಲ್....

ಕನ್ನಡ ಚಿತ್ರರಂಗದ ಸ್ಟಾರ್ ಜೋಡಿ ಸುಂದರ್ ರಾಜ್ ಮತ್ತು ಪ್ರೇಮಿಳಾ ಜೋಷಾಯ್ ಮುದ್ದಿನ ಮಗಳು ಮೇಘನಾ ರಾಜ್ ಮಲಯಾಳಂ ಚಿತ್ರರಂಗದ ಮೂಲಕ ತಮ್ಮ ಸಿನಿ ಜರ್ನಿ ಆರಂಭಿಸಿದರು. ಪುಂಡ ಸಿನಿಮಾ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದ ನಟಿ ಆಟಗಾರ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಜೊತೆ ಸ್ನೇಹ ಬೆಳೆದು ಪ್ರೀತಿಗೆ ತಿರುಗಿತ್ತು. ಹಲವು ವರ್ಷಗಳ ಕಾಲ ಪ್ರೀತಿ ಹಿಂದು ಮತ್ತು ಕ್ರಿಶ್ಚಿಯನ್ ಶೈಲಿಯಲ್ಲಿ ಮದುವೆ ಮಾಡಿಕೊಂಡ ಈ ಜೋಡಿ ಮೇಲೆ ಅದ್ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ಎರಡು ವರ್ಷಗಳ ಹಿಂದೆ ಹೃದಯಾಘಾತದಿಂದ ಅಗಲಿದರು. 

ಆ ಸಮಯದಲ್ಲಿ ಗರ್ಭಿಣಿಯಾಗಿದ್ದ ಮೇಘನಾ ರಾಜ್‌ ತಮ್ಮ ಮಗುವಿಗಾಗಿ ತುಂಬಾ ಸ್ಟ್ರಾಂಗ್ ಆಗಿ ನಿಂತರು. ಆಗ ಎಂಟ್ರಿ ಕೊಟ್ಟಿದ್ದು ರಾಯನ್ ರಾಜ್ ಸರ್ಜಾ. ಮೋಡ ಕವಿದು ಮೌನವಾಗಿದ್ದ ಈ ಕುಟುಂಬಕ್ಕೆ ಬೆಳಕಾಗಿ ಬಂದಿದ್ದು ರಾಯನ್. ಪೇರೆಂಟಿಂಗ್ ಲೈಫ್ ಎಂಜಾಯ್ ಮಾಡುತ್ತಿದ್ದ ಮೇಘನಾ ರಿಯಾಲಿಟಿ ಶೋ ಮೂಲಕ ಕಮ್‌ಬ್ಯಾಕ್ ಮಾಡುತ್ತಾರೆ ಅದಾದ ಮೇಲೆ ಸಿನಿಮಾ ಕೂಡ ಸಹಿ ಮಾಡುತ್ತಾರೆ. ಕಮ್ ಬ್ಯಾಕ್ ಪ್ರಾಸೆಸ್‌ನಲ್ಲಿ ಮೇಘನಾ ಫಿಟ್ನೆಸ್‌ ಬಗ್ಗೆ ಕಾಳಜಿ ವಹಿಸಿದ್ದಾರೆ. ಇದೇ ಸಮಯದಲ್ಲಿ ದೆಷ್ಟೋ ಮಂದಿ ಬಾಡಿ ಶೇಮಿಂಗ್ ಮಾಡಿದ್ದಾರೆ. 

ಈಗಲೂ ಚಿರು ಜೊತೆ ಮಾತನಾಡುತ್ತೀನಿ; ಹಾಸ್ಯ ಮಾಡುವವರಿಗೆ ಸ್ಪಷ್ಟನೆ ಕೊಟ್ಟ ಮೇಘನಾ ರಾಜ್!

'ನನ್ನ ದೇಹದ ತೂಕವನ್ನು ಪಾಯಿಂಟ್ ಮಾಡಿ ಯಾರಾದರೂ ಮಾತನಾಡಿದರೆ ಖಂಡಿತಾ ನನಗೆ ಬೇಸರವಾಗುತ್ತದೆ, ನಾನು ಮಹಿಳೆ. ಕೆಲವೊಮ್ಮೆ ನಾನು ಯೊಚನೆ ಮಾಡುತ್ತೀನಿ ನನ್ನ ಜೀವದಲ್ಲಿ ಈ ರೀತಿ ಘಟನೆ ಆಗಿರಲಿಲ್ಲ ಅಂದ್ರೆ ಜನರು ನನಗೆ ಇಷ್ಟೊಂದು ಪ್ರೀತಿ ಕೊಡುವರೇ? ಪ್ರೆಗ್ನೆನ್ಸಿ ಆದ್ಮೇಲೆ ಯಾರೂ ನನ್ನನ್ನು ಜಡ್ಜ್ ಮಾಡುತ್ತಿಲ್ಲ ಆದರೆ ನನ್ನ ಜೀವನ ಮೊದಲಿನಂತೆ ಕಲರ್‌ಫುಲ್ ಆಗಿದ್ದರೆ ಖಂಡಿತ ನಾನು ಆದಷ್ಟು ಬೇಗ ಫಿಟ್ ಆಗಬೇಕು ಹಾಗೂ ಕಮ್ ಬ್ಯಾಕ್ ನಿರೀಕ್ಷೆ ಮಾಡುತ್ತಿದ್ದರು. ಒಂದು ವೇಳೆ ಕಮ್ ಬ್ಯಾಕ್ ಮಾಡಿಲ್ಲ ಅಂದ್ರೂ ಕಾಮೆಂಟ್ ಮಾಡುತ್ತಿದ್ದರು. ನನ್ನ ಜೀವನದಲ್ಲಿ ಈ ಘಟನೆ ನಡೆದಿರಲಿಲ್ಲ ಅಂದ್ರೆ ಯಾರೂ ದಯೆ ತೋರಿಸುತ್ತಿರಲಿಲ್ಲ ನನಗೂ ಸಾಕಷ್ಟು ಯೋಚನೆಗಳು ಬರುತ್ತದೆ' ಎಂದು ಬಾಲಿವುಡ್ ಬಬಲ್ ಸಂದರ್ಶನದಲ್ಲಿ ಮೇಘನಾ ರಾಜ್ ಮಾತನಾಡಿದ್ದಾರೆ. 

ಒಂದು ಕಪ್ ಕೆಟ್ಟ ಕಾಫಿಗೆ 11 ಸಾವಿರ; ನನ್ನಿಂದಲೇ ಮೋದಿ UPI ಶುರು ಮಾಡಿದ್ದರು ಎಂದ ಮೇಘನಾ ರಾಜ್!

ಗಾಸಿಪ್ ಆಂಡ್ ಟ್ರೋಲ್:

'ಸರ್ಜಾ ಕುಟುಂಬ ಮತ್ತು ರಾಜ್ ಕುಟುಂಬದ ನಡುವೆ ಮನಸ್ತಾಪ ಇದೆ ಅನ್ನೋದಕ್ಕೆ ನನ್ನ ಬಳಿ ಉತ್ತರವಿಲ್ಲ ಈ ವಿಚಾರವಾಗಿ ಯಾವತ್ತೂ ಕ್ಲಾರಿಫೈ ಮಾಡಿಲ್ಲ ಹಾಗೂ ಮಾಡುವ ಅಗತ್ಯವೂ ಬಂದಿಲ್ಲ...ನಿಜ ಹೇಳಬೇಕು ಅಂದ್ರೆ ಸ್ಪಷ್ಟನೆ ನೀಡಲೂ ಏನೂ ಇಲ್ಲ. ಎರಡು ಕುಟುಂಬಗಳು ತುಂಬಾ ದುಖಃದಲ್ಲಿದ್ದಾಗ ನಮಗೆ ಸಪೋರ್ಟಿವ್ ಅಗಿರುವ ಬದಲಾಗಿ ನಮ್ಮಳಿ ಎಂದು ಅಲ್ಲಿಂದ ಏನೋ ಕೊಂಕು ಮಾಡುವುದು ಅಥವಾ ಅಲ್ಲಿಂದ ಏನೋ ತಿಳಿದುಕೊಂಡು ಬಂದು ನಮ್ಮ ಬಳಿ ಕೊಂಕು ಮಾಡುವುದು ..ಹೀಗೆ ಇರದರಿಂದ ಮಜಾ ನೋಡುವುದಕ್ಕೆ ಬಹಳಷ್ಟು ಜನರು ಕಾಯುತ್ತಿದ್ದರು ಪಾಪ ಅವರಿಗೆ ಏನೂ ಸಿಗಲಿಲ್ಲ. ಬಹಳ ಸಲ ಹೇಳಿರುವ ನನ್ನ ಮತ್ತು ಧ್ರುವ ಸರ್ಜಾ ಬಾಂಡ್ ಹೇಗಿದೆ ಎಂದು ಕೂತು ಬಿಡಿಸಿ ಜನರಿಗೆ ಅರ್ಥ ಮಾಡಿಸುವ ಅಗತ್ಯವಿಲ್ಲ ..ಏನೋ ಹೇಳ್ಕೋಬೇಕು ಜನರ ತಲೆಗೆ ಹಾಕಬೇಕು ಅಂತ ಏನೂ ಇಲ್ಲ ಏಕೆಂದು ಇದು ನನ್ನ ಪರ್ಸನಲ್ ವಿಚಾರ ನನ್ನ ಫ್ಯಾಮಿಲಿ ವಿಚಾರ' ಎಂದು ಮೇಘನಾ ರಾಜ್ ಹೇಳಿದ್ದಾರೆ.

' ಪ್ರತಿ ದಿನ ನಾನು ಅಮ್ಮನ ಜೊತೆ ಹೀಗಿದ್ದೀನಿ ಮಾತನಾಡುತ್ತಿಲ್ಲ ಜಗಳ ಮಾಡುತ್ತಿರುವೆ ಖುಷಿಯಾಗಿರುವೆ ಅಂತ ಇನ್‌ಸ್ಟಾಗ್ರಾಂನಲ್ಲಿ ಹಾಕಬೇಕಾ? ನನ್ನ ತಂದೆ ತಾಯಿ ಜೊತೆ ಹೇಗಿರುವ ಅದೇ ರೀತಿ ಧ್ರುವ ನನಗೆ ತಮ್ಮ ...ನನ್ನ ತಮ್ಮನ ಜೊತೆ ಒಂದು ದಿನ ಜಗಳ ಮಾಡುತ್ತೀನಿ ಒಂದು ದಿನ ಸಿನಿಮಾ ನೋಡಲು ಹೋಗುತ್ತೀನಿ ಅಥವಾ ಮತ್ತೊಂದು ದಿನ ಅವನಿಗೆ ನನ್ನ ಮೇಲೆ ಏನೋ ಕಿರಿಕಿರಿ ಅನ್ಸುತ್ತೆ ಇದೆಲ್ಲಾ ಕಾಮನ್. ಆದರೆ ಇದನ್ನು ಗ್ಲೋರಿಫೈ ಮಾಡಿ ಇದರಿಂದ ಏನೋ ಪಡೆಯಬಹುದು ಅಂದುಕೊಂಡಿರುವ ಜನರಿಗೆ ಏನೂ ಸಿಕ್ಕಿಲ್ಲ. ಇವತ್ತಿಗೂ ಇನ್ನು ಮುಂದೆನೂ ನಾವು ಹೀಗಿದ್ದೀವಿ ನಮ್ಮ ಫ್ಯಾಮಿಲಿ ಹೀಗೆ ಎಂದು ಕ್ಯಾಮೆರಾ ಎದುರು ಹೇಳುವ ಅಗತ್ಯವಿಲ್ಲ ನಾನು ಹೇಗೆ ನಾವು ಹೇಗಿದ್ದೀವಿ ಎಂದು ನಮ್ಮ ತಂದೆ ತಾಯಿಗೆ ಗೊತ್ತು ನಮ್ಮ ಅತ್ತೆ ಮಾವ ಅವರಿಗೆ ಗೊತ್ತು ಅಷ್ಟೇ ನನಗೆ ಬೇಕಾಗಿರುವುದು. ಇಲ್ಲಿ ಯಾರಿಗೂ ಸ್ಪಷ್ಟನೆ ನೀಡುವ ಅಗತ್ಯವಿಲ್ಲ' ಎಂದಿದ್ದಾರೆ ಮೇಘನಾ ರಾಜ್.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!