ರಿಯಲ್ ಆಗೋಯ್ತಾ 45 ಸಿನಿಮಾ ಕಥೆ..? ಅಜಿತ್ ಪವಾರ್ ಸಾವಿಗೂ- 45 ಚಿತ್ರಕ್ಕೂ ಲಿಂಕ್ ಇದ್ಯಾ?

Published : Jan 29, 2026, 08:07 PM IST
Ajit Pawar 45 Movie

ಸಾರಾಂಶ

45 ಸಿನಿಮಾ ತೆರೆಕಂಡು, ಓಟಿಟಿಗೂ ಎಂಟ್ರಿ ಕೊಟ್ಟಿದೆ. ಆದ್ರೆ ಈಗ ಅಜಿತ್ ಪವಾರ್ ಅಪಘಾತದಲ್ಲಿ ತೀರಿದ ಬಳಿಕ, 45 ಸಿನಿಮಾ ಬಗ್ಗೆ ಚರ್ಚೆಯಾಗ್ತಾ ಇದೆ. ಅದು ಕಾಕತಾಳಿಯವೇ ಅಥವಾ ನಿಜವೇ? ಪವಾರ್ ಅಪಘಾತಕ್ಕೂ 45 ಸಂಖ್ಯೆಗೂ ನಂಟಿದೆ. ಥೇಟ್ ಸಿನಿಮಾದ ದೃಶ್ಯದಂತೆ ಕಾಣ್ತಾ ಇದೆ ಈ ಸನ್ನಿವೇಶ..!

ಅಜಿತ್ ಪವಾರ್ ಸಾವು- 45 ಸಿನಿಮಾ; ಏನಿದು ನಂಟು?

ಕೆಲವು ಸಾರಿ ಸಿನಿಮಾ ಮಂದಿ ಕಾಲ್ಪನಿಕವಾಗಿ ಹೆಣೆದ ಕಥೆಗಳು ರಿಯಲ್ ಆಗಿ ನಡೆದುಬಿಡುತ್ತವೆ.. ನಿನ್ನೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar Death) ವಿಮಾನ ಅಪಘಾತದಲ್ಲಿ ಅಸುನೀಗಿದ ಘಟನೆ ನೋಡ್ತಾ ಇದ್ರೆ, ಇತ್ತೀಚಿಗೆ ತೆರೆಕಂಡ ಒಂದು ಸಿನಿಮಾ ನೆನಪಾಗ್ತಾ ಇದೆ. ಅಚ್ಚರಿ ಎನ್ನುವಂತೆ 45 ಸಿನಿಮಾದಲ್ಲಿನ ಕೆಲ ಸನ್ನಿವೇಶಗಳು ಅಜಿತ್ ಪವಾರ್ ಸಾವಿನ ಜೊತೆಗೆ ನಂಟು ಹೊಂದಿವೆ.

ರಿಯಲ್ ಆಗಿ ನಡೆದೋಯ್ತಾ 45 ಸಿನಿಮಾ ಕಥೆ..?

ಅಜಿತ್ ಪವಾರ್ ಸಾವಿಗೂ.. 45 ಚಿತ್ರಕ್ಕೂ ಲಿಂಕ್..!

ಯೆಸ್ ನಿನ್ನೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಅಜಿತ್ ಪವಾರ್ ವಿಮಾನ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದು ಗೊತ್ತೇ ಇದೆ. ಮುಂಬೈನಿಂದ ಬಾರಾಮತಿಗೆ ಹಾರ್ತಾ ಇದ್ದ ಚಾರ್ಟರ್ಡ್ ವಿಮಾನ ಬುಧವಾರ ಬೆಳಿಗ್ಗೆ ಅಪಘಾತಕ್ಕೀಡಾಯ್ತು. ಅಜಿತ್ ಪವಾರ್, ಅವರ ಭದ್ರತಾ ಸಿಬ್ಬಂದಿ , ಇಬ್ಬರು ಪೈಲೆಟ್​​ಗಳು ಸೇರಿದಂತೆ ಒಟ್ಟು ಐವರು ಈ ದುರಂತದಲ್ಲಿ ಪ್ರಾಣತೆತ್ತಿದ್ದಾರೆ.

ದೇಶವನ್ನೆ ಬೆಚ್ಚಿಬೀಳಿಸಿದ ಈ ಘಟನೆಯನ್ನ ನೋಡಿದ ಬಳಿಕ, ಕೆಲ ಕನ್ನಡ ಸಿನಿಪ್ರಿಯರು ಇದನ್ನ 45 ಸಿನಿಮಾ ಜೊತೆಗೆ ಹೋಲಿಕೆ ಮಾಡೋದಕ್ಕೆ ಶುರುಮಾಡಿದ್ದಾರೆ. ಕಳೆದ ತಿಂಗಳು ಅರ್ಜುನ್ ಜನ್ಯ ನಿರ್ದೇಶನದ ಶಿವರಾಜ್​ಕುಮಾರ್, ಉಪೇಂದ್ರ ಮತ್ತು ರಾಜ್ ಶೆಟ್ಟಿ ನಟನೆಯ 45 ಮೂವಿ ತೆರೆಗೆ ಬಂದಿತ್ತು.

ಅಪಘಾತ ಸಮಯ 8.45.. ಫ್ಲೈಟ್ ಲಿಯರ್​ಜೆಟ್​ 45

ಪವಾರ್ ಸಾವಿಗೂ 45 ಸಂಖ್ಯೆಗೂ ವಿಚಿತ್ರ ನಂಟು..?

ಹೌದು ಅಜಿತ್ ಪವಾರ್ ಪಯಣಿಸ್ತಾ ಇದ್ದ ವಿಮಾನ ಪತನಗೊಂಡಿದ್ದು 8.45ಕ್ಕೆ. ಇನ್ನೂ ಅಚ್ಚರಿ ಅಂದ್ರೆ ಅಜಿತ್​ ಪವಾರ್​ ಪ್ರಯಾಣಿಸುತ್ತಿದ್ದ ವಿಮಾನ ಲಿಯರ್‌ಜೆಟ್ 45XR. ಈ ವಿಮಾನದಲ್ಲಿಯೂ 45 ಸಂಖ್ಯೆ ಇದೆ. ಇದನ್ನ ಮಾರ್ಕ್ ಮಾಡಿ 45 ಸಿನಿಮಾ ಜೊತೆಗೆ ಹೋಲಿಕೆ ಮಾಡ್ತಾ ಇದ್ದಾರೆ.

45 ಸಿನಿಮಾ ನೋಡಿದವರಿಗೆ ಇದರ ಮರ್ಮ ಗೊತ್ತಾಗಿರುತ್ತೆ. ಅಸಲಿಗೆ ಚಿತ್ರದಲ್ಲಿ ರಾಜ್ ಶೆಟ್ಟಿಗೆ ಅಪಘಾತ ಆದಂತೆ ಕನಸು ಬೀಳುತ್ತೆ. ಆಗ ಟ್ರಾಫಿಕ್ ಡಿಸ್‌ಪ್ಲೇ ನಲ್ಲಿ 45 ಸೆಕೆಂಡ್ ತೋರಿಸ್ತಾ ಇರುತ್ತೆ. ಮುಂದೆ ಕನಸಲ್ಲಿ ಕಂಡಿದ್ದು ನಿಜವಾಗುತ್ತೆ. ನಾಯಕ ಶ್ವಾನವೊಂದಕ್ಕೆ ಡಿಕ್ಕಿ ಹೊಡೀತಾನೆ. ಅದರ ಮಾಲಿಕ ರಾಯಪ್ಪ 45 ದಿನಗಳಲ್ಲಿ ನಿನ್ನನ್ನ ಕೊಲ್ತೇನೆ ಅಂತ ಬೆದರಿಸ್ತಾನೆ. ಮುಂದೆ ಗರುಡಪುರಾಣದ ದೃಶ್ಯಗಳು ಬರುತ್ವೆ.

45 ಸಂಖ್ಯೆ.. ಅಪಘಾತ.. ಸಾವು.. ಗರುಡಪುರಾಣ ನಂಟು?

ಹೌದು ಹಿಂದೂ ಸಂಪ್ರದಾಯದ ಪ್ರಕಾರ, ಮರಣದ ನಂತರ ಆತ್ಮ ಸುಮಾರು 45 ದಿನಗಳವರೆಗೆ ಭೂಮಿಯ ಸಮೀಪದಲ್ಲೇ ಇರುತ್ತೆ ಅಂತ ನಂಬಲಾಗುತ್ತೆ. ಈ ಅವಧಿಯಲ್ಲಿ ಆತ್ಮಕ್ಕೆ ಭಯ, ಆಸೆ, ದುಃಖ, ಹಸಿವು-ಬಾಯಾರಿಕೆ ಇತ್ಯಾದಿ ಅನುಭವಗಳಾಗುತ್ತವೆ. ಈ 45 ದಿನಗಳಲ್ಲಿ ಸರಿಯಾಗಿ ಪಿಂಡ ಪ್ರದಾನ, ತರ್ಪಣ ಮಾಡದಿದ್ದರೆ ಆತ್ಮಕ್ಕೆ ತೊಂದರೆ ಆಗುತ್ತದೆ ಎಂಬ ನಂಬಿಕೆ. ಹಲವು ಸಮುದಾಯಗಳಲ್ಲಿ 45 ದಿನಗಳ ಶ್ರಾದ್ಧ ಅಥವಾ 45 ದಿನಗಳ ತರ್ಪಣ ಮಾಡುವ ಸಂಪ್ರದಾಯವಿದೆ. ಇದರಿಂದ ಆತ್ಮಕ್ಕೆ ಶಾಂತಿ ಸಿಗುತ್ತೆ ಎಂಬ ನಂಬಿಕೆ ಇದೆ. ಹೀಗಾಗಿ, ಹಿಂದೂ ಸಂಪ್ರದಾಯದಲ್ಲಿ 45 ಸಂಖ್ಯೆಗೂ ಸಾವಿಗೂ ನಿಕಟ ಸಂಬಂಧ ಇದೆ. ಇದೇ ಎಳೆಯನ್ನ ಇಟ್ಟುಕೊಂಡು ಅರ್ಜುನ್ 45 ಅಂತಲೇ ಹೆಸರಿಟ್ಟು ಸಿನಿಮಾ ಮಾಡಿದ್ರು.

45 ಸಿನಿಮಾ ತೆರೆಕಂಡು, ಓಟಿಟಿಗೂ ಎಂಟ್ರಿ ಕೊಟ್ಟಿದೆ. ಆದ್ರೆ ಈಗ ಅಜಿತ್ ಪವಾರ್ ಅಪಘಾತದಲ್ಲಿ ತೀರಿದ ಬಳಿಕ, 45 ಸಿನಿಮಾ ಬಗ್ಗೆ ಚರ್ಚೆಯಾಗ್ತಾ ಇದೆ. ಅದು ಕಾಕತಾಳಿಯವೇ ಇರಬಹುದು. ಪವಾರ್ ಅಪಘಾತಕ್ಕೂ 45 ಸಂಖ್ಯೆಗೂ ನಂಟಿದೆ. ಥೇಟ್ ಸಿನಿಮಾದ ದೃಶ್ಯದಂತೆ ಕಾಣ್ತಾ ಇದೆ ಈ ಸನ್ನಿವೇಶ..!

ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ನೋಡಿ.. (ಫಿಲ್ಮ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್)

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟಾಕ್ಸಿಕ್ ಟೀಸರ್ ಮ್ಯಾಜಿಕ್: ಯಾರದು ಟಾಕ್ಸಿಕ್ ರಂಭೆ? ಆ ಗುಟ್ಟು ಬಿಚ್ಚಿಟ್ಟ ಫ್ಯಾನ್ಸ್‌ಗೆ ಹಾಲಿವುಡ್ ಗೊಂಬೆ ನಟಾಲಿಯಾ!
ಪೆಂಗ್ವಿನ್ ಶೆಟ್ಟಿ! ವೃತ್ತಿಜೀವನದ ಉತ್ತುಂಗ, ಚಿತ್ರರಂಗದಿಂದ ಮಾಯ..! ಫೆ.26ಕ್ಕೆ ರಶ್ಮಿಕಾ ಕಲ್ಯಾಣ, ರಕ್ಷಿತ್‌ಗ್ಯಾವಾಗ ಕಂಕಣ ಬಲ?