ಫಾರೆವರ್ ಒಟ್ಟಿಗೆ ಇರುವ ಈ ಬಾಯ್ಸ್ ಗ್ಯಾಂಗ್ ಇದ್ದಕ್ಕಿದ್ದಂತೆ ಟ್ರಿಪ್ ಪ್ಲ್ಯಾನ್ ಮಾಡುವುದು ತುಂಬಾನೇ ಕಾಮನ್ ಅಂತೆ. ತಮ್ಮ ಸ್ನೇಹದ ಬಗ್ಗೆ ಹೇಳಿರುವ ಮಾತುಗಳನ್ನು ಕೇಳಿ....
ಕನ್ನಡ ಚಿತ್ರರಂಗದಲ್ಲಿ ಒಬ್ಬರಿಗೊಬ್ಬರು ಒಳ್ಳೆಯ ಸ್ನೇಹ ಕಾಪಾಡಿಕೊಂಡು ಬಂದಿದ್ದಾರೆ ಆದರಲ್ಲಿ ಅವರಲ್ಲಿ ಹೆಚ್ಚು ಹೈಲೈಟ್ ಆದ ಗ್ಯಾಂಗ್ ಅಂದ್ರೆ ಚಿರು ಗ್ಯಾಂಗ್. ಈ ಗ್ಯಾಂಗಿನಲ್ಲಿ ಚಿರಂಜೀವಿ ಸರ್ಜಾ, ನಟ ಪ್ರಜ್ವಲ್ ದೇವರಾಜ್, ನಿರ್ದೇಶಕ ಪನ್ನಗಾಭರಣ, ಅಭಿಷೇಕ್, ವಿಕಾಸ್ ಮತ್ತು ಚಂದ್ರ ಸುಮಾರು ಮೂರು ದಶಕಗಳಿಂದ ಒಟ್ಟಿಗಿದ್ದಾರೆ. ಇವರೆಲ್ಲರು ಮೊದಲು ಭೇಟಿಯಾಗಿದ್ದು ಇಮ್ರಾನ್ ಸರ್ದಾರಿಯ ಡ್ಯಾನ್ಸ್ ಸ್ಕೂಲ್‌ನಲ್ಲಿ ಫ್ರೀ ಸ್ಟೈಲ್ ಡ್ಯಾನ್ಸ್ ಕಲಿಯುವಾಗ. ಪ್ಲ್ಯಾನ್ ಮಾಡದೆ ಮೀಟ್ ಮಾಡುವುದು ಟ್ರಿಪ್ ಹೋಗುವುದು ಈ ಟೀಂನ ಬಿಗ್ ಹೈಲೈಟ್ ಎನ್ನಬಹುದು.
'ಶೂಟಿಂಗ್‌ನ ದಿನಗಳಲ್ಲಿ ಇವರನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತೀನಿ ಆದರೆ ನಾನು ಫ್ರೀ ಇದ್ದಾಗ ತಪ್ಪದೆ ಭೇಟಿ ಮಾಡಲು ಮುಂದಾಗುತ್ತಾರೆ. ಏನೆಲ್ಲ ಅಂದ್ರೂ ನನ್ನ ಜೊತೆ ಕೆಲವು ದಿನಗಳನ್ನು ಕಳೆದು ನಂತರ ಮನೆಗೆ ಹೋಗುತ್ತಾರೆ' ಎಂದು ಪ್ರಜ್ವಲ್ ದೇವರಾಜ್ ಬೆಂಗಳೂರು ಟೈಮ್ಸ್ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಇರುವ ಲಿಮಿಟೆಡ್ ಹಣದಲ್ಲಿ ನಾವು ಕಳೆದ ವರ್ಷಗಳಿಂದ ಇದ್ದಕ್ಕಿದ್ದಂತೆ ಪ್ಲ್ಯಾನ್ ಮಾಡಿ ಟ್ರಿಪ್ ಮಾಡಲು ಶುರು ಮಾಡಿದ್ದೀವಿ. ಸ್ನೇಹಿತರನ್ನು ಭೇಟಿ ಮಾಡುವುದು ಒಂದು ರೀತಿ ಸ್ಟ್ರೆಸ್ ಬಸ್ಟರ್ ಇದ್ದ ಹಾಗೆ' ಎಂದು ಚಂದ್ರಾ ಹೇಳಿದ್ದಾರೆ.
ರೇಶ್ಮಾ ಆಂಟಿ ರೀಲ್ಸ್ ನೋಡುತ್ತಾ ಮಷಿನ್‌ನಿಂದ ಕೈ ಕಟ್ ಮಾಡಿಕೊಂಡ ಕಾರ್ಮಿಕ; 4 ಲಕ್ಷ ಡಿಮ್ಯಾಂಡ್ ಇಟ್ಟ
'ನಾವು ಎಂದೂ ಕೆಲಸದ ಬಗ್ಗೆ ಚರ್ಚೆ ಮಾಡುವುದಿಲ್ಲ. ನಾನು ಚಿಕ್ಕ ವಯಸ್ಸಿನಲ್ಲಿ ಏನು ಮಾಡುತ್ತಿದ್ವಿ ಏನು ಮಾಡಿದ್ದರೆ ಸೂಪರ್ ಈಗ ಮಾಡಿದರೆ ಹೇಗಿರುತ್ತದೆ ಎಂದು ಸದಾ ಚರ್ಚೆ ಮಾಡುತ್ತೀವಿ. ರೀವೈಂಡ್ ಬಟನ್‌ನ ಹಿಟ್ ಮಾಡುವಂತೆ ಇರುತ್ತದೆ. ನಾವು ಸುಮಾರು 30 ವರ್ಷಗಳಿಂದ ಸ್ನೇಹಿತರಾಗಿದ್ದೀವಿ. ಒಬ್ಬರನ್ನೊಬ್ಬರು ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀವಿ ಅಂದ್ರೆ ಕಷ್ಟ ಸುಖಗಳನ್ನು ಒಟ್ಟಿಗೆ ನೋಡಿದ್ದೀವಿ. ನಮ್ಮ ನಡುವೆಯೂ ಮನಸ್ಥಾಪಗಳು ಇತ್ತು ಆದರೆ ಅದರಿಂದ ಹೊರ ಬಂದಿದ್ದೀವಿ. ಈಗಲೂ ನಾವು ಸ್ನೇಹಿತರಾಗಿರುವುದು ಖುಷಿಯ ವಿಚಾರ' ಎಂದು ನಿರ್ದೇಶಕ ಪನ್ನಗಾಭರಣ ಮಾತನಾಡಿದ್ದಾರೆ.
'ಕೆಲವು ದಿನಗಳ ಹಿಂದೆ ಬಾಯ್ಸ್‌ಗೆ ಫೋನ್ ಮಾಡಿ ನಾನು ಹೊರಗಡೆ ಹೋಗುತ್ತಿರುವೆ ಎಂದು ಹೇಳಿದೆ ಆದರೆ ನನ್ನ ತಲೆಯಲ್ಲಿ ಓಡುತ್ತಿರುವ ಯಾವ ವಿಚಾರವನ್ನು ಹೇಳಿರಲಿಲ್ಲ. ನನಗೆ ಏನಾಗುತ್ತಿದೆ ಎಂದು ಅರ್ಥ ಮಾಡಿಕೊಂಡು ನಾನು ಆ ಸ್ಥಳ ತಲುಪುವ ಮೊದಲೇ ಅವರು ಬಂದಿದ್ದರು. ಸ್ನೇಹಿತರಿಂದ ಕುಟುಂಬಸ್ಥರಾಗಿ ನಾವು ಎಷ್ಟು ಬೆಳೆದಿದ್ದೀವಿ ಅನ್ನೋದು ತೋರಿಸುತ್ತದೆ. ಜನರಿಗೆ ನಮ್ಮನ್ನು ಒಟ್ಟಿಗೆ ನೋಡಿ ನೋಡಿ ಅಭ್ಯಾಸ ಆಗಿಬಿಟ್ಟಿದೆ ನಾವೆಲ್ಲರೂ ಒಟ್ಟಿಗೆ ಸೇರಿದ್ದೀವಿ ಅಂದ್ರೆ ಏನೋ ಫ್ಯಾಮಿಲಿ ಕಾರ್ಯಕ್ರಮವಿದೆ ಅಂದುಕೊಳ್ಳುತ್ತಾರೆ. ಇನ್ನು ನನ್ನ ಮನೆಗೆ ಅವರು ಬಂದಿಲ್ಲ ಅಂದ್ರೆ ನನ್ನ ತಾಯಿ ಫೋನ್ ಮಾಡಿ ಬೈಯುತ್ತಾರೆ' ಎಂದು ಪ್ರಜ್ವಲ್ ದೇವರಾಜ್ ನಗುತ್ತಾರೆ.
ಭೀಮನ ಅಮಾವಾಸ್ಯೆ ಪ್ರಯುಕ್ತ ಬನಶಂಕರಿ ದೇವಸ್ಥಾನಕ್ಕೆ ಭೇಟಿ ನೀಡಿದ ವಿಜಯಲಕ್ಷ್ಮಿ ದರ್ಶನ್!
'ಚಿರು ಕೊನೆ ಕ್ಷಣದಲ್ಲಿ ಪಕ್ಕ ನಿಂತುಕೊಂಡು ನಾವು ಮಕ್ಕಳಂತೆ ಕಣ್ಣೀರಿಟ್ಟಿದ್ದೀವಿ. ಚಿರು ಅಗಲಿದ ಮೇಲೆ ಅವನನ್ನು ನಮ್ಮ ಹೆಗಲ ಮೇಲೆ ಹೊತ್ತುಕೊಂಡು ಹೋಗುವ ಆಸೆ ಇತ್ತು ಆದರೆ ಅದು ಎಷ್ಟು ಸರಿ ತಪ್ಪು ಎನ್ನುವುದು ನಮಗೆ ತಿಳಿದಿರಲಿಲ್ಲ ಏಕೆಂದರೆ ಅವರ ಕುಟುಂಬ ಕೂಡ ಇತ್ತು. ಬಹುಷ ಚಿರುಗೂ ಅದೇ ಅಸೆ ಇತ್ತು ಅನಿಸುತ್ತದೆ ಹೀಗಾಗಿ ಯಾರೋ ನಮ್ಮನ್ನು ಕರೆದರು ಆಗ ನಾವು ಓಡಿ ಹೋಗಿ ಹೆಗಲು ಕೊಟ್ಟೆವು. ಈಗಲೂ ಚಿರು ನಮ್ಮ ಜೊತೆಗಿದ್ದಾನೆ ಪ್ರತಿ ಕ್ಷಣವನ್ನು ಚಿರು ನೆನೆದು ಆಚರಿಸುತ್ತೀವಿ' ಎಂದು ಪನ್ನಗಾಭರಣ.