
ಕಮ್ಮಿಯಾಗಿಲ್ಲ ದರ್ಶನ್ ದೌಲತ್ತು.. ಹಳೇ ವರಸೆ ಮತ್ತೆ ತೋರಿಸಿದ ದಾಸ..! ಬಳ್ಳಾರಿ ಜೈಲು ಸಿಬ್ಬಂದಿ ಮೇಲೆ ದರ್ಪ ತೋರಿಸಿದ್ದೇಕೆ ಡೆವಿಲ್..? ‘ನಾನಿನ್ನೂ ಆರೋಪಿ.. ಅಪರಾಧಿಯಲ್ಲ..’ವೆಂದ ದರ್ಶನ್.. ಇದೆಲ್ಲವನ್ನು ನೋಡೋದೇ ಈ ಕ್ಷಣದ ವಿಶೇಷ ಪೊರ್ಕಿ ಪೊಗರು. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಆರೋಪಿ ದರ್ಶನ್ ಜೈಲು ಸೇರಿ ಮೂರು ತಿಂಗಳಾಯ್ತು. ನಿನ್ನೆಯ ದರ್ಶನ್ ದೌಲತ್ತು ನೋಡಿದ್ರೆ ಒಂದಿಷ್ಟು ಪಶ್ಚಾತಾಪ ಇಲ್ಲವೆಂದೆನಿಸುತ್ತೆ. ಒಂದಿಷ್ಟು ದರ್ಪ ಕಡಿಮೆಯಾಗಿಲ್ಲವೆಂದೆನಿಸುತ್ತೆ. ಅದೇನೋ ಹೇಳ್ತಾರಲ್ವಾ ನಾಯಿ ಬಾಲ ಯಾವತ್ತಿದ್ರೂ ಡೊಂಕು ಅಂತ.
ದರ್ಶನ್ ವಿಚಾರದಲ್ಲಿ ಅವನ ದೌಲತ್ತಲ್ಲಿ ಈ ಮಾತು ನಿಜ ಅನಿಸುತ್ತೆ. ದರ್ಶನ್ ಬಳ್ಳಾರಿ ಜೈಲಿಗೆ ಹೋದ್ಮೇಲೆ ಅಲ್ಲಿ ಅವನೊಬ್ಬನಿಗೆ ಮಾತ್ರ ತೊಂದರೆಯಾಗುತ್ತಿಲ್ಲ. ವಿಚಾರಣಾಧೀಣ ಕೈದಿಯಾಗಿ ಬಳ್ಳಾರಿ ಜೈಲು ಸೇರಿರುವ ದರ್ಶನ್ಗೆ ಒಂದು ಸಂಕಟವಾದ್ರೆ ಅಲ್ಲಿನ ಸಿಬ್ಬಂದಿಗೆ ಬೇರೆಯದ್ದೇ ತಲೆನೋವಾಗಿದೆ. ಪರಪ್ಪನ ಅಗ್ರಹಾರದಲ್ಲಿ ಯಜಮಾನನಂತಿದ್ದ ದರ್ಶನ್ಗೆ ಈಗ ಬಳ್ಳಾರಿ ಜೈಲಿನ ಕಠೀಣ ನಿಯಮಗಳು ಕಷ್ಟ ಆಗೇ ಆಗುತ್ತೆ. ಇಲ್ಲಿ ದರ್ಶನ್ಗೆ ಆಗುತ್ತಿರುವ ಕಷ್ಟಗಳನ್ನು ಒತ್ತಟಿಗಿಡಿ ದರ್ಶನ್ ಬಳ್ಳಾರಿ ಜೈಲಿಗೆ ಹೋದ್ಮೇಲೆ ಅಲ್ಲಿನ ಅಧಿಕಾರಿಗಳು ಏನೆಲ್ಲ ಅನುಭವಿಸ್ತಿದಾರೆ ಗೊತ್ತಾ?
ದರ್ಶನ್ ಬಳ್ಳಾರಿ ಜೈಲಿನಲ್ಲಿರದೇ ಒದ್ದಾಡುತ್ತಿರುವ ಸಂದರ್ಭದಲ್ಲಿ ಡಿ ಗ್ಯಾಂಗ್ನ ನ್ಯಾಯಾಂಗ ಬಂಧನ ಮತ್ತೆ ವಿಸ್ತರಣೆಯಾಗಿದೆ. ಇಂದಿಗೆ ದರ್ಶನ್ ನ್ಯಾಯಾಂಗ ಬಂಧನ ಮುಕ್ತಾಯಗೊಂಡಿತ್ತು. ಆದ್ರೆ ನ್ಯಾಯಾಲಯ ಮತ್ತೆ ನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನವನ್ನು ವಿಸ್ತರಿಸಿದ್ದಾರೆ. ಒಟ್ಟಿನಲ್ಲಿ ಅದೇನೇ ಆಗ್ಲಿ ದರ್ಶನ್ ಗೆ ಇಷ್ಟೆಲ್ಲ ಆದರೂ ಅವನ ದೌಲತ್ತು ಮಾತ್ರ ಕಡಿಮೆಯಾಗಿಲ್ಲ ಅನ್ನೋದೇ ಎಲ್ಲರಿಗೂ ಬೇಸರವನ್ನುಂಟು ಮಾಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.