ಸ್ಯಾಂಡಲ್ವುಡ್ನ ಮಾರ್ಟಿನ್ ಸಿನಿಮಾ ಇಂದು ವಿಶ್ವದಾದ್ಯಂತ 13 ಭಾಷೆಯಲ್ಲಿ ಬಿಡುಗಡೆಯಾಗಲಿದೆ. 3000 ಸ್ಕ್ರೀನ್‌ಗಳಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಈ ಸಿನಿಮಾ ಪ್ಯಾನ್ ವರ್ಲ್ಡ್ ದೊಡ್ಡಮಟ್ಟದಲ್ಲಿ ರಿಲೀಸ್ ಆಗ್ತಾ ಇದೆ.
ಸ್ಯಾಂಡಲ್ವುಡ್ನ ಮಾರ್ಟಿನ್ ಸಿನಿಮಾ ಇಂದು ವಿಶ್ವದಾದ್ಯಂತ 13 ಭಾಷೆಯಲ್ಲಿ ಬಿಡುಗಡೆಯಾಗಲಿದೆ. 3000 ಸ್ಕ್ರೀನ್‌ಗಳಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಈ ಸಿನಿಮಾ ಪ್ಯಾನ್ ವರ್ಲ್ಡ್ ದೊಡ್ಡಮಟ್ಟದಲ್ಲಿ ರಿಲೀಸ್ ಆಗ್ತಾ ಇದೆ. ಎಪಿ ಅರ್ಜುನ್ ನಿರ್ದೇಶನ ಉದಯ್ ಕೆ ಮೆಹ್ತಾ ನಿರ್ಮಾಣದ ಮಾರ್ಟಿನ್ ಕನ್ನಡದ ಬಹು ಕೋಟಿ ವೆಚ್ಚದ ಮೊದಲ ಸಿನಿಮಾ. ಧ್ರುವ ಸರ್ಜಾ, ವೈಭವಿ ಶಾಂಡಿಲ್ಯಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಕರ್ನಾಟಕದಲ್ಲಿ 350 ಕ್ಕು ಹೆಚ್ಚಿನ ಚಿತ್ರಮಂದಿರಗಳಲ್ಲಿ ಮಾರ್ಟಿನ್ ರಾರಾಜಿಸಲಿದ್ದು, ಬೆಳಗ್ಗೆ 10 ಗಂಟೆಯಿಂದ ಎಲ್ಲಾ ಕಡೆ ಮಾರ್ಟಿನ್ ಪ್ರದರ್ಶನ ಅರಂಭ ಆಗಲಿದೆ. ಧ್ರುವ ಸರ್ಜಾ ಫ್ಯಾನ್ಸ್ ಮೂರು ವರ್ಷಗಳಿಂದ ಕಾದಿರೋ ಬಹುನಿರೀಕ್ಷೆಯ ಮಾರ್ಟಿನ್ ಸಿನಿಮಾ ಇಂದು ಬಿಗ್ ಸ್ಕ್ರೀನ್ ಮೇಲೆ ಬರಲಿದೆ. ಮಾರ್ಟಿನ್ ಮೇಕಿಂಗ್ ಸ್ಟಾಂಡರ್ಡ್ ನೋಡಿದವರು, ಇದು ವರ್ಲ್ಡ್ ವೈಡ್ ಕನ್ನಡದ ಬಾವುಟ ಹಾರಿಸೋದು ಫಿಕ್ಸ್ ಅಂತ ಭವಿಷ್ಯ ನುಡಿದಿದ್ದಾರೆ. ಶುಕ್ರವಾರ ಮಾರ್ಟಿನ್ ಬರೊಬ್ಬರಿ 3000 ಸಾವಿರ ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗ್ತಾ ಇದೆ.
undefined
ಉತ್ತರ ಭಾರತದಲ್ಲಿ ಮಾರ್ಟಿನ್ ಹಿಂದಿ ವರ್ಷನ್ಗೆ ಸಿಕ್ಕಾಪಟ್ಟೆ ಬೇಡಿ ಇದ್ದು, ನಾರ್ತ್ ಇಂಡಿಯನ್ ಸ್ಟೇಟ್ಗಳಲ್ಲೇ ಸಾವಿರ ಸ್ಕ್ರೀನ್‌ಗಳಲ್ಲಿ ಮಾರ್ಟಿನ್ ಆಟ ಶುರುವಾಗಲಿದೆ. ಇನ್ನೂ ಕರುನಾಡಿನಲ್ಲಂತೂ ಧ್ರುವ ಫ್ಯಾನ್ಸ್ ಅಕ್ಷರಶಃ ಮಾರ್ಟಿನ್ ಹಬ್ಬ ಮಾಡೋದಕ್ಕೆ ಸಜ್ಜಾಗಿದ್ದಾರೆ. ರಾಜ್ಯದ ಬಹುತೇಕ ಚಿತ್ರಮಂದಿರಗಳಲ್ಲಿ ಅರ್ಲಿ ಮಾರ್ನಿಂಗ್ ಶೋಗಳನ್ನ ಹಾಕಲಾಗಿದೆ. ದಾವಣಗೆರೆ ಸೇರಿದಂತೆ, ಉತ್ತರ ಕರ್ನಾಟಕದ ಅನೇಕ ಕಡೆಗೆ ಅಕ್ಟೋಬರ್ 10ರ ರಾತ್ರಿಯೇ ಶೋ ಅರೇಂಜ್ ಆಗಿವೆ. ರಾತ್ರಿ 11ಗಂಟೆಗೆ ಹಲವು ಕಡೆಗೆ ಫ್ಯಾನ್ಸ್ ಶೋ ನಡೆಯಲಿವೆ.
500 ಕಾರು.. 600 ಡ್ಯಾನ್ಸರ್ಸ್.. ಧ್ರುವ ಸರ್ಜಾ ಮಾಸ್ ಎಂಟ್ರಿ: ಮಾರ್ಟಿನ್ ಇಂಟ್ರಡಕ್ಷನ್ ಸಾಂಗ್ಗೆ 6 ಕೋಟಿ ಬಜೆಟ್!
ಬೆಂಗಳೂರಿನಲ್ಲಿ ಕೆ.ಜಿ ರಸ್ತೆಯ ನರ್ತಕಿ ಚಿತ್ರಮಂದಿರದಲ್ಲಿ ಮಾರ್ಟಿನ್ ರಿಲೀಸ್ ಆಗ್ತಾ ಇದೆ. ಬೆಂಗಳೂರಿನ 5 ಚಿತ್ರಮಂದಿರಗಳಲ್ಲೂ ಮಿಡ್ ನೈಡ್ ಶೋಗಳನ್ನ ಹಾಕಲಾಗಿದೆ. ಮಲ್ಟಿಪ್ಲೆಕ್ಸ್ಗಳಲ್ಲಿ ದಾಖಲೆ ಸ್ಕ್ರೀನ್‌ಗಳಲ್ಲಿ ಮಾರ್ಟಿನ್ ಆಟ ಶುರುವಾಗ್ತಾ ಇದೆ. ಒಟ್ಟಾರೆ ಮಾರ್ಟಿನ್ ಹವಾ ಸಖತ್ ಜೋರಾಗಿದೆ. ಮೂರು ವರ್ಷಗಳ ಬಳಿಕ ಧ್ರುವ ಸಿನಿಮಾ ಬರ್ತಿರೋದ್ರಿಂದ ಫ್ಯಾನ್ಸ್ ದೊಡ್ಡ ಮಟ್ಟದಲ್ಲಿ ಸೆಲೆಬ್ರೇಷನ್ಗೆ ಸಜ್ಜಾಗಿದ್ದಾರೆ. ಕಟೌಟ್, ಹಾರ, ಪಟಾಕಿ ಎಲ್ಲವೂ ಸಜ್ಜಾಗಿವೆ.