ರೋರಿಂಗ್ ಸ್ಟಾರ್‌ ಶ್ರೀಮುರುಳಿಯಿಂದ 'ಮಧುಮತಿ' ಸಿಡಿ ಬಿಡುಗಡೆ!

Published : Mar 02, 2019, 10:45 AM IST
ರೋರಿಂಗ್ ಸ್ಟಾರ್‌ ಶ್ರೀಮುರುಳಿಯಿಂದ 'ಮಧುಮತಿ' ಸಿಡಿ ಬಿಡುಗಡೆ!

ಸಾರಾಂಶ

ಹೆಸರಿನಿಂದಲೇ ಕೊಂಚ ವಿಶೇಷತೆ ತುಂಬಿಕೊಂಡಿರುವ ಸಿನಿಮಾ ‘ಬದ್ರಿ ವರ್ಸಸ್‌ ಮಧುಮತಿ’. ಈ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿ ಸಾಕಷ್ಟುಕುತೂಹಲ ಮೂಡಿಸಿತ್ತು. ಈಗ ಚಿತ್ರದ ಆಡಿಯೋ ಬಿಡುಗಡೆ ಆಗಿದೆ. ಶ್ರೀಮುರಳಿ ಚಿತ್ರದ ಆಡಿಯೋ ಸೀಡಿ ಬಿಡುಗಡೆ ಮಾಡುವ ಮೂಲಕ ಹೊಸ ತಂಡಕ್ಕೆ ಶುಭ ಕೋರಿದ್ದಾರೆ.

‘ಚಿತ್ರದ ಹಾಡುಗಳು ಹಾಗೂ ಟ್ರೇಲರ್‌ ನೋಡಿದಾಗ ಅನುಭವಿ ಕಲಾವಿದರೇ ಸೇರಿ ಮಾಡಿರುವ ಸಿನಿಮಾ ಎನಿಸಿತು. ಅಷ್ಟುಚೆನ್ನಾಗಿದೆ. ಹಾಡುಗಳನ್ನು ತುಂಬಾ ಚೆನ್ನಾಗಿ ಮೇಕಿಂಗ್‌ ಮಾಡಲಾಗಿದೆ. ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲ್ಲಲಿ’ ಎಂದು ಶ್ರೀಮುರಳಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಸ್ಯಾಂಡಲ್‌ವುಡ್ ರೋರಿಂಗ್ ಸ್ಟಾರ್ ಮೀಟ್ಸ್ ಟಾಲಿವುಡ್ ಪ್ರಿನ್ಸ್!

ಈ ಚಿತ್ರವನ್ನು ನಿರ್ದೇಶನ ಮಾಡಿರುವುದು ಶಂಕರ್‌ ನಾರಾಯಣ ರೆಡ್ಡಿ. ಇದೊಂದು ಕೌಟುಂಬಿಕ, ಪ್ರೇಮ ಕಥಾನಕ ಚಿತ್ರವಂತೆ. ‘ದೇಶಕ್ಕಾಗಿ ಪ್ರಾಣವನ್ನ ಬೇಕಾದರೂ ಕೊಡುವಂಥ ದೇಶಪ್ರೇಮಿ, ಮುಂದೆ ಕುಟುಂಬದ ಸಲುವಾಗಿ ಏನೆಲ್ಲಾ ಸವಾಲುಗಳನ್ನ ಎದುರಿಸಬೇಕಾಗುತ್ತದೆ ಎನ್ನುವುದು ಇಲ್ಲಿ ಹೇಳಲಾಗಿದೆ’ ಎಂಬುದು ನಿರ್ದೇಶಕರ ಮಾತು. ಈಗ ಹಾಡುಗಳನು ಬಂದಿವೆ. ಸದ್ಯದಲ್ಲೇ ಸಿನಿಮಾ ತೆರೆಗೆ ಬರಲಿದಯಂತೆ. ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಯುದ್ಧದ ಸನ್ನಿವೇಶ ಇದೆ. ಅದನ್ನ ಅತ್ಯಂತ ರೋಮಾಂಚಕವಾಗಿ ಸಂಯೋಜಿಸಲಾಗಿದೆ ಎಂದು ನಿರ್ದೇಶಕರು ಹೇಳಿಕೊಳ್ಳುತ್ತಾರೆ. ತೀರ್ಥಹಳ್ಳಿ, ಆಗುಂಬೆ, ಸಾಗರ, ಜೋಗ ಜಲಪಾತ ಮುಂತಾದ ಕಡೆ ಚಿತ್ರೀಕರಣ ನಡೆಸಲಾಗಿದೆ. ಇಲ್ಲಿ ಬದ್ರಿಯಾಗಿ ಕಾಣಿಸಿಕೊಂಡಿರುವುದು ಪ್ರಾರ್ಥಪವನ್‌. ಜತೆಗೆ ಈ ಚಿತ್ರದ ನಿರ್ಮಾಪಕರೂ ಇವರೇ. ನಾಯಕಿಯಾಗಿ ಆಕಾಂಕ್ಷ ಅಭಿನಯಿಸಿದ್ದಾರೆ. ಚಿತ್ರಕ್ಕೆ ರಾಗ ಸಂಯೋಜಿಸಿರುವುದು ಎಲ್ವಿನ್‌ ಜೋಶ್ವಾ. ಜಯಂತ್‌ ಕಾಯ್ಕಿಣಿ ಬರೆದಿರುವ ಹಾಡುಗಳನ್ನ ಅರ್ಮಾನ್‌ ಮಲ್ಲಿಕ್‌, ಯೇಜಯ್‌ ಯೇಸುದಾಸ್‌ ಹಾಡಿದ್ದಾರಂತೆ. ಜಹಾಂಗೀರ್‌, ಅರವಿಂದ್‌ ಬೋಳಾರ್‌, ರವಿಕುಮಾರ್‌ ಮುಂತಾದವರು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್