ಎಸ್ ನಾರಾಯಣ್ ನಿರ್ದೇಶನದ 5 ಡಿ ಚಿತ್ರದ ಫಸ್ಟ್ ಲುಕ್ ಅನ್ನು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬಿಡುಗಡೆ ಮಾಡಿದರು.
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್ ನಾರಾಯಣ್ ಸೂಪರ್ ಹಿಟ್ ಸಿನಿಮಾ ಹಾಗೂ ಸೀರಿಯಲ್‌ಗಳನ್ನು ನೀಡಿದ ನಂತರ ಮೊದಲ ಬಾರಿಗೆ 'ಪಾರು' ಧಾರಾವಾಹಿಯಲ್ಲಿ ಅಭಿನಯಿಸಿದ್ದರು. ಇದೀಗ ಮತ್ತೆ ಸಿನಿಮಾ ಚಿತ್ರೀಕರಣದ ಕಡೆ ಮುಖ ಮಾಡಿದ್ದಾರೆ.
'5ಡಿ' ಲುಕ್ ಬಿಡುಗಡೆ ಕಾರ್ಯಕ್ರಮದಲ್ಲಿ ಶಿವಕುಮಾರ್ ಮಾತನಾಡಿದ್ದಾರೆ, ‘ನಾನು ಮೂಲತಃ ವಿತರಕನಾಗಿದ್ದವನು. ಕೆಲವು ಕಡೆ ಚಿತ್ರಮಂದಿರಗಳನ್ನು ನಡೆಸುತ್ತಿದ್ದೆ. ಹೀಗಾಗಿ ಚಿತ್ರರಂಗದೊಂದಿಗೆ ಹಳೆಯ ನಂಟಿದೆ. ಎಸ್.ನಾರಾಯಣ್ ಶೂನ್ಯದಿಂದ ಸಾಧನೆ ಮಾಡಿದವರು. ಅವರ ಈ ಚಿತ್ರಕ್ಕೆ ಯಶಸ್ಸು ಸಿಗಲಿ,’ ಎಂದು ಶುಭ ಹಾರೈಸಿದರು.
14 ವರ್ಷವಾದರೂ ಐಶು- ಮಾದೇಶ ಇನ್ನೂ ಎವರ್ ಗ್ರೀನ್!ಎಸ್ ನಾರಾಯಣ್ ಮಾತನಾಡಿ, ‘ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಲಾಕ್‌ಡೌನ್‌ದಿಂದ ಎರಡನೇ ಶೆಡ್ಯೂಲ್ ಶೂಟಿಂಗ್ ನಿಲ್ಲಿಸಲಾಗಿದ್ದು, ಸದ್ಯದಲ್ಲಿಯೇ ಶುರು ಮಾಡಲಾಗುವುದು,’ ಎಂದರು. ನಾಯಕ ಆದಿತ್ಯ, ನಾಯಕಿ ಅದಿತಿ ಪ್ರಭುದೇವ, ಹಿರಿಯ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಒನ್ ಟು ಹಂಡ್ರೆಡ್ ಸಂಸ್ಥೆ ಈ ಚಿತ್ರ ನಿರ್ಮಿಸಿದೆ.
ಎಸ್ ನಾರಾಯಣ್ ರೊಮ್ಯಾಂಟಿಕ್ ಸಿನಿಮಾ ನಿರ್ದೇಶಿಸುವುದರಲ್ಲಿ ಫೇಮಸ್. 5D ಚಿತ್ರದ ನಂತರ ರೊಮ್ಯಾಂಟಿಕ್ ಕತೆಗಳನ್ನು ಆಯ್ಕೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.