ಮಂಜುನಾಥನ ಸನ್ನಿಧಿಯಲ್ಲಿ ಗಾಡ್ ಪ್ರಾಮಿಸ್ ಸ್ಕ್ರಿಪ್ಟ್‌ ಪೂಜೆ; ಸೂಚನ್ ಶೆಟ್ಟಿ ಸಿನಿಮಾದಲ್ಲಿ ಚಾನ್ಸ್‌ ಇದ್ಯಂತೆ!

Published : Mar 28, 2024, 02:39 PM ISTUpdated : Mar 28, 2024, 02:50 PM IST
ಮಂಜುನಾಥನ ಸನ್ನಿಧಿಯಲ್ಲಿ ಗಾಡ್ ಪ್ರಾಮಿಸ್ ಸ್ಕ್ರಿಪ್ಟ್‌ ಪೂಜೆ; ಸೂಚನ್ ಶೆಟ್ಟಿ ಸಿನಿಮಾದಲ್ಲಿ ಚಾನ್ಸ್‌ ಇದ್ಯಂತೆ!

ಸಾರಾಂಶ

ಗಾಡ್ ಪ್ರಾಮಿಸ್ ಸಿನಿಮಾವನ್ನು ಮೈತ್ರಿ ಪ್ರೊಡಕ್ಷನ್ ನಡಿ ಮೈತ್ರಿ ಮಂಜುನಾಥ್ ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ಕರಾವಳಿಯ ಭೂಗತ ಕಥೆ ಹಫ್ತಾ ಸಿನಿಮಾವನ್ನು ನಿರ್ಮಿಸಿದ್ದ ಈ ಪ್ರೊಡಕ್ಷನ್ ಎರಡನೇ ಕಾಣಿಕೆ ಗಾಡ್ ಪ್ರಾಮಿಸ್. 

'ಗಾಡ್ ಪ್ರಾಮಿಸ್' ಸಿನಿಮಾ ಮೂಲಕ ಯುವ ಪ್ರತಿಭೆ ಸೂಚನ್ ಶೆಟ್ಟಿ ಹೊಸ ಹೆಜ್ಜೆ ಇಟ್ಟಿದ್ದಾರೆ. ನಟನಾಗಿ ಬಣ್ಣ ಹಚ್ಚುವುದರ ಜೊತೆಗೆ ಡೈರೆಕ್ಟರ್ ಕ್ಯಾಪ್ ತೊಟ್ಟು ನಿರ್ದೇಶಕರಾಗಿಯೂ ಹೊಸ ಪಯಣ ಬೆಳೆಸಿದ್ದಾರೆ. ಟೈಟಲ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಗಾಡ್ ಪ್ರಾಮಿಸ್ ಸಿನಿಮಾದ ಸ್ಕ್ರೀಪ್ಟ್ ಪೂಜೆ ಸರಳವಾಗಿ ನೆರವೇರಿದೆ.

ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ಇತ್ತೀಚೆಗಷ್ಟೇ ಸೂಚನ್ ಚೊಚ್ಚಲ ನಿರ್ದೇಶನದ ಗಾಡ್ ಪ್ರಾಮಿಸ್ ಸಿನಿಮಾದ ಸ್ಕ್ರೀಪ್ಟ್ ಪೂಜೆ ನಡೆದಿದೆ. ಪೂಜೆಯಲ್ಲಿ ಸೂಚನ್ ಸೇರಿದಂತೆ ಚಿತ್ರತಂಡ ಭಾಗಿಯಾಗಿತ್ತು. ಮೇ ಮೊದಲ ವಾರದಿಂದ ಗಾಡ್ ಪ್ರಾಮಿಸ್ ಶೂಟಿಂಗ್ ಗೆ ಕಿಕ್ ಸ್ಟಾರ್ಟ್ ಸಿಗಲಿದೆ. ಚಿತ್ರೀಕರಣದ ಅಖಾಡಕ್ಕೆ ಇಳಿಯುವುದಕ್ಕೂ ಮೊದ್ಲೇ ಚಿತ್ರತಂಡ, ಆಡಿಷನ್ ಗೆ ಅವಕಾಶ ಕಲ್ಪಿಸಿಕೊಟ್ಟಿದೆ.

ಫಿಲ್ಮ್ ಚೇಂಬರ್​ನ ಮಾಜಿ ಅಧ್ಯಕ್ಷ ಹಾಗೂ ಸಿನಿಮಾ ನಿರ್ಮಾಪಕ ಭಾಮಾ ಹರೀಶ್​ಗೆ ಹೃದಯಾಘಾತ!

ಗಾಡ್ ಪ್ರಾಮಿಸ್ ಚಿತ್ರದ ಅಡಿಷನ್‌ಗೆ ಬರೋಬ್ಬರಿ 3800 ಅಪ್ಲಿಕೇಶನ್ ಬಂದಿದೆ. ಈ 3800 ಅರ್ಜಿ ಈಗಾಗಲೇ ತಲುಪಿದ್ದು, ಮುಂದಿನ ದಿನಗಳಲ್ಲಿ ಅದು ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎನ್ನುತ್ತಿದೆ ಚಿತ್ರತಂಡ. ಕೇವಲ ಆನ್‌ಲೈನ್‌ನಲ್ಲಿ ಇಷ್ಟು ಅರ್ಜಿಗಳು ಚಾನ್ಸ್ ಗಿಟ್ಟಿಸಲು ಬಂದಿದ್ದರೆ, ಇನ್ನು ಪರ್ಸನಲ್‌ ಆಗಿ ಸಾಕಷ್ಟು ಕರೆಗಳು, ಫೋಟೋಗಳು ಓಡಾಡಲಿವೆ ಎನ್ನಲಾಗಿದೆ. ಅರ್ಜಿಗಳು ಬರಲು ಇನ್ನೂ ದಿನಗಳು ಬಾಕಿ ಇವೆ ಎಂಬುದು ವಿಶೇಷ.

ಹೀರೋ ಪಟ್ಟಕ್ಕೆ ಟವೆಲ್ ಹಾಕಿದ ಪಾರು ಸೀರಿಯಲ್ ಆದಿ; ಯಾರದು ಸಿನಿಮಾ, ಯಾವಾಗ ಬರ್ತಿದೆ?

ಗಾಡ್ ಪ್ರಾಮಿಸ್ ಚಿತ್ರತಂಡ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಡಿಷನ್ ಕರೆಯಲಾಗಿದೆ. ಅದರಂತೆ ಆನ್ ಲೈನ್ ನಲ್ಲಿ ಬರೋಬ್ಬರಿ 3800 ಅರ್ಜಿಗಳು ತಲುಪಿವೆ. ಇದೇ ತಿಂಗಳ 31ರಂದು ಆಡಿಷನ್ ನಡೆಯುತ್ತಿದ್ದು, ಎಲ್ಲಾ ವರ್ಗದ ವಯೋಮಾನದವರು ಭಾಗಿಯಾಗಿ ತಮ್ಮ ಪ್ರತಿಭೆ ಪ್ರದರ್ಶಿಸಬಹುದು.

ನರಸಿಂಹರಾಜು ಡೆಂಚರ್‌ ಪ್ಲಸ್ ಬಗ್ಗೆ ಹೇಳ್ಬಿಟಿದ್ರು ನೋಡಿ ವಿಷ್ಣುವರ್ಧನ್; ವೈರಲ್ ವೀಡಿಯೋದಲ್ಲೇನಿದೆ?

ಗಾಡ್ ಪ್ರಾಮಿಸ್ ಸಿನಿಮಾವನ್ನು ಮೈತ್ರಿ ಪ್ರೊಡಕ್ಷನ್ ನಡಿ ಮೈತ್ರಿ ಮಂಜುನಾಥ್ ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ಕರಾವಳಿಯ ಭೂಗತ ಕಥೆ ಹಫ್ತಾ ಸಿನಿಮಾವನ್ನು ನಿರ್ಮಿಸಿದ್ದ ಈ ಪ್ರೊಡಕ್ಷನ್ ಎರಡನೇ ಕಾಣಿಕೆ ಗಾಡ್ ಪ್ರಾಮಿಸ್. ಇದೀಗ ಮೈತ್ರಿ ಪ್ರೊಡಕ್ಷನ್ ಸೂಚನ್ ಶೆಟ್ಟಿ ಮೊದಲ ಕನಸಿಗೆ ಜೊತೆಯಾಗಿದೆ.

ಖಾಯಿಲೆ ಬಿದ್ದರೂ ಕಂಗಾಲಾಗದ ನಟಿ ಸಮಂತಾ ಹೇಳ್ಬಿಟ್ರು ಲೈಫ್‌ ಮಹಾ ಸೀಕ್ರೆಟ್, ರಿಯಲಿ ಗ್ರೇಟ್!

ಗಾಡ್ ಪ್ರಾಮಿಸ್ ನೈಜ ಘಟನೆಯ ಸ್ಫೂರ್ತಿ ಪಡೆದ ಫ್ಯಾಮಿಲಿ ಹಾಗೂ ಕಾಮಿಡಿ ಕಥಾಹಂದರ ಹೊಂದಿದೆ.  ಗುರುಪ್ರಸಾದ್ ನರ್ನಾಡ್ ಛಾಯಾಗ್ರಹಣ, ಭರತ್ ಮಧುಸೂದನನ್ ಸಂಗೀತ ನಿರ್ದೇಶನ, ನವೀನ್ ಶೆಟ್ಟಿ  ಸಂಕಲನ ಚಿತ್ರಕ್ಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Kichcha Sudeep: ರಣಹದ್ದಿನ ಬಗ್ಗೆ ಕಿಚ್ಚ ಸುದೀಪ್‌ ಹೇಳಿದ್ದೇನು? ನಿಜ ಏನು?
BBK 12 ಫಿನಾಲೆ ಬೆನ್ನಲ್ಲೇ ಹೊಸ ವಿವಾದ, ಗಿಲ್ಲಿ ನಟ ಅಶ್ವಿನಿ ಗೌಡ ಫ್ಯಾನ್ಸ್ ನಡುವೆ ಭಾಷೆ ಜೊತೆ ಜಾತಿ ಜಗಳ..!