ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣ್ಣ ಶುಕ್ರವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಹರ್ಷಿಕಾ ಪೂಣಚ್ಚ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಬಗ್ಗೆ ಪತಿ ಭುವನ್ ಪೊನ್ನಣ್ಣ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ.
ಬೆಂಗಳೂರು (ಅ.4): ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣ್ಣ ಶುಕ್ರವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಹರ್ಷಿಕಾ ಪೂಣಚ್ಚ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಬಗ್ಗೆ ಪತಿ ಭುವನ್ ಪೊನ್ನಣ್ಣ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ಶುಕ್ರವಾರ ಬೆಳಗಿನ ಜಾವ 3 ಗಂಟೆಗೆ ಹರ್ಷಿಕಾ ಹಾಗೂ ಭುವನ್ ಪೊನ್ನಣ್ಣ ಜೋಡಿ ಹೆಣ್ಣು ಮಗುವನ್ನು ಬರಮಾಡಿಕೊಂಡಿದೆ. ಮಗಳ ಆಗಮನದಿಂದ ಸಂತಸಗೊಂಡಿರೋ ಹರ್ಷಿಕಾ ಹಾಗೂ ಭುವನ್ ಕುಟುಂಬಸ್ಥರು ಸಂತಸಗೊಂಡಿದ್ದಾರೆ. ಎಲ್ಲರಿಗೂ ಹಾಯ್, ನಮ್ಮ 'ಚೈಕಾರ್ತಿ ಮೂಡಿ' ಜನ್ಮ ತಾಳಿರುವುದನ್ನು ತಿಳಿಸಲು ಬಹಳ ಖುಷಿಯಾಗುತ್ತಿದೆ. ಹರ್ಷಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ನನ್ನ ಪ್ರಕಾರ ಮಗಳು ಸಂಪೂರ್ಣವಾಗಿ ಹರ್ಷಿ ರೀತಿಯಲ್ಲಿಯೇ ಕಾಣುತ್ತಿದ್ದಾಳೆ. ಇನ್ನು ಹರ್ಷಿ ಪ್ರಕಾರ, ಮಗಳು ನನ್ನ ಕಾಪಿ ಎಂದು ಹೇಳುತ್ತಿದ್ದಾಳೆ. ಮುಂದೆ ನೋಡೋಣ..! ಇಲ್ಲಿಯವರೆಗಿನ ಪ್ರಯಾಣದಲ್ಲಿ ಎಲ್ಲರ ಹಾರೈಕೆ ಹಾಗೂ ಪ್ರೀತಿಗೂ ತುಂಬಾ ಥ್ಯಾಂಕ್ಸ್. ಎಲ್ಲರಿಗೂ ಪ್ರೀತಿಯಿಂದ..' ಎಂದು ಭುವನ್ ಪೊನ್ನಣ್ಣ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಇತ್ತೀಚೆಗೆ ಹರ್ಷಿಕಾ ಪೂಣಚ್ಚಾಗೆ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಹಾಗೂ ಶಿಲ್ಪಾ ದಂಪತಿಗಳು ಅದ್ಧೂರಿಯಾಗಿ ಬೇಬಿ ಶವರ್ ಪಾರ್ಟಿ ಮಾಡಿದ್ದರು. ಈ ಕಾರ್ಯಕ್ರಮ ಗಣೇಶ್ ಅವರ ಮನೆಯಲ್ಲಿ ನಡೆದಿತ್ತು. ಗಣೇಶ್ ಮನೆಯನ್ನು ಅದ್ಧೂರಿಯಾಗಿ ಬಲೂನ್ ಗಳಿಂದ ಸಿಂಗಾರ ಮಾಡಿದ್ದರು. ಬೇಬಿ ಶವರ್ ಗೆ ಸರಿ ಹೊಂದುವಂತಹ ನೀಲಿ ಮತ್ತು ಪಿಂಕ್ ಬಣ್ಣದ ಬಲೂನ್ ನಿಂದ ಸಿಂಗರಿಸಿದ್ದು, ಮರದ ಕೊಂಬೆಗೆ ಹಾಕಿದ ಜೋಕಾಲಿ ಮೇಲೆ ಮಗು ಮಲಗಿರುವ ಥೀಮ್ ನಲ್ಲಿ ಕೇಕ್ ರೆಡಿ ಮಾಡಿಸಿ, ಕತ್ತರಿಸಿ ಸಂಭ್ರಮಿಸಿದ್ದಾರೆ.
ಹರ್ಷಿಕಾ ಪೂಣಚ್ಚ ಈ ಅದ್ಧೂರಿ ಸಮಾರಂಭದಲ್ಲಿ ಗಣೇಶ್, ಶಿಲ್ಪಾ ಸ್ಯಾಂಡಲ್ ವುಡ್ ನ ಸೆಲೆಬ್ರಿಟಿಗಳನ್ನು ಆಮಂತ್ರಿಸಿದ್ದು, ತಾರೆಯರು ಭಾಗಿಯಾಗಿ ಸಂಭ್ರಮಿಸುವ ಮೂಲಕ ಕಾರ್ಯಕ್ರಮದ ಶೋಭೆಯನ್ನು ಹೆಚ್ಚಿಸಿದ್ದರು.
undefined
ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ಹರ್ಷಿಕಾ ಪೂಣಚ್ಚಗೆ ಸರ್ಪ್ರೈಸ್ ನೀಡಿದ ಗೋಲ್ಡನ್ ಸ್ಟಾರ್ ಜೋಡಿ…
ಕೊಡಗಿನ ಅಮ್ಮತ್ತಿಯಲ್ಲಿ ಜನಿಸಿದ್ದ ಹರ್ಷಿಕಾ ಪೂಣಚ್ಚ, 2023ರಲ್ಲಿ ಭುವನ್ ಪೊನ್ನಣ್ಣ ಅವರನ್ನು ವಿವಾಹವಾಗಿದ್ದರು. ಭುವನ್ ಪೊನ್ನಣ್ಣ, ನಟ, ಮಾಡೆಲ್ ಕೂಡ ಆಗಿದ್ದಾರೆ. ಬಿಗ್ ಬಾಸ್‌ನಲ್ಲಿ ಸ್ಪರ್ಧೆ ಮಾಡುವ ಮೂಲಕ ಪ್ರಖ್ಯಾತಿಗೆ ಬಂದಿದ್ದರು.
ಅಂಕಲ್ ಅಂದೋರನ್ನೇ ಮದ್ವೆಯಾದ ಹರ್ಷಿಕಾ ಪೂಣಚ್ಚ! ವಿಚಿತ್ರ ಲವ್ ಸ್ಟೋರಿ ನೆನಪಿಸಿಕೊಂಡ ನಟಿ