ಈಗಾಗಲೇ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿರುವ ಸಿನಿಮಾ ಬಿಡುಗಡೆಗಾಗಿ ಜನರು ಕಾಯುತ್ತಿದ್ದಾರೆ. ತಮ್ಮ ನೆಚ್ಚಿನ ರಾಕಿ ಭಾಯ್ ಬರ್ತ್ಡೇ ದಿನ ಅಭಿಮಾನಿಗಳು ಇನಷ್ಟು ಕುತೂಹಲದಲ್ಲಿದ್ದರು. ಇದೀಗ ಅಭಿಮಾನಿಗಳ ನಿರೀಕ್ಷೆಯಂತೆ ಹುಂಬಾಳೆ ಫಿಲಂಸ್ ಯಶ್ ಪೋಸ್ಟರ್ ಬಿಡುಗಡೆ ಮಾಡಿದೆ. ಅದ್ಧೂರಿಯಾಗಿರೋ ಪೋಸ್ಟರ್ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ಗಳಿಸುತ್ತಿದೆ. ಯಶ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಏ.14ರಂದು ಬಿಡುಗಡೆಯಾಗಲಿದೆ.
ರಾಕಿಂಗ್ ಸ್ಟಾರ್ ಯಶ್ ಇಂದು ತಮ್ಮ 38ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಶುಭ ಸಂದರ್ಭದಲ್ಲಿ ಅವರ ಬಹು ನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ರ ತಯಾರಕರು ತಮ್ಮ ಹೀರೋನ ಬರ್ತ್‌ಡೇ ದಿನ ಸಟ್ಐಲಿಷ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಕೋವಿಡ್ ಪ್ರಕರಣಗಳ ಹೆಚ್ಚಳ ಮತ್ತು ಹೆಚ್ಚಿನ ನಿರ್ಬಂಧಗಳ ನಂತರ, ಜರ್ಸಿ, ಆರ್‌ಆರ್‌ಆರ್ ಮತ್ತು ರಾಧೆ ಶ್ಯಾಮ್‌ನಂತಹ ಅನೇಕ ದೊಡ್ಡ ಸಿನಿಮಾಗಳ ತಂಡ ತಮ್ಮ ಬಿಡುಗಡೆ ದಿನಾಂಕವನ್ನು ಮುಂದೂಡಿದ್ದಾರೆ. ಸಿನಿಪ್ರಿಯರ ಕಣ್ಣುಗಳು ಪ್ಯಾನ್ ಇಂಡಿಯನ್ ಫಿಲ್ಮ್, ಕೆಜಿಎಫ್ 2 ಮೇಲೆ ನೆಟ್ಟಿದೆ. ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಕೆಜಿಎಫ್ ಚಿತ್ರತಂಡ ರಿಲೀಸ್ ದಿನಾಂಕದಲ್ಲಿ ದೃಢವಾಗಿ ನಿಂತಿದ್ದು ದಿನಾಂಕ ಬದಲಾಯಿಸುವ ಗೋಜಿಗೆ ಹೋಗಿಲ್ಲ. ಡೇಂಜರ್ ಬೋರ್ಡ್ ಹಿಂದೆ ರಾಕಿ ಭಾಯ್ ನಿಂತಿರುವ ಫೋಟೋ ಬಹಳಷ್ಟು ಕುತೂಹಲ ಮೂಡಿಸುವಂತಿದೆ.
ಕಲಿಯೋಕೆ ದುಡ್ಡಿಲ್ಲದೆ ಕಲಿಕೆ ನಿಲ್ಲಿಸಿದ ಹುಡುಗ ಜನರ ನೆಚ್ಚಿನ 'ರಾಕಿ ಭಾಯ್'
ನಮಗೆಲ್ಲರಿಗೂ ತಿಳಿದಿರುವಂತೆ, ಕೆಜಿಎಫ್ ಚಾಪ್ಟರ್ 2 ಅನ್ನು 14 ಏಪ್ರಿಲ್ 2022 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಇಂದು, ಯಶ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ, ಹೊಂಬಾಳೆ ಫಿಲಂಸ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಚಿತ್ರದ ಹೊಚ್ಚ ಹೊಸ ಪೋಸ್ಟರ್ ಅನ್ನು ಹಂಚಿಕೊಂಡಿದೆ, ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದೆ. ಇದು ಏಪ್ರಿಲ್ 14 ರ ಮೂಲ ಬಿಡುಗಡೆ ದಿನಾಂಕವನ್ನು ಹೊಂದಿದೆ.
ಚಿತ್ರತಂಡ ಊಹಿಸಿದಂತೆ ಕೊರೋನಾ ಪರಿಸ್ಥಿತಿಯು ಶೀಘ್ರದಲ್ಲೇ ನಿಯಂತ್ರಣಕ್ಕೆ ಬರುತ್ತದೆ. ಕೆಜಿಎಫ್ ಚಾಪ್ಟರ್ 2 ಅನ್ನು ಅದರ ಮೂಲ ಬಿಡುಗಡೆಯ ದಿನಾಂಕದಂದು ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡಲು ಅವಕಾಶ ಸಿಗಲಿದೆ ಎಂದು ಚಿತ್ರತಂಡ ದೃಢವಾಗಿ ನಂಬಿದಂತಿದೆ. ಪ್ರಶಾಂತ್ ನೀಲ್ ಅವರ ನೇತೃತ್ವದಲ್ಲಿ, ಕೆಜಿಎಫ್ ಅಧ್ಯಾಯ 2 ರಲ್ಲಿ ಸಂಜಯ್ ದತ್, ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್, ಪ್ರಕಾಶ್ ರಾಜ್ ಮತ್ತು ಇತರರು ನಟಿಸಿದ್ದಾರೆ.
ಮಕ್ಕಳಿಬ್ಬರು ಕೊಟ್ಟ ಸ್ಪೆಷಲ್ ಗಿಫ್ಟ್ ಹೇಗಿದೆ?
ಸಿನಿಮಾ ಬಿಡುಗಡೆಯ ದಿನಾಂಕವನ್ನು ಘೋಷಿಸುವ ಮೊದಲೇ, Zee ಎಂಟರ್‌ಟೈನ್‌ಮೆಂಟ್ ತನ್ನ ದಕ್ಷಿಣ ಕ್ಲಸ್ಟರ್ ಚಾನೆಲ್‌ಗಳು ಚಿತ್ರದ ವಿಶ್ವದಾದ್ಯಂತ ಸ್ಯಾಟಲೈಟ್ ಹಕ್ಕುಗಳನ್ನು ಪಡೆದುಕೊಂಡಿದೆ ಎಂದು ಹೇಳಿತ್ತು. ನಾಲ್ಕು ಚಾನೆಲ್‌ಗಳು - ಜೀ ತಮಿಳು, ಜೀ ತೆಲುಗು, ಜೀ ಕೇರಳಂ ಮತ್ತು ಜೀ ಕನ್ನಡ, ಚಿತ್ರದ ವಿಶ್ವದಾದ್ಯಂತ ಸ್ಯಾಟಲೈಟ್ ಹಕ್ಕುಗಳನ್ನು ಪಡೆದುಕೊಂಡಿವೆ.
Caution⚠️ Danger ahead !
Birthday wishes to our ROCKY BHAI . pic.twitter.com/TVeHXcsCzx
ನಾನು ಆರಂಭದಿಂದಲೂ ಭಾರತೀಯ ಪ್ರೇಕ್ಷಕರನ್ನು ರಂಜಿಸುತ್ತಿರುವ Zee ನೆಟ್‌ವರ್ಕ್‌ನೊಂದಿಗೆ ಸಹಭಾಗಿತ್ವವನ್ನು ಹೊಂದಲು ಉತ್ಸುಕನಾಗಿದ್ದೇನೆ. ನಾನು Zee ನೆಟ್‌ವರ್ಕ್‌ಗೆ ನನ್ನ ಕೃತಜ್ಞತೆಯನ್ನು ಸಲ್ಲಿಸಲು ಬಯಸುತ್ತೇನೆ ಮತ್ತು ಅವರಿಗೆ ಶುಭ ಹಾರೈಸುತ್ತೇನೆ. ನಮ್ಮ ಮುಂದಿನ ಯೋಜನೆಗಳಿಗಾಗಿ ನಾವು ಯಶಸ್ವಿ ಬಾಂಡ್ ಮುಂದುವರಿಸುತ್ತೇವೆ ಎಂದು ನಾನು ಭಾವಿಸುತ್ತೇನೆ ಎಂದು ಯಶ್ ಹೇಳಿದ್ದಾರೆ.
ಇಡೀ ಜಗತ್ತೇ ಯಶ್ ಅನ್ನೋ ತರುಣ ನಟನತ್ತ ತಿರುಗಿ ನೋಡೋ ಹಾಗೆ ಮಾಡಿದ್ದು ಕೆಜಿಎಫ್. ಮೂರು ವರ್ಷಗಳ ಕೆಳಗೆ ವಿಜಯ್ ಕಿರಗಂದೂರು ನಿರ್ಮಾಣದ ಬಹುಕೋಟಿ ಬಜೆಟ್‌ನ ಈ ಚಿತ್ರದ ನಿರ್ದೇಶಕರು ಪ್ರಶಾಂತ್ ನೀಲ್ (Prashanth Neel). ಇಡೀ ದೇಶದಲ್ಲೇ ಯಶ್ ಅಂದರೆ ಯುವಕರು ಮೀಸೆ ತಿರುವಿ ಅಭಿಮಾನ ಪ್ರಕಟಿಸಲು ಕಾರಣವಾದ ಚಿತ್ರವಿದು. ಈ ಸಿನಿಮಾದ ಬಳಿಕ ಯಶ್ ಇಂಡಿಯನ್ ಸ್ಟಾರ್ ಆಗಿ ಗುರುತಿಸಿಕೊಂಡರು. ಇತ್ತೀಚೆಗೆ ಅಮೀರ್‌ಖಾನ್ (Amir Khan) ರಂಥಾ ಬಾಲಿವುಡ್ ನಟರೂ ಯಶ್ ನಟನೆಯನ್ನು ಹಾಡಿ ಹೊಗಳಿದ್ದಾರೆ. ಅನೇಕ ಸ್ಟಾರ್ ನಟರು ಯಶ್ ಆಕ್ಟಿಂಗ್‌ಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಇದೀಗ ಬಹು ನಿರೀಕ್ಷೆಯ ಕೆಜಿಎಫ್ 2 ಪೋಸ್ಟರ್ ಯಶ್ ಬರ್ತ್ಡೇ ದಿನ ರಿಲೀಸ್ ಆಗಿದೆ. ಒಂದು ಅಚ್ಚರಿ ಅಂದರೆ ಈ ಹಿಂದೆ ಪ್ರಕಟಿಸಿದಂತೇ ಏಪ್ರಿಲ್ 14ರಂದೇ ಸಿನಿಮಾ ರಿಲೀಸ್ ಮಾಡೋದಾಗಿ ಸಿನಿಮಾ ತಂಡ ಹೇಳಿಕೊಂಡಿದೆ.