ಮುಂದಿನ ವಾರ 3000 ಚಿತ್ರಮಂದಿರಗಳಲ್ಲಿ ಮಾರ್ಟಿನ್‌ ಸಿನಿಮಾ ತೆರೆಗೆ: ಧ್ರುವ ಸರ್ಜಾ ಹೇಳಿದ್ದೇನು?

By Govindaraj S  |  First Published Oct 4, 2024, 11:01 AM IST

ಇದು ನನ್ನ ಸಿನಿಮಾ ಜರ್ನಿಯ ಬಿಗ್‌ ಬಜೆಟ್‌ ಚಿತ್ರ. ನಿರ್ಮಾಪಕರು ನನ್ನ ಮೇಲೆ ಭರವಸೆ ಇಟ್ಟು ದೊಡ್ಡ ಮೊತ್ತವನ್ನು ಚಿತ್ರಕ್ಕಾಗಿ ವೆಚ್ಚ ಮಾಡಿದ್ದಾರೆ. ತಂತ್ರಜ್ಞರು ಹಾಗೂ ಕಲಾವಿದರ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ.


ಅಕ್ಟೋಬರ್‌ 11ಕ್ಕೆ ಧ್ರುವ ಸರ್ಜಾ ನಟನೆಯ ‘ಮಾರ್ಟಿನ್‌’ ಸಿನಿಮಾ ತೆರೆಗೆ ಬರುತ್ತಿದೆ. ಈಗಾಗಲೇ ಚಿತ್ರಕ್ಕೆ ಸೆನ್ಸಾರ್‌ ಆಗಿದ್ದು, ಯು/ಎ ಪ್ರಮಾಣ ಪತ್ರ ಪಡೆದುಕೊಂಡಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಭಾರತದಾದ್ಯಂತ ಸುಮಾರು 3 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗೆ ಬರುತ್ತಿದೆ.

ಈ ಹಿನ್ನೆಲೆಯಲ್ಲಿ ಮಾತನಾಡಿರುವ ಧ್ರುವ ಸರ್ಜಾ, ‘ಇದು ನನ್ನ ಸಿನಿಮಾ ಜರ್ನಿಯ ಬಿಗ್‌ ಬಜೆಟ್‌ ಚಿತ್ರ. ನಿರ್ಮಾಪಕರು ನನ್ನ ಮೇಲೆ ಭರವಸೆ ಇಟ್ಟು ದೊಡ್ಡ ಮೊತ್ತವನ್ನು ಚಿತ್ರಕ್ಕಾಗಿ ವೆಚ್ಚ ಮಾಡಿದ್ದಾರೆ. ತಂತ್ರಜ್ಞರು ಹಾಗೂ ಕಲಾವಿದರ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಮೂರು ವರ್ಷಗಳ ನಂತರ ನನ್ನ ನಟನೆಯ ಸಿನಿಮಾ ತೆರೆಗೆ ಬರುತ್ತಿದೆ. ಇದು ನನಗೆ ವಿಶೇಷ ಸಿನಿಮಾ. ಅಲ್ಲದೆ ಈ ವರ್ಷ ನನ್ನ ಹುಟ್ಟುಹಬ್ಬದಂದು ನಾನೇ ಅಭಿಮಾನಿಗಳ ಬಳಿಗೆ ಹೋಗುತ್ತಿದ್ದು, ಈ ನಿಟ್ಟಿನಲ್ಲಿ ದಾವಣಗೆರೆಯಲ್ಲಿ ಅ.6ರಂದು ಚಿತ್ರದ ಪ್ರೀ-ರಿಲೀಸ್‌ ಈವೆಂಟ್‌ ಆಯೋಜಿಸಿದ್ದೇವೆ’ ಎಂದರು.

Latest Videos

ಮಾರ್ಟಿನ್ ಪ್ರಮೋಷನ್​ಗೆ ಮೀನಾವೇಷ ಎಣಿಸುತ್ತಿರೋದೇಕೆ?: ಚಿತ್ರತಂಡದ ಮೇಲೆ ಧ್ರುವ ಸರ್ಜಾ ಫ್ಯಾನ್ಸ್​ಗೆ ಬೇಸರ!

ಉದಯ್‌ ಕೆ ಮಹ್ತಾ, ‘ಅದ್ದೂರಿಯಾಗಿ ಸಿನಿಮಾ ತೆರೆಗೆ ಬರುತ್ತಿದೆ. ಚಿತ್ರದ ಬಜೆಟ್‌ ಬಗ್ಗೆ ಒಬೊಬ್ಬರು ಒಂದೊಂದು ಲೆಕ್ಕಾಚಾರ ಹಾಕುತ್ತಿದ್ದಾರೆ. ಎಲ್ಲಾ ಲೆಕ್ಕಾಚಾರಗಳಿಗೂ ಉತ್ತರ ಸಿಗಲಿದೆ. ಈ ಸಿನಿಮಾ ವ್ಯಾಪಾರದಲ್ಲಿ ಈಗಾಗಲೇ ನಾನು ಶೇ.55ರಷ್ಟು ಸೇಫ್‌ ಆಗಿದ್ದೇನೆ. ಬಿಸಿನೆಸ್‌ ಆಗುತ್ತಿದೆ. ನಿಜ ಹೇಳಬೇಕು ಎಂದರೆ ‘ಮಾರ್ಟಿನ್‌’ ಚಿತ್ರವನ್ನು ನಿರ್ದೇಶಿಸುವಂತೆ ಮೊದಲು ನಾನು ಕೇಳಿದ್ದು ಛಾಯಾಗ್ರಾಹಕ ಸತ್ಯ ಹೆಗಡೆ ಅವರನ್ನು. ಆದರೆ, ಅವರು ನಿರ್ದೇಶನ ಮಾಡಲ್ಲ ಎಂದರು. 

‘ಮಾರ್ಟಿನ್‌’ ಮೊದಲು ಕನ್ನಡ ಸಿನಿಮಾ. ಆ ನಂತರ ಪ್ಯಾನ್‌ ಇಂಡಿಯಾ ಸಿನಿಮಾ. ಅ.4ರಂದು ಹೈದರಾಬಾದ್‌ನಲ್ಲಿ ಹೀರೋ ಇಂಟ್ರೋಡಕ್ಷನ್‌ ಹಾಡು ಬಿಡುಗಡೆ, ಅ.5ಕ್ಕೆ ಹುಬ್ಬಳ್ಳಿಯಲ್ಲಿ ಧ್ರುವ ಸರ್ಜಾ ಅವರಿಂದ ಅಭಿಮಾನಿಗಳ ಭೇಟಿ, ಅ.6ಕ್ಕೆ ದಾವಣಗೆರೆಯಲ್ಲಿ ಧ್ರುವ ಸರ್ಜಾ ಹುಟ್ಟುಹಬ್ಬ ಹಾಗೂ ಚಿತ್ರದ ಪ್ರೀ ರಿಲೀಸ್‌ ಈವೆಂಟ್‌, ಅ.8ಕ್ಕೆ ಮುಂಬೈನಲ್ಲಿ ಮತ್ತೊಂದು ಹಾಡು ಬಿಡುಗಡೆ, ಅ.9ಕ್ಕೆ ದೆಹಲಿಯಲ್ಲಿ ‘ಮಾರ್ಟಿನ್‌’ ಮಾಧ್ಯಮ ಪತ್ರಿಕಾಗೋಷ್ಟಿ ನಡೆಯಲಿದೆ’ ಎಂದರು.

ಅಕ್ಟೋಬರ್‌ನಲ್ಲಿ ಶುರು ಸ್ಯಾಂಡಲ್‌ವುಡ್ ಸಿನಿಜಾತ್ರೆ: ಮಾರ್ಟಿನ್, UI, ಬಘೀರ.. ಯಾರಿಗೆ ವಿಜಯ ಮಾಲೆ!

ಚಿಕ್ಕಣ್ಣ, ‘ಈ ಚಿತ್ರದಲ್ಲಿ ನನ್ನ ಪಾತ್ರ ತುಂಬಾ ಚೆನ್ನಾಗಿದೆ. ಇದೇ ಮೊದಲ ಬಾರಿಗೆ ನಾನು ಕನ್ನಡ ಬಿಟ್ಟು ಬೇರೆ ಭಾಷೆಗಳಿಗೂ ಹೋಗುತ್ತಿದ್ದೇನೆ. ಬೇರೆ ಭಾಷೆಗಳಲ್ಲಿ ನನ್ನ ಪಾತ್ರಕ್ಕೆ ಯಾವ ರೀತಿ ಡಬ್ಬಿಂಗ್‌ ಮಾಡಿರುತ್ತಾರೆ ಎಂದು ನೋಡುವ ಕುತೂಹಲ ಇದೆ’ ಎಂದರು. ಸುದ್ದಿಗೋಷ್ಠಿಯಲ್ಲಿ ಕಲಾ ನಿರ್ದೇಶಕ ಮೋಹನ್‌ ಬಿ ಕೆರೆ, ಚಿತ್ರದ ನಾಯಕಿ ವೈಭವಿ ಶಾಂಡಿಲ್ಯ, ಛಾಯಾಗ್ರಾಹಕ ಸತ್ಯ ಹೆಗಡೆ, ನೃತ್ಯ ನಿರ್ದೇಶಕರಾದ ಮುರಳಿ, ಇಮ್ರಾನ್ ಸರ್ದಾರಿಯಾ ಇದ್ದರು.

click me!