ನರ್ತಕಿ ಚಿತ್ರಮಂದಿರಕ್ಕೆ ಇಂದು ಎಂಟ್ರಿ ಕೊಡಲಿದ್ದಾರೆ ಮಾರ್ಟಿನ್ ಧ್ರುವ ಸರ್ಜಾ: ಎಷ್ಟು ಗಂಟೆಗೆ.. ಇಲ್ಲಿದೆ ಮಾಹಿತಿ

By Govindaraj SFirst Published Oct 11, 2024, 9:40 AM IST
Highlights

ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ಮಾರ್ಟಿನ್ ಹವಾ ಶುರುವಾಗಿದ್ದು, ಬೆಳಗ್ಗೆ 10 ಗಂಟೆ ಶೋ ಹೌಸ್ ಫುಲ್ ಆಗಿದೆ. ಮಾರ್ಟಿನ್ ಗ್ರ್ಯಾಂಡ್ ವೆಲ್‌ಕಮ್‌ಗೆ ಧ್ರುವ ಸರ್ಜಾ ಫ್ಯಾನ್ಸ್ ಸಜ್ಜಾಗಿದ್ದು, ಈಗಾಗಲೇ ತಟಮೆ, ಡೊಳ್ಳು ಕುಣಿತ ಕಂಬ್ಸಾಳೆ ಸೇರಿ ವಾಧ್ಯ ಘೊಷಗಳ ಹಬ್ಬ ಶುರುವಾಗಿದೆ.
 

ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ಮಾರ್ಟಿನ್ ಹವಾ ಶುರುವಾಗಿದ್ದು, ಬೆಳಗ್ಗೆ 10 ಗಂಟೆ ಶೋ ಹೌಸ್ ಫುಲ್ ಆಗಿದೆ. ಮಾರ್ಟಿನ್ ಗ್ರ್ಯಾಂಡ್ ವೆಲ್‌ಕಮ್‌ಗೆ ಧ್ರುವ ಸರ್ಜಾ ಫ್ಯಾನ್ಸ್ ಸಜ್ಜಾಗಿದ್ದು, ಈಗಾಗಲೇ ತಟಮೆ, ಡೊಳ್ಳು ಕುಣಿತ ಕಂಬ್ಸಾಳೆ ಸೇರಿ ವಾಧ್ಯ ಘೊಷಗಳ ಹಬ್ಬ ಶುರುವಾಗಿದೆ. ದಸರಾ ಹಬ್ಬದ ಆಯುಧ ಪೂಜೆ ದಿನವೇ ಅದ್ಧೂರಿಯಾಗಿ ಎಂಟ್ರಿ ಕೊಡುತ್ತಿರೋ ಮಾರ್ಟಿನ್ ನೋಡಲು ನಗರದ ಕೆ ಜಿ ರಸ್ತೆಯ ನರ್ತಕಿ ಚಿತ್ರಮಂದಿರದಲ್ಲಿ ಧ್ರುವ ಫ್ಯಾನ್ಸ್ ಕಾಯುತ್ತಿದ್ದಾರೆ. ಇನ್ನು ಫ್ಯಾನ್ಸ್ ಜೊತೆ ಸಿನಿಮಾ ನೋಡಲು ನರ್ತಕಿ ಚಿತ್ರಮಂದಿರಕ್ಕೆ ನಟ ಧ್ರುವ ಸರ್ಜಾ ಬರಲಿದ್ದು, ಕೆಆರ್ ರಸ್ತೆಯ ಉಮಾ ಮಹೇಶ್ವರಿ ದೇವಸ್ಥಾನದಲ್ಲಿ ನಟ ಧ್ರುವ ಸರ್ಜಾ ಪೂಜೆ ಸಲ್ಲಿಸುತ್ತಿದ್ದಾರೆ. 

ಎಲ್ಲಾ ತಾಯಂದಿರ ಆಶಿರ್ವಾದ ನನಗೆ ಬೇಕು: ಖುಷಿಯಾಗುತ್ತೆ ಆಂಧ್ರದಲ್ಲಿ ಈಗಾಗಲೇ ಪ್ರೀಮಿಯರ್ ಶೋ ಆಗಿದೆ. ತುಂಬಾನೇ ಪಾಸಿಟಿವ್ ರೆಸ್ಪಾನ್ಸ್ ಸಿಗ್ತಾ ಇದೆ. ಇಂದು ಬೆಳಗ್ಗೆ 10 ಕ್ಕೆ ಕರ್ನಾಟಕದಲ್ಲಿ ಶೋ ಸ್ಟಾರ್ಟ್ ಆಗುತ್ತೆ. ಎಲ್ಲಾ ತಾಯಂದಿರ ಆಶಿರ್ವಾದ ನನಗೆ ಬೇಕು. ಎಲ್ಲಾ ಕಲಾಭಿಮಾನಿಗಳು ಬಂದು ಸಿನಿಮಾ ನೋಡಿ ಆಶಿರ್ವಾದ ಮಾಡಬೇಕು. ಶಕ್ತಿ ಮೀರಿ ಸಿನಿಮಾ ಮಾಡಿದ್ದೀವಿ. ಸಿನಿಮಾದ ರಿಲೀಸ್ ನ ಕೊನೆಯ ಕ್ಷಣದಲ್ಲೂ ಅಡಚಣೆಗಳು ಎದುರಾದ್ವು. ಎಲ್ಲಾ ಕಷ್ಟಗಳನ್ನ ದಾಟಿ ಬಂದಿದ್ದೀವಿ. ಆಂಧ್ರದಲ್ಲಿ ತುಂಬಾ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ ಇಲ್ಲಿಯೂ ಜನ ಇಷ್ಟ ಪಡ್ತಾರೆ. ಫ್ಯಾಮಿಲಿ ಎಂಟರ್ ಟೇನರ್ ಹಾಗೂ ಸಸ್ಪೆನ್ಸ್ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದು ಎಂದು ನಟ ಧ್ರುವ ಸರ್ಜಾ ಹೇಳಿದರು.

Latest Videos

3000 ಚಿತ್ರಮಂದಿರಗಳಲ್ಲಿ ಮಾರ್ಟಿನ್‌: ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಭಾರತದಾದ್ಯಂತ ಸುಮಾರು 3 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿರುವ ಧ್ರುವ ಸರ್ಜಾ, ‘ಇದು ನನ್ನ ಸಿನಿಮಾ ಜರ್ನಿಯ ಬಿಗ್‌ ಬಜೆಟ್‌ ಚಿತ್ರ. ನಿರ್ಮಾಪಕರು ನನ್ನ ಮೇಲೆ ಭರವಸೆ ಇಟ್ಟು ದೊಡ್ಡ ಮೊತ್ತವನ್ನು ಚಿತ್ರಕ್ಕಾಗಿ ವೆಚ್ಚ ಮಾಡಿದ್ದಾರೆ. ತಂತ್ರಜ್ಞರು ಹಾಗೂ ಕಲಾವಿದರ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಮೂರು ವರ್ಷಗಳ ನಂತರ ನನ್ನ ನಟನೆಯ ಸಿನಿಮಾ ತೆರೆಗೆ ಬರುತ್ತಿದೆ. ಇದು ನನಗೆ ವಿಶೇಷ ಸಿನಿಮಾ. 

ಇಂದು ವಿಶ್ವದಾದ್ಯಂತ 'ಮಾರ್ಟಿನ್' ಹವಾ: 3000 ಸ್ಕ್ರೀನ್‌ಗಳಲ್ಲಿ ಆ್ಯಕ್ಷನ್​ ಪ್ರಿನ್ಸ್ ಧ್ರುವ ಸರ್ಜಾ ಅಬ್ಬರ ಜೋರು

ಉದಯ್‌ ಕೆ ಮಹ್ತಾ, ‘ಅದ್ದೂರಿಯಾಗಿ ಸಿನಿಮಾ ತೆರೆಗೆ ಬರುತ್ತಿದೆ. ಚಿತ್ರದ ಬಜೆಟ್‌ ಬಗ್ಗೆ ಒಬೊಬ್ಬರು ಒಂದೊಂದು ಲೆಕ್ಕಾಚಾರ ಹಾಕುತ್ತಿದ್ದಾರೆ. ಎಲ್ಲಾ ಲೆಕ್ಕಾಚಾರಗಳಿಗೂ ಉತ್ತರ ಸಿಗಲಿದೆ. ಈ ಸಿನಿಮಾ ವ್ಯಾಪಾರದಲ್ಲಿ ಈಗಾಗಲೇ ನಾನು ಶೇ.55ರಷ್ಟು ಸೇಫ್‌ ಆಗಿದ್ದೇನೆ. ಬಿಸಿನೆಸ್‌ ಆಗುತ್ತಿದೆ. ನಿಜ ಹೇಳಬೇಕು ಎಂದರೆ ‘ಮಾರ್ಟಿನ್‌’ ಚಿತ್ರವನ್ನು ನಿರ್ದೇಶಿಸುವಂತೆ ಮೊದಲು ನಾನು ಕೇಳಿದ್ದು ಛಾಯಾಗ್ರಾಹಕ ಸತ್ಯ ಹೆಗಡೆ ಅವರನ್ನು. ಆದರೆ, ಅವರು ನಿರ್ದೇಶನ ಮಾಡಲ್ಲ ಎಂದರು. ‘ಮಾರ್ಟಿನ್‌’ ಮೊದಲು ಕನ್ನಡ ಸಿನಿಮಾ. ಆ ನಂತರ ಪ್ಯಾನ್‌ ಇಂಡಿಯಾ ಸಿನಿಮಾ.

click me!