
ಕೆಆರ್ ಜಿ ಸ್ಟುಡಿಯೋಸ್ (KRG Studios)ಒಂದು ಹೆಸರಾಂತ ಚಿತ್ರ ನಿರ್ಮಾಣ, ವ್ಯಾಪಾರ ಹಾಗೂ ವಿತರಣಾ ಸಂಸ್ಥೆಯಾಗಿದ್ದು, ಹಲವಾರು ಯಶಸ್ವಿ ಚಿತ್ರಗಳನ್ನು ಕೊಡುಗೆಯಾಗಿ ನೀಡಿದೆ. ಇದೀಗ ಈ ಸಂಸ್ಥೆ ಬೇರೆ ಭಾಷೆಯ ಚಿತ್ರರಂಗಕ್ಕೂ ಕಾಲಿಡುತ್ತಿದೆ. KRG ಸ್ಟೂಡಿಯೋಸ್ ಭಾರತದ ಅನೇಕ ಭಾಷೆಗಳಲ್ಲಿ ಸಿನಿಮಾ ನಿರ್ಮಾಣ ಮಾಡುವತ್ತ ದೃಷ್ಟಿ ಹರಿಸಿದ್ದು ಮನರಂಜನಾ ಕ್ಷೇತ್ರಕ್ಕೆ ಅತ್ಯಮೂಲ್ಯ ಕೊಡುಗೆ ನೀಡುವ ಜತೆಗೆ ತಮ್ಮ ಉದ್ಯಮವನ್ನೂ ಹೆಚ್ಚು ವಿಸ್ತರಿಸುವ ಗುರಿ ಹೊಂದಿದೆ.
ಸೂಫಿಯುಂ ಸುಜಾತಯುಂ,ಹೋಮ್, ಅಂಗಮಲೇ ಬಾಯ್ಸ್ ನಂತಹ ಯಶಸ್ವಿ ಮಲಯಾಳಂ ಚಿತ್ರಗಳನ್ನು ನೀಡಿರುವ Friday Film Houseನೊಂದಿಗೆ 'ಪಡಕ್ಕಲಂ' ಎಂಬ ಮಲಯಾಳಂ ಚಿತ್ರಕ್ಕಾಗಿ ಕೆಆರ್ ಜಿ ಕೈ ಜೋಡಿಸಿದೆ. ಈ ಚಿತ್ರಕಥೆಯನ್ನು ಮನು ಸ್ವರಾಜ್ ಬರೆದು ನಿರ್ದೇಶಿಸಲಿದ್ದಾರೆ. ಬೇಸಿಲ್ ಜೋಸೆಫ್ ನಂತಹ ಖ್ಯಾತ ನಿರ್ದೇಶಕರೊಂದಿಗೆ ಸಹಾಯಕ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿರುವ ಖ್ಯಾತಿ ಇವರದಾಗಿದೆ.
ಡಾ ರಾಜ್ ಕಿಡ್ನಾಪ್ ಮಾಡಿ ಹೊರಟ ವೀರಪ್ಪನ್‌ಗೆ ಪಾರ್ವತಮ್ಮನವರು ಚಿಟಿಕೆ ಹೊಡೆದು ಹೀಗೆ ಹೇಳಿದ್ದರಂತೆ!
ಕೆ ಆರ್ ಜಿ ಸ್ಟುಡಿಯೋಸ್ ಮತ್ತು 'Friday Film House'ಸಹಯೋಗದಲ್ಲಿ ಈಗಾಗಲೇ ಮೂಡಿ ಬಂದಿರುವ 'ಅಬ್ಬಬ್ಬ' ಎಂಬ ಹಾಸ್ಯಭರಿತ ಕನ್ನಡ ಚಿತ್ರ, 'ವಾಲಟಿ' ಎಂಬ ಮಲಯಾಳಂ ಚಿತ್ರದ ಕನ್ನಡ ಡಬ್ಬಿಂಗ್ ಹಾಗೂ ಬಿಡುಗಡೆ ಎಲ್ಲೆಡೆ ಸದ್ದು ಮಾಡಿತ್ತು. ಇನ್ನು ಹೆಸರಾಂತ ಹಿಂದಿ ಚಿತ್ರ ನಿರ್ಮಾಣ ಸಂಸ್ಥೆಯಾದ ಟಿ.ವಿ.ಎಫ್ ನೊಂದಿಗೆ 'ಪೌಡರ್' ಎಂಬ ಕನ್ನಡ ಚಿತ್ರವನ್ನು ಎದುರು ನೋಡುತ್ತಿದೆ. ಅಷ್ಟೇ ಅಲ್ಲದೇ, 'Bangalore Days''ಉಸ್ತಾದ್ ಹೊಟೇಲ್' ಖ್ಯಾತಿಯ ಅಂಜಲಿ ಮೆನನ್ ನಿರ್ದೇಶನದಲ್ಲಿ ತಮಿಳು ಚಿತ್ರವೊಂದನ್ನು ನಿರ್ಮಿಸುವ ಮೂಲಕ ತಮಿಳು ಚಿತ್ರರಂಗಕ್ಕೂ ಕಾಲಿಡಲಿದೆ.
ಅರುಣ್ ಅಮುಕ್ತರ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಪೋಸ್ಟರ್-ಮೋಷನ್ ಪೋಸ್ಟರ್ ಲಾಂಚ್
ಇನ್ನು ಇಂತಹ ಅನೇಕ ನವೀನ ಕಥಾ ವಸ್ತುವನ್ನು ಚಿತ್ರರಂಗಕ್ಕೆ ಪರಿಚಯಿಸುವ ಮಹೋದ್ದೇಶವನ್ನು ಕೆಆರ್ ಜಿ ಸ್ಟುಡಿಯೋಸ್ ಹೊಂದಿದೆ. ಈ ಮೂಲಕ ಕನ್ನಡ ಚಿತ್ರಗಳ ಮಾರ್ಕೆಟಿಂಗ್ ವ್ಯಾಪ್ತಿಯನ್ನು ಹೊರ ರಾಜ್ಯಗಳಲ್ಲಿ ವಿಸ್ತರಿಸಲು ಹೊರಟಿದೆ. ಸದ್ಯಕ್ಕೆ 'ಕೆಆರ್‌ಜಿ' ಬ್ಯಾನರ್‌ನಲ್ಲಿ ಪೌಡರ್, ಉತ್ತರಕಾಂಡ, ಕಿರಿಕೆಟ್ 11, ಕೆ.ಕೆ ಮುಂತಾದ ಚಿತ್ರಗಳು ತಯಾರಾಗುತ್ತಿವೆ. ಒಟ್ಟಿನಲ್ಲಿ, ಸದ್ಯ ಕೆಆರ್‌ಜಿ ಸಂಸ್ಥೆ ಹೆಚ್ಚು ಆಕ್ವಿವ್ ಆಗಿದ್ದು, ಹೊಸ ಹೊಸ ಪ್ರಯೋಗಗಳತ್ತ ತನ್ನ ದೃಷ್ಟಿ ನೆಟ್ಟಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.