ಅಕ್ಟೋಬರ್‌ನಲ್ಲಿ ಶುರು ಸ್ಯಾಂಡಲ್‌ವುಡ್ ಸಿನಿಜಾತ್ರೆ: ಮಾರ್ಟಿನ್, UI, ಬಘೀರ.. ಯಾರಿಗೆ ವಿಜಯ ಮಾಲೆ!

By Govindaraj SFirst Published Sep 15, 2024, 6:36 PM IST
Highlights

ಈ ಸಾರಿ ಕೂಡ ಅಕ್ಟೋಬರ್ ತಿಂಗಳಲ್ಲಿ ಎಲ್ಲಾ ಭಾಷೆಗಳಲ್ಲಿ ಬಿಗ್ ಸ್ಟಾರ್ ಗಳ ಸಿನಿಮಾಗಳು ರಿಲೀಸ್ ಆಗ್ತಾ ಇವೆ. ಅಕ್ಟೋಬರ್ ನಲ್ಲಿ ಬರಲಿರೋ ಆ ಸಿನಿಮಾಗಳು ಯಾವ್ಯಾವು..? ಬಿಗ್ ಸ್ಟಾರ್ ಗಳ ಅಕ್ಟೋಬರ್ ವಾರ್ ಹೇಗಿರುತ್ತೆ. 

ಅಕ್ಟೋಬರ್ ತಿಂಗಳು ಅಂದ್ರೆ ಫಿಲ್ಮ್ ಮೇಕರ್ಸ್ ಪಾಲಿಗೆ ಹಬ್ಬ ಇದ್ದಹಾಗೆ. ದಸರಾ ಹಬ್ಬ, ಸಾಲು ಸಾಲು ರಜೆಗಳು. ಈ ರಜೆಯಲ್ಲಿ ಚಿತ್ರಮಂದಿರಗಳಿಗೆ ಫ್ಯಾಮಿಲಿ ಆಡಿಯನ್ಸ್ ಬರ್ತಾರೆ ಅಂತಲೇ ಮೊದಲಿಂದಲೂ ಬಿಗ್ ಸಿನಿಮಾಗಳನ್ನ ಅಕ್ಟೋಬರ್ನಲ್ಲಿ ರಿಲೀಸ್ ಮಾಡೋ ಪರೀಪಾಠ ಇದೆ. ಈ ಸಾರಿ ಕೂಡ ಅಕ್ಟೋಬರ್ ತಿಂಗಳಲ್ಲಿ ಎಲ್ಲಾ ಭಾಷೆಗಳಲ್ಲಿ ಬಿಗ್ ಸ್ಟಾರ್ ಗಳ ಸಿನಿಮಾಗಳು ರಿಲೀಸ್ ಆಗ್ತಾ ಇವೆ. ಅಕ್ಟೋಬರ್ ನಲ್ಲಿ ಬರಲಿರೋ ಆ ಸಿನಿಮಾಗಳು ಯಾವ್ಯಾವು..? ಬಿಗ್ ಸ್ಟಾರ್ ಗಳ ಅಕ್ಟೋಬರ್ ವಾರ್ ಹೇಗಿರುತ್ತೆ. ಈಗಾಗ್ಲೇ ಭೀಮ, ಕೃಷ್ಣಂ ಪ್ರಣಯ ಸಖಿ ಸಿನಿಮಾಗಳ ಗೆಲುವಿನೊಂದಿಗೆ ಫಾರ್ಮ್ ಗೆ ಬಂದಿರೋ ಕನ್ನಡ ಚಿತ್ರರಂಗ, ಅಕ್ಟೋಬರ್ ತಿಂಗಳಲ್ಲಿ ವಿಜಯ ದಶಮಿ ಆಚರಿಸೋಕೆ ಸಿದ್ದವಾಗಿದೆ. ಅಕ್ಟೋಬರ್ ತಿಂಗಳಲ್ಲಿ ದಸರಾ ರಜೆಯ ಹೊತ್ತಲ್ಲಿ ಮೂರು ಬಿಗ್ ಸ್ಟಾರ್ ಗಳ ಸಿನಿಮಾಗಳು ತೆರೆಗೆ ಬರಲಿದ್ದು ಸ್ಯಾಂಡಲ್ ವುಡ್ ಪಾಲಿಗೆ ಹಬ್ಬದ ರಂಗು ತ್ರಿಬಲ್ ಆಗಲಿದೆ. 

ಒಂದು ಕಡೆ ಅಕ್ಟೋಬರ್ ನಲ್ಲಿ ಬರಲಿರೋ ಸ್ಟಾರ್  ಸಿನಿಮಾಗಳ ಲಿಸ್ಟ್ ನೋಡಿ ಸಿನಿಪ್ರಿಯರು ಥ್ರಿಲ್ ಆಗಿದ್ರೆ, ಇನ್ನೊಂದು ಕಡೆ ಈ ತ್ರಿಬಲ್ ಸ್ಟಾರ್ ಗಳ ನಡುವಿನ ಅಕ್ಟೋಬರ್ ವಾರ್ ನಲ್ಲಿ ಗೆಲ್ಲೋರು ಯಾರು ಅನ್ನೋ ಚರ್ಚೆ ಕೂಡ ಶುರುವಾಗಿದೆ. ಈಗಾಗ್ಲೇ ಅನೌನ್ಸ್ ಆಗಿರೋ ಹಾಗೆ ಌಕ್ಷನ್ ಪ್ರಿನ್ಸ್ ಧ್ರುವ ನಟನೆಯ ಮಾರ್ಟಿನ್ ಅಕ್ಟೋಬರ್ 11ಕ್ಕೆ ತೆರೆಗೆ ಬರಲಿದೆ.    ಪ್ಯಾನ್ ವರ್ಲ್ಡ್ ಪ್ರೆಸ್ ಮೀಟ್ ಮಾಡಿ ತಮ್ಮದು ಪ್ಯಾನ್ ವರ್ಲ್ಡ್ ಸಿನಿಮಾ ಅಂತ ಎದೆತಟ್ಟಿ ಹೇಳಿರೋ ಮಾರ್ಟಿನ್ ಟೀಂ , ತನ್ನ ಟ್ರೈಲರ್ ಮೂಲಕ ಈಗಾಗ್ಲೇ ವಿಶ್ವವೇ ತಿರುಗಿ ನೋಡುವಂತೆ ಮಾಡಿದೆ. ಕಣ್ಣು ಮಿಟಿಕಿಸೋ ಹಾಗಿಲ್ಲ. ಮೈ ರೋಮಾಂಚನ ಗೊಳ್ಳದೇ ಇರೋದಿಲ್ಲ. ನೋಡ್ತಾ   ಇದ್ರೆ ಹುಬ್ಬೇರಿಸಿದೇ ಇರೋಕೆ ಸಾಧ್ಯವೇ ಇಲ್ಲ. ಇದು ಇಂಟರ್ನ್ಯಾಷನಲ್ ಲೆವೆಲ್ನಲ್ಲಿ ಸೌಂಡ್ ಮಾಡೋಕೆ ಸಜ್ಜಾಗಿರೋ ಮಾರ್ಟಿನ್ ಸಿನಿಮಾದ ಆ್ಯಕ್ಷನ್ ಟ್ರೇಲರ್ ನೋಡಿದವರು ಹೇಳಿದ್ದ ಮಾತು.

Latest Videos

ಯಾಕಂದ್ರೆ ಅದ್ಧೂರಿ ಹುಡುಗ ಮಾರ್ಟಿನ್ ಸ್ಯಾಂಪಲ್ಸ್ಗಳಲ್ಲಿ ಆ ತರಹದ ಆ್ಯಕ್ಷನ್ ಧಮಾಕ ಎಲ್ಲರ ಗಮನ ಸೆಳೆದಿದೆ. ಎ.ಪಿ ಅರ್ಜುನ್ ನಿರ್ದೇಶನದ , ಉದಯ್ ಮೆಹತಾ ನಿರ್ಮಾಣದ ಈ ಮೆಗಾಸಿನಿಮಾ ಹಬ್ಬದ ರಂಗು ಹೆಚ್ಚಿಸಲಿದೆ. ಇನ್ನೂ ಇದೇ ಅಕ್ಟೋಬರ್ ನಲ್ಲಿ  ರೋರಿಂಗ್ ಸ್ಟಾರ್ ಶ್ರೀಮುರುಳಿ ರೋರ್ ಮಾಡೋಕೆ ಬರ್ತಾ ಇದ್ದಾರೆ. ಹೊಂಬಾಳೆ ಪ್ರೊಡಕ್ಷನ್ಸ್ ನಿರ್ಮಾಣದ ಬಿಗ್ ಬಜೆಟ್ ಮೂವಿ ಬಘೀರ ಅಕ್ಟೋಬರ್ 31ನೇ ತಾರೀಖು ರಿಲೀಸ್ ಆಗಲಿದೆ. ಟೈಟಲೇ ಹೇಳುವುಂತೆ ಬಘೀರ ಔಟ್ ಎಂಡ್ ಔಟ್ ಆ್ಯಕ್ಷನ್ ಡ್ರಾಮಾ. ಹಿಂದೆಂದು ಕಾಣಿಸದ ಗೆಟಪ್ನಲ್ಲಿ ಶ್ರೀಮುರಳಿ ಮಿಂಚಿದ್ದಾರೆ..ಖಾಕಿ ತೊಟ್ಟು  ಖದರ್ ಲುಕ್ ನಲ್ಲಿ ಖಡಕ್ ಡೈಲಾಗ್ ಹೊಡೆಯಲಿದ್ದಾರೆ.ಬಘೀರ ಸಿನಿಮಾಗೆ ಪ್ರಶಾಂತ್ ನೀಲ್ ಕಥೆಯನ್ನ ಬರೆದಿದ್ದು.  ಡಾ.ಸೂರಿ ಌಕ್ಷನ್ ಕಟ್ ಹೇಳಿದ್ದಾರೆ. 

ನೀಲ್ ಬರೆದಿರೋ ಕಥೆ ಅಂದ್ರೆ ಅದು   ಯಾವ್ ಲೆವೆಲ್ಗೆ ಇರಬಹುದು ಅಂತ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಚಿತ್ರದ ಟೀಸರ್ ಕೂಡ ಅದ್ಭುತವಾಗಿ ಮೂಡಿಬಂದಿದ್ದುಬಘೀರ ಸಿನಿಮಾವನ್ನ ನೋಡೋಕೆ ಸಿನಿಪ್ರಿಯರು ಸಖತ್ ಎಕ್ಸೈಟ್ ಆಗಿದ್ದಾರೆ. ಈ ಮಾರ್ಟಿನ್ ಮತ್ತು ಬಘೀರ ಇಬ್ಬರ ನಡುಎವ ರಿಯಲ್ ಸ್ಟಾರ್ ಉಪ್ಪಿ ಕೂಡ ಎಂಟ್ರಿ ಕೊಡಲಿದ್ದಾರೆ. ಉಪ್ಪಿ ನಟನೆ ನಿರ್ದೇಶನದ UI ಮೂವಿ ಕೂಡ ಅಕ್ಟೋಬರ್ ತಿಂಗಳಲ್ಲಿ ತೆರೆಗೆ ಬರಲಿದೆ. ರಿಯಲ್ ಸ್ಟಾರ್ ನಿರ್ದೇಶನ ಮಾಡ್ತಾರೆ ಅಂದ್ರೆ ಇಡೀ ಸಿನಿಜಗತ್ತೇ ಒಂದು ಸಾರಿ ತಿರುಗಿ ನೋಡುತ್ತೆ ಸೋ ಉಪ್ಪಿ ಲಾಂಗ್ ಗ್ಯಾಪ್ ನಂತರ ಡೈರೆಕ್ಷನ್ ಮಾಡಿರೋ UI ಬಗ್ಗೆಯೂ ದೊಡ್ಡ ಹೈಪ್ ಕ್ರಿಯೇಟ್ ಆಗಿದೆ.  UI ಸಿನಿಮಾದ ಡಿಫ್ರೆಂಟ್ ಪೋಸ್ಟರ್ಸ್,  ಟ್ರೋಲ್ ಆಗುತ್ತೆ ಹಾಡು.. ಮತ್ತು ಟೀಸರ್..  ಚಿತ್ರದ ಬಗ್ಗೆ ದೊಡ್ಡ ನಿರೀಕ್ಷೆ ಮೂಡುವಂತೆ ಮಾಡಿವೆ. 

ಸದ್ಯಕ್ಕೆ ಅಕ್ಟೋಬರ್ ನಲ್ಲಿ ಬರ್ತಿನಿ ಅಂತ ಅನೌನ್ಸ್ ಮಾಡಿರೋ ಉಪ್ಪಿ ಸದ್ಯದಲ್ಲೇ ಪಕ್ಕಾ ಡೇಟ್  ಅನೌನ್ಸ್ ಮಾಡಲಿದ್ದಾರೆ. ಯೆಸ್ ಜಸ್ಟ್ ಸ್ಯಾಂಡಲ್ ವುಡ್ ಮಾತ್ರ ಅಲ್ಲ ಬೇರೆ ಬೇರೆ ಭಾಷೆಗಳಲ್ಲೂ ಬಿಗ್ ಸ್ಟಾರ್ ಗಳ ಸಿನಿಮಾಗಳು ಅಕ್ಟೋಬರ್ ತಿಂಗಳಲ್ಲಿ ಥಿಯೇಟರ್ ಅಂಗಳಕ್ಕೆ ಇಳಿಯಲಿವೆ. ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ವೆಟ್ಟೈಯಾನ್ ಮೂವಿ ಅಕ್ಟೋಬರ್ 10ಕ್ಕೆ ವರ್ಲ್ಡ್ ವೈಡ್ ರಿಲೀಸ್ ಆಗಲಿದೆ. ಜೈಲರ್ ಸಿನಿಮಾದ ಸೂಪರ್ ಸಕ್ಸಸ್ ಬಳಿಕ ತಲೈವಾ ನಟನೆಯಲ್ಲಿ ಬರ್ತಾ ಇರೋ ಬಹುನಿರೀಕ್ಷೆಯ  ಸಿನಿಮಾ ಇದು.  ವೆಟ್ಟೈಯಾನ್ ನಲ್ಲಿನ ತಲೈವಾ ಲುಕ್ ನೋಡಿವರು ಮತ್ತೊಂದು ಬ್ಲಾಕ್ ಬಸ್ಟರ್ ಮೂವಿ ಲೋಡಿಂಗ್ ಅಂತಿದಾರೆ. 

ಸೂರ್ಯ ನಟನೆಯ 'ಜೈ ಭೀಮ್' ಸಿನಿಮಾ ನಿರ್ದೇಶಿಸಿದ್ದ ಟಿ.ಜೆ. ಜ್ಞಾನವೇಲ್ 'ವೆಟ್ಟೈಯಾನ್'ಗೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದ ಮೇಲೆ ನಿರೀಕ್ಷೆ ದುಪ್ಪಟ್ಟಾಗೋದಿಕ್ಕೆ ಮತ್ತೊಂದು ಕಾರಣ ತಲೈವಾ ಹಾಗೂ ಬಿಗ್ ಬಿ ಸಂಗಮ. ಭಾರತೀಯ ಚಿತ್ರರಂಗದ ದಿಗ್ಗಜರಾದ ಬಿಗ್ ಬಿ ಅಮಿತಾಬ್ ಬಚ್ಚನ್ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ವೆಟ್ಟೈಯಾನ್ ಸಿನಿಮಾ ಮೂಲಕ ಮೂರು ದಶಕದ ಬಳಿಕ ಮತ್ತೊಮ್ಮೆ ಒಟ್ಟಿಗೆ ನಟಿಸಿದ್ದಾರೆ. ಸೋ ಈ ಮೂವಿ ಬಗ್ಗೆಯೂ ದೊಡ್ಡ ನಿರೀಕ್ಷೆ ಇದೆ. ಇನ್ನೂ ಇದೇ ಅಕ್ಟೋಬರ್ 11ಕ್ಕೆ ಸೂರ್ಯ ನಟನೆಯ ಮತ್ತೊಂದು ಮೆಗಾ ಬಜೆಟ್ ಮೂವಿ ಕಂಗುವಾ ರಿಲೀಸ್ ಆಗಬೇಕಿತ್ತು. 

ಜೈಲು ಸಿಬ್ಬಂದಿ ಮೇಲೆ ದರ್ಪ ತೋರಿಸಿದ್ದೇಕೆ ಈ ಪೊರ್ಕಿ?: ದರ್ಶನ್‌ಗೆ ಹಳೇ ಟಿವಿ ಬೇಡ್ವಂತೆ.. ಹೊಸದೇ ಆಗಬೇಕಂತೆ!

ಇದು ಕೂಡ ಬಿಗ್ ಬಜೆಟ್ ಌಕ್ಷನ್ ಅಡ್ವೆಂಚರ್ ಚಿತ್ರವಾಗಿದ್ದು ದೊಡ್ಡ ಬಾಕ್ಸ್ ಆಫೀಸ್ ಫೈಟ್ ನಡೆಯೋ ಸೂಚನೆ ಸಿಕ್ಕಿತ್ತು. ಆದ್ರೆ ಕೊನೆ ಕ್ಷಣದಲ್ಲಿ ಕಂಗುವಾ ಬಿಡುಗಡೆ ಮುಂದಕ್ಕೆ ಹೋಗಿದ್ದು ಅಕ್ಟೋಬರ್ ವಾರ್ ನಲ್ಲಿ ಕೊಂಚ ಬಿರುಸು ಕಡಿಮೆ ಆಗಿದೆ. ಸೆಪ್ಟೆಂಬರ್ ಕೊನೆ ವಾರದಲ್ಲೇ ಜ್ಯೂ,ಎನ್.ಟಿ.ಆರ್ ನಟನೆಯ ದೇವರ ಪಾರ್ಟ್ -1 ತೆರೆಗೆ ಬರಲಿದ್ದು, ಅಕ್ಟೋಬರ್ ವಾರ್ ಗೆ ಈ ಮೂವಿ ಅರ್ಲಿ ಎಂಟ್ರಿ ಕೊಡಲಿದೆ. ಒಟ್ನಲ್ಲಿ ಸಿನಿಪ್ರಿಯರ ಪಾಲಿಗಂತೂ ಅಕ್ಟೋಬರ್ ತಿಂಗಳು ದಸರಾ ಜೊತೆಗೆ ಸಿನಿಮಾ ಹಬ್ಬ ಕೂಡ ಎದುರುರಾಗಲಿದೆ. ಈ ದಸರಾ ಫಿಲ್ಮ್ ಫೆಸ್ಟ್ ನಲ್ಲಿ ಪ್ರೇಕ್ಷಕರನ್ನ ರಂಜಿಸಿ, ಬಾಕ್ಸ್ ಆಫೀಸ್ ನಲ್ಲಿ ಜಯಗಳಿಸಿ, ಹಬ್ಬದ ಸವಿ ಸವಿರೋರು ಯಾರು ಅನ್ನೋದನ್ನ ಕಾದುನೋಡಬೇಕು.

click me!