ಬೆಳ್ಳಿ ತೆರೆಗೆ ಮ್ ಬ್ಯಾಕ್ ಮಾಡುತ್ತಿರುವ ಮೇಘನಾ ರಾಜ್. ತತ್ಸಮ ತದ್ಭವ ಚಿತ್ರದ ಬಗ್ಗೆ ಹೆಚ್ಚಿದೆ ನಿರೀಕ್ಷೆ....
ಮೇಘನಾ ರಾಜ್ ಮರಳಿ ಬಂದಿದ್ದಾರೆ. ಅವರು ನಟಿಸಿರುವ ತತ್ಸಮ ತದ್ಭವ ಸಿನಿಮಾ ಸೆ.15ರಂದು ಬಿಡುಗಡೆಯಾಗುತ್ತಿದೆ. ವಿಶೇಷ ಎಂದರೆ ವಿಶಾಲ್ ಆತ್ರೇಯ ನಿರ್ದೇಶನದ ಈ ಚಿತ್ರವನ್ನು ಪನ್ನಗಭರಣ ನಿರ್ಮಿಸಿದ್ದಾರೆ. ಈ ಕುರಿತು ಮೇಘನಾ ರಾಜ್ ಮಾತುಗಳು ಇಲ್ಲಿವೆ-
- ಮೊದಲ ಸಿನಿಮಾ ಬಿಡುಗಡೆ ಆದಾಗಲೂ ಇಷ್ಟೊಂದು ನರ್ವಸ್ ಆಗಿರಲಿಲ್ಲ. ಈ ಬಾರಿ ಹೆಚ್ಚು ಭಯ, ಹೆಚ್ಚು ಎಕ್ಸೈಟ್‌ಮೆಂಟ್ ಇದೆ. ನನ್ನ ಮೊದಲ ಸಿನಿಮಾಗಿಂತಲೂ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದೇನೆ.
ಅಣ್ಣ ಚಿರು ಸಮಾಧಿಯಲ್ಲಿ ಮಲಗಿದ ಧ್ರುವ ಸರ್ಜಾ; ವಿಡಿಯೋ ವೈರಲ್
- ಸ್ನೇಹಿತರೇ ಸೇರಿ ಮಾಡಿದ ಸಿನಿಮಾ ಇದು. ಈ ಕನಸು ಹುಟ್ಟಿದ್ದು ಚಿರುನಿಂದ. ಎಲ್ಲರೂ ಸೇರಿ ಸಿನಿಮಾ ಮಾಡಬೇಕು, ಒಟ್ಟಾಗಿರಬೇಕು ಎನ್ನುತ್ತಿದ್ದರು. ಅವರ ಕನಸು ನಮ್ಮ ಕನಸಾಗಿ ಬದಲಾಗಿದೆ. ಕನಸು ನೇರವೇರಿದೆ. ಈ ಸಿನಿಮಾ ಚಿರುಗೆ ಅರ್ಪಣೆ.
- ವಿಶೇಷ ಕಥಾ ಹಂದರ ಇರುವ ಸಿನಿಮಾ. ಎಲ್ಲಾ ರೀತಿಯ ಸಿನಿಮಾದಂತೆ ಇಲ್ಲ. ನನ್ನದು ಆರಿಕಾ ಎಂಬ ಸಾಮಾನ್ಯ ಹುಡುಗಿಯ ಪಾತ್ರ. ಸಹಜವಾಗಿ ಸಾಗುವ ಜೀವನದಲ್ಲಿ ಇದ್ದಕ್ಕಿದ್ದಂತೆ ತಿರುವೊಂದು ಎದುರಾಗುತ್ತದೆ. ಅಲ್ಲಿಂದ ಎಲ್ಲವೂ ಬದಲಾಗುತ್ತದೆ. ಸಾಕಷ್ಟು ಏಳು ಬೀಳು ಪ್ರಯಾಣ ಹೊಂದಿರುವ ಪಾತ್ರವಿದು. ನನಗಂತೂ ಬಹಳ ವಿಶೇಷ ಅನ್ನಿಸಿದ ಪಾತ್ರ. ಮತ್ತೆ ತೆರೆ ಮೇಲೆ ಬರುವುದಕ್ಕೆ ಸೂಕ್ತ ಅನ್ನಿಸಿದ ಪಾತ್ರ.
ಮಗನಿದ್ದಾನೆ ಮಗಳೂ ಇದ್ದಾಳೆ ಯಾರಾದರೇನು ಆರೋಗ್ಯ ಮುಖ್ಯ: ಎರಡನೇ ಮಗುವಿನ ಬಗ್ಗೆ ಧ್ರುವ ಮಾತು
- ಪ್ರಜ್ವಲ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ವಿಶೇಷ ಪಾತ್ರ ಅದು. ಈ ಸಿನಿಮಾ ಸಸ್ಪೆನ್ಸ್, ಥ್ರಿಲ್ಲರ್ ಮಾದರಿಯಲ್ಲಿಯೇ ಸಾಗುತ್ತದೆ. ಪನ್ನಗ ಮತ್ತು ವಿಶಾಲ್ ಪ್ರೀತಿಯಿಂದ ಈ ಸಿನಿಮಾ ರೂಪಿಸಿದ್ದಾರೆ.
- ಪ್ರೇಕ್ಷಕರು ನೀವು ಯಾವಾಗ ಮತ್ತೆ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದು ಎಂದು ಕೇಳುತ್ತಿದ್ದರು. ಈಗ ನಾನು ಬಂದಿದ್ದೇನೆ. ಅವರು ಚಿತ್ರಮಂದಿರದಲ್ಲಿ ಸಿನಿಮಾ ನೋಡಿ ಪ್ರೀತಿ ತೋರಿಸಬೇಕು.