
ಸ್ಯಾಂಡಲ್ವುಡ್ ಸಲಗ ಮುಂದಿನ ವರ್ಷಾರಂಭಕ್ಕೆ ಲ್ಯಾಂಡ್ಲಾರ್ಡ್ ಸಿನಿಮಾ ಮೂಲಕ ಸಿನಿಪ್ರಿಯರ ಮುಂದೆ ಬರ್ತಾ ಇದ್ದಾರೆ. ಲ್ಯಾಂಡ್ಲಾರ್ಡ್ ನಲ್ಲಿ ವಿಜಯ್ ಮಾಸ್ ಅವತಾರ ಇದ್ದು, ಇವರಿಗೆ ಟಕ್ಕರ್ ಕೊಡೋ ರೂಲರ್ ಯಾರು ಅನ್ನೋ ಕುತೂಹಲಕ್ಕೆ ಈಗ ತೆರೆಬಿದ್ದಿದೆ. ಯೆಸ್ ದುನಿಯಾ ವಿಜಯ್ ನಟನೆಯ ಲ್ಯಾಂಡ್ಲಾರ್ಡ್ ಸಿನಿಮಾದ ಹೊಸ ಟೀಸರ್ ರಿಲೀಸ್ ಆಗಿದೆ. ಇದ್ರಲ್ಲಿ ವಿಜಯ್ ಎದುರು ಟಕ್ಕರ್ ಕೊಡಲಿರೋ ರೂಲರ್ ಪಾತ್ರವನ್ನ ರಿವೀಲ್ ಮಾಡಲಾಗಿದೆ. ಇದೂವರೆಗೂ ಒಂದಕ್ಕಿಂತ ಒಂದು ವಿಭಿನ್ನ ಪಾತ್ರಗಳನ್ನ ಮಾಡಿಕೊಂಡು ಬಂದಿರೋ ರಾಜ್ ಬಿ. ಶೆಟ್ಟಿ ಇಲ್ಲಿ ಹೊಸ ಅವತಾರದಲ್ಲಿ ಹಾಜರ್ ಆಗಿದ್ದಾರೆ.
ಸಲಗನಿಗೆ ಟಕ್ಕರ್ ಕೊಡೋ ರೂಲರ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಟೀಸರ್ನಲ್ಲಿ ರಾಜ್ ಶೆಟ್ಟಿ ಲುಕ್ ನೋಡಿದವರು ಸಖತ್ ಸರ್ಪ್ರೈಸ್ ಆಗಿದ್ದಾರೆ. ಇಷ್ಟು ದಿನ ಶೆಟ್ಟರ ಮೊಟ್ಟೆ ಬಾಸ್ ಲುಕ್ ನೋಡಿದವರಿಗೆ ಇಲ್ಲಿ ಕೇಶರಾಶಿಯುಳ್ಳ ರಗಡ್ ಜಮೀನ್ದಾರರ ಅವತಾರ ನೋಡಲಿಕ್ಕೆ ಸಿಗಲಿದೆ. ಮೊದಲ ಬಾರಿ ರಾಜ್ ಒಂದು ಔಟ್ ಅಂಡ್ ಔಟ್ ಮಾಸ್ ಕ್ಯಾರೆಕ್ಟರ್ನಲ್ಲಿ ಮಿಂಚಿದ್ದಾರೆ. ಲ್ಯಾಂಡ್ ಲಾರ್ಡ್ ಸಿನಿಮಾ ಈ ಇಬ್ಬರೂ ಕಲಾವಿದರನ್ನ ಎದುರು ಬದುರು ನಿಲ್ಲಿಸಿದಾಗಲೇ ಗೆದ್ದುಬಿಟ್ಟಿದೆ. ಯಾಕಂದ್ರೆ ಈ ಇಬ್ಬರೂ ಕೂಡ ದೈತ್ಯ ಕಲಾವಿದರು.
ಕರಿಯ ಅಂತ ಕರೆದವರ ಮುಂದೆ ವಿಜಯ್ ತನ್ನದೇ ದುನಿಯಾ ಕಟ್ಟಿದವರು. ಇನ್ನೂ ರಾಜ್ ಶೆಟ್ಟಿ ತನ್ನ ಮೊಟ್ಟೆ ತಲೆಯನ್ನ ಗೇಲಿ ಮಾಡಿಕೊಳ್ಳೋ ಕಥೆ ಹೇಳಿಯೇ ಸ್ಟಾರ್ ಆದವರು. ಆಡಿಕೊಂಡವರ ಮುಂದೆ ಈಗ ಸರ್ವೈವರ್ ಅಂಡ್ ರೂಲರ್ ಆಗಿ ನಿಂತಿದ್ದೇವೆ ಅಂತ ಹೇಳಿದ ದುನಿಯಾ ವಿಜಯ್ , ಇಬ್ಬರೂ ಜೋಡಿಯಾಗಿ ಮೋಡಿ ಮಾಡ್ತಿವಿ ಅಂದಿದ್ದಾರೆ. ಇನ್ನೂ ಲ್ಯಾಂಡ್ ಲಾರ್ಡ್ ಟೈಟಲ್ ರೋಲ್ನ ಇನ್ನೊಬ್ಬ ನಟನಿಗೆ ಬಿಟ್ಟುಕೊಟ್ಟು, ಅದು ಹೈಲೈಟ್ ಕೂಡ ಆಗಲಿ ಅಂಯ ಯೋಚಿಸೋ ವಿಜಯ್ ನಿಜವಾದ ಕಲಾವಿದ ಅಂತಾರೆ ರಾಜ್ ಶೆಟ್ರು.
ಹೌದು ಇಲ್ಲಿ ರೂಲರ್ ಆಗಿ ರಾಜ್ ಶೆಟ್ರು ಮತ್ತು ಸರ್ವೈವರ್ ಆಗಿ ದುನಿಯಾ ವಿಜಯ್ ಇಬ್ಬರಿಗೂ ಸಮಾನ ಪಾತ್ರ ಇದೆ. ಇಬ್ಬರ ನಡುವಿನ ಸಂಘರ್ಷವೇ ಲ್ಯಾಂಡ್ಲಾರ್ಡ್ ಕಹಾನಿ. ನಮ್ಮದೇ ಮಣ್ಣಿನ ಹಲವು ನೈಜ ಘಟನೆಗಳ ಸ್ಪೂರ್ತಿಯೊಂದಿಗೆ ಈ ಸಿನಿಮಾವನ್ನ ರೆಡಿಮಾಡಿದ್ದಾರೆ ನಿರ್ದೇಶಕ ಜಡೇಶ್ ಹಂಪಿ. ಸಾರಥಿ ಖ್ಯಾತಿಯ ಕೆವಿ ಸತ್ಯಪ್ರಕಾಶ್ ಈ ರೆಟ್ರೋ ಕಾಲದ ಕಥೆಯನ್ನ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಇದೂವರೆಗೂ ಬಂದಿದ್ದ ಟೀಸರ್ಸ್ ಲ್ಯಾಂಡ್ಲಾರ್ಡ್ ಬಗ್ಗೆ ನಿರೀಕ್ಷೆ ಮೂಡಿಸಿದ್ವು. ಆದ್ರೆ ಈಗ ಬಂದಿರೋ ಟೀಸರ್ ಇದೂವರೆಗಿನ ನಿರೀಕ್ಷೆಯನ್ನ ಡಬಲ್ ಮಾಡಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.