ಇಂದು ನಟ ಪುನೀತ್ ರಾಜ್‌ಕುಮಾರ್ ಅವರ ಪುಣ್ಯಸ್ಮರಣೆ. ಈ ಸಂದರ್ಭದಲ್ಲಿ ಅವರ ಸಹೋದರಿ ಲಕ್ಷ್ಮಿ ಅವರು ಪುನೀತ್ ಬಾಲ್ಯವನ್ನು ನೆನಪಿಸಿಕೊಂಡಿದ್ದಾರೆ.
ಅಪ್ಪು ಅಂತಲೇ ಅಭಿಮಾನಿಗಳ ಹೃದಯದಲ್ಲಿ ಹೆಸರು ಅಚ್ಚೊತ್ತಿ ಹೋಗಿರುವ ಪುನೀತ್ ರಾಜ್‌ಕುಮಾರ್ ಅವರು ನಮ್ಮನ್ನು ಅಗಲಿ ಇಂದಿಗೆ (ಅಕ್ಟೋಬರ್ 29) ಎರಡು ವರ್ಷಗಳು. ಅವರು ನಿಧನರಾಗಿ ಎರಡು ವರ್ಷಗಳಾದ ಅವರು ಮಾಡಿದ ಸತ್ಕಾರ್ಯ ಮಾತ್ರ ಎಲ್ಲರಲ್ಲಿಯೂ ಹಚ್ಚ ಹಸಿರಾಗಿಯೇ ಉಳಿದಿದೆ. ಇಂದು ಅವರ ಕೋಟ್ಯಂತರ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ತಮ್ಮದೇ ಆದ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರ 2ನೇ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ಡಾ. ರಾಜ್‌ಕುಮಾರ್ ಕುಟುಂಬದ ಸದಸ್ಯರಿಂದ ಅಪ್ಪು ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಇಷ್ಟದ ತಿನಿಸುಗಳನ್ನು ಮಾಡಿ ಸ್ಮಾರಕದ ಮುಂದೆ ಇರಿಸಲಾಗುತ್ತಿದೆ. ದೂರದ ಊರುಗಳಿಂದ ಬಂದ ಅಭಿಮಾನಿಗಳು ಸರದಿ ಸಾಲಿನಲ್ಲಿ ನಿಂತು ನಮನ ಸಲ್ಲಿಸುತ್ತಿದ್ದಾರೆ.
ನಮ್ಮ ಪ್ರೀತಿಪಾತ್ರರು ಸಾವನ್ನಪ್ಪಿದಾಗ ನಕ್ಷತ್ರವಾಗುತ್ತಾರೆ ಎಂಬ ನಂಬಿಕೆ ಇದೆ. ಚಿಕ್ಕವಯಸ್ಸಿನಿಂದಲೂ ಕನ್ನಡ ಚಿತ್ರರಂಗದಲ್ಲಿ 'ಸ್ಟಾರ್' ಆಗಿ ಮೆರೆದ ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು ಕೆಲ ತಿಂಗಳ ಹಿಂದೆ ನಕ್ಷತ್ರವೊಂದಕ್ಕೆ ಇಡಲಾಗಿದೆ. ಮೀನ ರಾಶಿಯ ನಕ್ಷತ್ರಪುಂಜದಲ್ಲಿ ಕಾಣಸಿಗುವ ನಕ್ಷತ್ರವೊಂದಕ್ಕೆ 'ಪುನೀತ್ ರಾಜ್‌ಕುಮಾರ್' ಎಂದು ನಾಮಕರಣ ಮಾಡಲಾಗಿದೆ. ನಟ ವಿಕ್ರಮ್ ರವಿಚಂದ್ರನ್ ಅವರೊಂದಿಗೆ 'ಬಿಗ್ ಲಿಟ್ಲ್' ಕಂಪನಿ ನಕ್ಷತ್ರಕ್ಕೆ ಶಾಶ್ವತವಾಗಿ 'ಪುನೀತ್ ರಾಜ್‌ಕುಮಾರ್' ಹೆಸರಿಟ್ಟಿದೆ. ಅವರ 2ನೇ ಪುಣ್ಯಸ್ಮರಣೆ ನಿಮಿತ್ತ ರಾಯಚೂರು ಜಿಲ್ಲೆಯ ಅಭಿಮಾನಿಯೊಬ್ಬರು ಇತ್ತೀಚಿಗೆ ತಮ್ಮ ಎರಡು ಎಕರೆ ಜಮೀನಲ್ಲಿ ವಿವಿಧ ಭತ್ತದ ತಳಿಗಳ ಮೂಲಕ ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರವನ್ನು ಪೈರಿನಲ್ಲಿ ಅರಳಿಸಿ ಅಭಿಮಾನ ಮೆರಿದಿದ್ದಾರೆ. ಜಿಲ್ಲೆ ಮಾನ್ವಿ ತಾಲೂಕಿನ ಡೋಣಿ ಬಸವಣ್ಣ ಕ್ಯಾಂಪಿನಲ್ಲಿ ರೈತ ಸತ್ಯನಾರಾಯಣ ಅವರು ಈ ರೀತಿ ಪುನೀತ್ ಮೇಲಿನ ಅಭಿಮಾನ ಮೆರೆದವರು. ಇದಕ್ಕಾಗಿ ಸತ್ಯನಾರಾಯಣ ಅವರು ಅವರು ತಮ್ಮ 6 ಎಕರೆ ಪೈಕಿ 2 ಎಕರೆ ಜಮೀನಿನಲ್ಲಿ ಗುಜರಾತ್ ರಾಜ್ಯದಿಂದ ತಂದ ಗೋಲ್ಡನ್ ರೋಸ್ ಹಾಗೂ ಕಾಲಾ ಭಟ್ಟಿ ಕಪ್ಪು ಬಣ್ಣದ ಭತ್ತದ ತಳಿ ಜೊತೆ ಸೋನಾಮಸೂರಿ ತಳಿಯ 100 ಕೆಜಿ ಭತ್ತದ ಬೀಜ ಬಿತ್ತಿ ಬೆಳೆ ಬೆಳೆದಿದ್ದಾರೆ. ಇದಕ್ಕಾಗಿ ಸುಮಾರು 3 ಲಕ್ಷ ರು. ಖರ್ಚು ಮಾಡಿದ್ದಾರೆ. ಹೀಗೆ ತಮ್ಮದೇ ಆದ ರೀತಿಯಲ್ಲಿ ಅಭಿಮಾನಿಗಳು ಅಪ್ಪು ಅವರ ಹೆಸರನ್ನು ಶಾಶ್ವತಗೊಳಿಸುತ್ತಿದ್ದಾರೆ.
undefined
ಮಾತೆಂದ್ರೆ ಪ್ರಕಾಶ್ ರಾಜ್ಗೆ ಬಹಳ ಇಷ್ಟ- ಮೂಕಿಗೂ ಮಾತು ಕಲಿಸಿದ್ದ: ಮಗನ ಕುರಿತು ಅಮ್ಮ ಹೇಳಿದ್ದೇನು?
ಇದೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಸರಿಗಮಪ ಸಂಗೀತ ರಿಯಾಲಿಟಿ ಷೋನ್ ಅಪ್ಪುವಿಗಾಗಿ ಮೀಸಲು ಇರಿಸಲಾಗಿದ್ದು, ಇದರಲ್ಲಿ ಪುನೀತ್ ರಾಜ್‌ಕುಮಾರ್ ಅವರ ಸಹೋದರ ಲಕ್ಷ್ಮಿ ಅವರು ತಮ್ಮನ ಬಗ್ಗೆ ಮಾತನಾಡಿದ್ದಾರೆ. ಇದಕ್ಕೂ ಮುನ್ನ ಪುನೀತ್ ರಾಜ್‌ಕುಮಾರ್ ಅವರ ಮುಗ್ಧ ಬಾಲ್ಯವನ್ನು ನೆನಪಿಸಿಕೊಳ್ಳುವ ಅವರ ಕೆಲವು ಚಿತ್ರಗಳ ವಿಡಿಯೋ ಪ್ರದರ್ಶಿಸಲಾಯಿತು. ಈ ಸಂದರ್ಭದಲ್ಲಿ ಈ ಷೋ ನಡೆಸಿಕೊಡುವ ಆ್ಯಂಕರ್ ಅನುಶ್ರೀ ಅವರು, ಎಲ್ಲರೂ ಮಕ್ಕಳಿರುವಾಗ ಮುಗ್ಧತೆ ಇರುತ್ತದೆ, ಆದರೆ ವಯಸ್ಸಾದಂತೆ ಆ ಮುಗ್ಧತೆ ಕಡಿಮೆಯಾಗುತ್ತದೆ. ಆದರೆ ವಯಸ್ಸಾದ ಮೇಲೂ ಅದೇ ಮಗುವಿನ ಮುಗ್ಧತೆಯನ್ನು ಕಾಪಾಡಿಕೊಂಡು ಬಂದಿದ್ದವರು ಅಪ್ಪು ಸರ್ ಎಂದು ಹೇಳಿದರು.
ಇದಾದ ಬಳಿಕ ತಮ್ಮನ ಬಾಲ್ಯದ ನೆನಪನ್ನು ಬಿಚ್ಚಿಟ್ಟ ಸಹೋದರಿ ಲಕ್ಷ್ಮಿ ಅವರು, ಭಕ್ತಪ್ರಲ್ಹಾದ ಚಿತ್ರ ಮಾಡುವಾಗ ಅಪ್ಪುಗೆ ಏಳು ವರ್ಷ. ಅವನಿಗೆ ಆಗ ಓದಲು ಬರೆಯಲು ಬರುತ್ತಿರಲಿಲ್ಲ. ಶೂಟಿಂಗ್ ಮಾಡುವ ಸಮಯದಲ್ಲಿಯೂ ಆಟವಾಡುತ್ತಿದ್ದ. ಅವನ ಶೂಟಿಂಗ್ ಬಂದಾಗ ಬಂದು ಪಾಲ್ಗೊಳ್ಳುತ್ತಿದ್ದ. ಆಗ ಓದಲಿಕ್ಕೆ ಬರುತ್ತಿರಲಿಲ್ಲವಾದರೂ ಅದರಲ್ಲಿದ್ದ ಡೈಲಾಗ್ಗಳನ್ನು ಬಾಯಿಪಾಠ ಮಾಡಿಕೊಂಡು ಹೇಳಿದ್ದಾನೆ. ಅದನ್ನು ನೆನಪಿಸಿಕೊಂಡರೆ ಈಗಲೂ ಆಶ್ಚರ್ಯವಾಗುತ್ತದೆ. ಅಂಥ ಶಕ್ತಿ ಆತನಿಗೆ ದೇವರು ಕೊಟ್ಟಿದ್ದರು. ಬಾಯಿಪಾಠ ಮಾಡಿ, ಆಟವಾಡುತ್ತಲೇ ಸಲೀಸಾಗಿ ಶೂಟಿಂಗ್ ಮುಗಿಸುತ್ತಿದ್ದ ಎಂದು ನೆನಪಿಸಿಕೊಂಡಿದ್ದಾರೆ.