Meghana Raj Gets Emotional: ಅಮ್ಮ ಅಂದ್ರೆ ಅಪ್ಪ ಅಪ್ಪ ಅಂತಾನೆ ರಾಯನ್..! ಭಾವುಕರಾದ ಮೇಘನಾ

Published : Jan 09, 2022, 07:27 PM IST
Meghana Raj Gets Emotional: ಅಮ್ಮ ಅಂದ್ರೆ ಅಪ್ಪ ಅಪ್ಪ ಅಂತಾನೆ ರಾಯನ್..! ಭಾವುಕರಾದ ಮೇಘನಾ

ಸಾರಾಂಶ

ಡ್ಯಾನ್ಸಿಂಗ್ ಚಾಂಪಿಯನ್ ವೇದಿಕೆಯಲ್ಲಿ ಪತಿಯ ನೆನೆದು ಕಣ್ಣೀರಾದ ಮೇಘನಾ ಅಮ್ಮ ಅನ್ನು ಅಂದ್ರೆ ಅಪ್ಪ ಅಪ್ಪ ಅನ್ನೋ ರಾಯನ್..!

ಬಹುಭಾಷಾ ನಟಿ ಮೇಘನಾ ರಾಜ್ ಸರ್ಜಾ ಈಗ ಮುದ್ದು ಮಗ ರಾಯನ್ ರಾಯ್ ಸರ್ಜಾನ ಆರೈಕೆಯಲ್ಲಿ ದಿನಕಳೆಯುತ್ತಿದ್ದಾರೆ. ಮುದ್ದು ಮಗನ ಆಟ, ತುಂಟಾಟ ನೋಡುತ್ತಾ ಅಭಿಮಾನಿಗಳೊಂದಿಗೂ ಇದನ್ನು ಶೇರ್ ಮಾಡುತ್ತಿರುತ್ತಾರೆ. ಅಪ್ಪನ ತರನೇ ತುಂಬಾ ತರ್ಲೆ ಮಾಡ್ತಾನಂತೆ ರಾಯನ್ ರಾಯ್ ಸರ್ಜಾ. ಯಾವಾಗಲೂ ಅಮ್ಮ ಅನ್ನು ಅಮ್ಮ ಅನ್ನು ಎಂದರೆ ಪುಟ್ಟ ಕಂದ ಅಪ್ಪ ಅಪ್ಪ ಎನ್ನುತ್ತಾನೆ ಎಂದಿದ್ದಾರೆ ನಟಿ. ಚಿರು ಬಗ್ಗೆ ಆಲೋಚಿಸಿದಾಗ ಅಲ್ಲಿ ಅವನಲ್ಲಿ ಯಾವಾಗಲೂ ನಗು ಇತ್ತು. ಇವತ್ತು ಎಲ್ಲರೂ ಚಿರುನನ್ನು ನೆನಪಿಸಿಕೊಳ್ಳುವಾಗ ಅವನ ನಗುವನ್ನೇ ನೆನಪಿಸಿಕೊಳ್ಳುತ್ತಾರೆ. ಖುಷಿಯನ್ನೇ ಹಂಚುತ್ತಾರೆ. ಮುಂದೆ ಏನಾಗುತ್ತೋ ಆಗಲಿ, ಹಿಂದೇನಾಯ್ತೋ ನಮಗೆ ಬೇಕಾಗಿಲ್ಲ. ಈಗಿನ ಕ್ಷಣ ಖುಷಿಯಾಗಿರಬೇಕು ಎನ್ನುತ್ತಿದ್ದ ಚಿರು ನೆನೆದು ನಟಿ ಭಾವುಕರಾಗಿದ್ದಾರೆ.

ಕಲರ್ಸ್ ಕನ್ನಡದಲ್ಲಿ ಡ್ಯಾನ್ಸಿಂಗ್ ಚಾಂಪಿಯನ್ ಪ್ರೋಮೋ ಶೇರ್ ಮಾಡಲಾಗಿದ್ದು ಇದರಲ್ಲಿ ಮೇಘನಾ ಬ್ಲಾಕ್‌ಔಟ್‌ಫೀಟ್‌ನಲ್ಲಿರುವುದನ್ನು ಕಾಣಬಹುದು. ಹಾಗೆಯೇ ಚಿರು ಮೇಘನಾರ ತ್ರೋಬನ್ಯಾಕ್ ವಿಡಿಯೋವನ್ನು ತೋರಿಸಲಾಗಿದ್ದು ಇದು ವೀಕ್ಷಕನ್ನೂ ಭಾವುಕರಾಗಿಸಿದೆ. ಈ ಪ್ರೋಮೋ ವಿಡಿಯೋ ನೋಡಿ ಜನರೂ ಭಾವುಕರಾಗಿದ್ದಾರೆ.

Meghana Rajನ ಭೇಟಿ ಮಾಡಿದ ಮಲಯಾಳಂ ನಟಿ Ahaana Krishna!

ಕನ್ನಡ ಚಿತ್ರರಂಗದ ದಿವಂಗತ ಯುವ ನಟ ಚಿರಂಜೀವಿ ಸರ್ಜಾ (Chiranjeevi Sarja) ಮತ್ತು ಮುದ್ದು ಚೆಲುವೆ ಮೇಘನಾ ರಾಜ್‌ (Meghana Raj) ಅವರ ಪುತ್ರ ರಾಯನ್ ರಾಜ್ ಸರ್ಜಾ (Raayan Raj Sarja) ಈಗೀಗ ಮಾತನಾಡುವುದಕ್ಕೆ ಶುರು ಮಾಡಿರುವ ವಿಡಿಯೋ ವೈರಲ್ ಆಗಿತ್ತು. ರಾಯನ್‌ನ ಜ್ಯೂನಿಯರ್ ಸಿಂಬಾ (Jr Simba) ಎಂದು ಕರೆಯುವ ನೆಟ್ಟಿಗರಿಗೆ ಮೇಘನಾ ಒಂದು ಸ್ಪೆಷಲ್ ವಿಡಿಯೋ ಹಂಚಿಕೊಂಡಿದ್ದಾರೆ. ಸಿಂಹ ಹೇಗೆ ಸೌಂಡು ಮಾಡುತ್ತೆ ಮಗ ಎಂದು ಮೇಘನಾ ಕೇಳಿದ್ದರು. ರಾಯನ್ ಹೇಗೆ ಪ್ರತಿಕ್ರಿಯೆ ನೀಡಿದ್ದಾನೆ ನೋಡಿ. ರಾಯನ್ ಮಾತನಾಡಲು ಪ್ರಯತ್ನಿಸುತ್ತಿರುವ ಮೊದಲ ಪದಗಳು ಎಂದು ಮೇಘನಾ ವಿಡಿಯೋ ಹಂಚಿಕೊಂಡಿದ್ದರು.

ಸ್ನೇಹಿತರ ದಿನಾಚರಣೆ ಪ್ರಯುಕ್ತ ನಟಿ ಮೇಘನಾ ರಾಜ್‌ ಚಿರು ಜೊತೆಗಿನ ಪೋಟೋ ಹಂಚಿಕೊಂಡು, ಲೈಫ್‌ ಲಾಂಗ್ ಫ್ರೆಂಡ್ ಎಂದು ಬರೆದುಕೊಂಡಿದ್ದರು. ಹಲವು ವರ್ಷಗಳ ಹಿಂದೆ ಇಬ್ಬರೂ ವಿದೇಶ ಟ್ರಿಪ್ ಹೋಗಿದ್ದ ಸ್ಥಳದಲ್ಲಿ ಸೆರೆ ಹಿಡಿದ ಫೋಟೋವೊಂದನ್ನು ಹಂಚಿಕೊಂಡು, ಅಗಲಿದ ಪತಿಗೆ ಸ್ನೇಹಿತರ ದಿನದ ಶುಭಾಶಯ ಹೇಳಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?