ಚಿರು ಪಾರ್ಥಿವ ಶರೀರ ಮುತ್ತಿಟ್ಟು, ಬಿಕ್ಕಿ ಬಿಕ್ಕಿ ಅತ್ತ ಪತ್ನಿ ಮೇಘನಾ

Published : Jun 08, 2020, 06:19 PM ISTUpdated : Jun 08, 2020, 06:34 PM IST
ಚಿರು ಪಾರ್ಥಿವ ಶರೀರ ಮುತ್ತಿಟ್ಟು, ಬಿಕ್ಕಿ ಬಿಕ್ಕಿ ಅತ್ತ ಪತ್ನಿ ಮೇಘನಾ

ಸಾರಾಂಶ

ಪಾರ್ಥಿವ ಶರೀರಕ್ಕೆ ಮುತ್ತಿಟ್ಟು, ಬಿಕ್ಕಿ ಬಿಕ್ಕಿ ಅತ್ತ ಪತ್ನಿ ಮೇಘನಾ/ ಚಿರಂಜೀವಿ ಸರ್ಜಾ ಅಕಾಲಿಕ ನಿಧನ/ ಇಡೀ ಸ್ಯಾಂಡಲ್ ವುಡ್ ಕಣ್ಣೀರು/ ಮಣ್ಣಲ್ಲಿ ಮಣ್ಣಾದ ಆಟಗಾರ

ಬೆಂಗಳೂರು(ಜೂ. 08)  ಗಂಡ ಹೆಂಡತಿ ಬಾಂಧವ್ಯವೇ ಹಾಗೆ. ಅಲ್ಲಿ ಪ್ರೀತಿ, ಮುನಿಸು ಎಲ್ಲವೂ ಇರುತ್ತದೆ. ಚೆನ್ನಾಗಿ ಓಡಾಡಿಕೊಂಡಿದ್ದ ಗಂಡ ಮರುದಿನ ಇಲ್ಲ ಎಂದಾರೆ ಆಕೆಯ ಮನಸಿಗೆ ಎಂತ ಆಘಾತ ಆಗಬಹುದು?  ಮೇಘನಾರ ಪರಿಸ್ಥಿತಿ ಮಾತ್ರ ಹೀಗೆ ಇದೆ.
"

ಬರೋಬ್ಬರಿ ಹತ್ತು ವರ್ಷಗಳ ಪ್ರೀತಿ, ಎರಡು ವರ್ಷದ ದಾಂಪತ್ಯ.. ಚಿರಂಜೀವಿ ಮೇಘನಾರ ಬಿಟ್ಟು ಹೊರಟು ಹೋಗಿದ್ದಾರೆ.  ಗರ್ಭಿಣಿಯಾಗಿರುವ ಮೇಘನಾರ ನೋವು ಮತ್ತೊಂದು ಪಟ್ಟು ಹೆಚ್ಚಿಗೆ ಇದೆ. ಇಂಥ ಜೀವವನ್ನು ಸಂತೈಸುವ ಸ್ಥಿತಿ ಯಾರಿಗೂ ಬಾರದಿರಲಿ. 

ಚಿರನಿದ್ರೆಗೆ ಜಾರಿದ ಚಿರಂಜೀವಿ ಸರ್ಜಾ

ಚಿರಂಜೀವಿ ಸರ್ಜಾ ಚಿರನಿದ್ರೆಗೆ ಜಾರಿದ್ದಾರೆ. ಕನಕಪುರ ರಸ್ತೆಯ ಫಾರ್ಮ್ ಹೌಸ್ ನಲ್ಲಿ ಮಲಗಿದ್ದಾರೆ.  ಈ ಅಂತಿಮ ವಿಧಿ ವಿಧಾನದ ದೃಶ್ಯಗಳನ್ನು ನೋಡಿತ್ತಿದ್ದರೆ ನಮಗೆ ಗೊತ್ತಿಲಲ್ಲದೇ ಕಣ್ಣಿರು ಬರುತ್ತದೆ.. ಅಂತಹುದರಲ್ಲಿ ಆರೈಕೆಯ ಗಂಡನ ಕಳೆದುಕೊಂಡ ಮೇಘನಾರ ಸ್ಥಿತಿ

ಪಾರ್ಥಿವ ಶರೀರವನ್ನು ಅಪ್ಪಿ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಮೇಘನಾರ ಕಂಡಾಗ ನಮ್ಮ ಕಣ್ಣಂಚಲ್ಲೂ ನೀರು . ಜತೆಯಾಗಿದ್ದ ಗೆಳೆಯ, ಇನಿಯ, ಸಂಗಾತಿ, ಬಾಳ ಪಯಣಿಗ ಇನ್ನಿಲ್ಲ. ಅರಗಿಸಿಕೊಳ್ಳುವುದು ಕಷ್ಟವೇ. ಹೊಟ್ಟೆಯಲ್ಲಿ ಲೋಕ ನೋಡಬೇಕಾದ ಮಗುವಿದೆ.

ಸಹೋದರ, ತಂದೆ-ತಾಯಿ, ಅತ್ತೆ-ಮಾವ ಎಲ್ಲರೂ ಸಮಾನ ನೋವು ಉಣ್ಣುತ್ತಿರುವವರೇ, ಮೇಘನಾರ ಪಾಲು ಎಲ್ಲದಕ್ಕಿಂತ ಜಾಸ್ತಿ. ಇಂಥ ಸಂಕಷ್ಟ ಕಾಲವನ್ನು ಎದುರಿಸುವ ಧೀಶಕ್ತಿ ಮೇಘನಾರಿಗೆ ಬರಲಿ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಟೆಕ್ಕಿ ಕೆಲಸ ಹೋದ್ರೇನು 'ರೋಡ್ ಸೈಡಲ್ಲಿ ಟಿಕ್ಕಿಪೂರಿ' ಮಾರುವ ಸಾಫ್ಟ್‌ವೇರ್ ಇಂಜಿನಿಯರ್; ನಟ ಜಗ್ಗೇಶ್ ಮೆಚ್ಚುಗೆ!
ಯೂಟ್ಯೂಬ್‌ನಲ್ಲಿರುವ ಟಾಕ್ಸಿಕ್ ಟೀಸರ್ ವಿರುದ್ಧ ಅಸಮಾಧಾನಕ್ಕೆ ಸೆನ್ಸರ್ ಬೋರ್ಡ್ ಮಹತ್ವದ ಹೇಳಿಕೆ