ಇಂದ್ರಜಿತ್, ಲಂಕೇಶ್ ಅವರ ಪುತ್ರ ಅಂತ ಮುಂಚೆ ಗೊತ್ತಿರಲಿಲ್ಲ: ಗೌರಿ ಟ್ರೈಲರ್ ಲಾಂಚ್‌ನಲ್ಲಿ ಕಿಚ್ಚ ಸುದೀಪ್ ಮಾತು!

By Govindaraj S  |  First Published Aug 5, 2024, 8:28 PM IST

ಗೌರಿ ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮ ನಗರದ ಎಂಜಿ ರಸ್ತೆಯ ಪಿವಿಆರ್‌ನ ಡೈರೆಕ್ಟರ್ ಫೋರಂನಲ್ಲಿ ನಡೆಯುತ್ತಿದೆ. ಕಾರ್ಯಕ್ರಮಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ನಟಿ ಪ್ರಿಯಾಂಕಾ ಉಪೇಂದ್ರ ಅತಿಥಿಯಾಗಿ ಭಾಗಿಯಾಗಿದ್ದಾರೆ. 


ಲಾಫಿಂಗ್ ಬುದ್ದ ಫಿಲಂಸ್ ಲಾಂಛನದಲ್ಲಿ ಇಂದ್ರಜಿತ್ ಲಂಕೇಶ್ ನಿರ್ಮಿಸಿ, ಆಕ್ಷನ್ ಕಟ್ ಹೇಳಿರುವ ಹಾಗೂ ಸಮರ್ಜಿತ್ ಲಂಕೇಶ್ ನಾಯಕನಾಗಿ ನಟಿಸಿರುವ ಮೊದಲ ಚಿತ್ರ ಗೌರಿ. ಇದೀಗ ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮ ನಗರದ ಎಂಜಿ ರಸ್ತೆಯ ಪಿವಿಆರ್ ನ ಡೈರೆಕ್ಟರ್ ಫೋರಂನಲ್ಲಿ ನಡೆಯುತ್ತಿದೆ. ಕಾರ್ಯಕ್ರಮಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ನಟಿ ಪ್ರಿಯಾಂಕಾ ಉಪೇಂದ್ರ ಅತಿಥಿಯಾಗಿ ಭಾಗಿಯಾಗಿದ್ದಾರೆ. ಚಿತ್ರವು ಇದೇ ತಿಂಗಳು 15ನೇ ತಾರೀಖಿನಂದು ರಿಲೀಸ್ ಆಗುತ್ತಿದ್ದು, ಬಿಗ್ ಬಾಸ್ ಖ್ಯಾತಿಯ ಸಾನ್ಯ ಅಯ್ಯರ್ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ನನಗೆ ಇಂದ್ರಜಿತ್, ಲಂಕೇಶ್ ಅವರ ಪುತ್ರ ಅಂತ ಮುಂಚೆ ಗೊತ್ತಿರಲಿಲ್ಲ: ಗೌರಿ ಸಿನಿಮಾದ ಟ್ರೇಲರ್ ಲಾಂಚ್ ನಂತರ ಮಾತನಾಡಿದ ನಟ ಸುದೀಪ್, ಸಮರ್ಜಿತ್ ಲಂಕೇಶ್ ಅವರು ಮಾತಾಡುವಾಗ‌ ಸಾನ್ಯ ಅಯ್ಯರ್ ಬಗ್ಗೆ ಒಂದು ವಾಕ್ಯ ಹೇಳ್ತಾರೆ. ಕಪ್ಪಲ್ ಆಫ್ ಈಯರ್ಸ್ ಆ innocence ಇರಲ್ಲ. ಇಂದ್ರಜಿತ್ ನಾನು ಬಹಳ ವರ್ಷಗಳ ಸ್ನೇಹಿತರು. ನನಗೆ ಇಂದ್ರಜಿತ್, ಲಂಕೇಶ್ ಅವರ ಪುತ್ರ ಅಂತ ಮುಂಚೆ ಗೊತ್ತಿರಲಿಲ್ಲ, ತುಂಬಾ ವರ್ಷಗಳ ಕಾಲ ಶೆಟಲ್ ಬ್ಯಾಟ್ ಮಿಟನ್ ಆಡಿದ್ದೀವಿ. He is our boy, ಸಾನ್ಯ ಅವರನ್ನು ಪುಟ್ಟಗೌರಿ ಮದುವೆ ಸೇರಿ ಹಲವು ವರ್ಷಗಳಿಂದ ನೋಡಿದ್ದೀನಿ. ಅವರ ಕಲಾವಿದೆ ಆಗಬೇಕೆಂಬ ಆಸೆ ಇಂದ್ರಜಿತ್ ಈಡೇರಿಸಿದ್ದಾರೆ. 

Tap to resize

Latest Videos

ಗೌರಿ ಅವರ ಬರವಣಿಗೆ ತುಂಬಾ ಚೆನ್ನಾಗಿದೆ. Innocence ಆಫ್ ಆಕ್ಟರ್ ಇವತ್ತು ನಾನು ಸಮರ್ಜಿತ್‌ನಲ್ಲಿ ನೋಡಿದೆ. ಸಿನಿಮಾ ರಿಲೀಸ್‌ಗೂ ಮುನ್ನ ಬರುವ ಇಂತಹ ಕಾರ್ಯಕ್ರಮಗಳನ್ನು ಎಂಜಾಯ್ ಮಾಡಿ. ಸಿನಿಮಾ ನಂತ್ರ ಲೈಫ್ ಚೇಂಜ್ ಆಗುತ್ತದೆ, ಅದನ್ನು ಸ್ವೀಕರಿಸಿ. ಎಷ್ಟೋ ತರಲೆಗಳನ್ನು ನೋಡಿರೋ ತಲೆಮಾರು ನಮ್ಮದು, ಈ ತಲೆವಾರಿಗೆ ಹೆದರುತ್ತಾ?  Indirect ಆಗಿ ಡೈಲಾಗ್ ಮೂಲಕ ಹೇಳಬೇಕಾದವರಿಗೆ ಇಂದ್ರಜಿತ್ ಡೈಲಾಗ್ ಹೇಳಿದ್ದಾರೆ, ಅದು ಅರ್ಥವಾಗುತ್ತದೆ. ಆಗಸ್ಟ್ 15 ಸಿನಿಮಾ ರಿಲೀಸ್‌ಗೆ all the best ಹೇಳ್ತಿನಿ ಎಂದು ಸುದೀಪ್ ಹೇಳಿದರು.

ಟ್ರೆಂಡಿಂಗ್‌ನಲ್ಲಿ ಗೌರಿ ಸಾಂಗ್ಸ್: ಸಮರ್ಜಿತ್ ಲಂಕೇಶ್- ಸಾನ್ಯಾ ಅಯ್ಯರ್ ಜೋಡಿ ರಾಕಿಂಗ್!

ಸುದೀಪ್ ಮಗಳಿಗೆ ಡೈಮಂಡ್ ನೆಕ್ಲೆಸ್ ಗಿಫ್ಟ್ ಆಗಿ ಕೊಟ್ಟಿದೆ: ಇನ್ನು ಸುದೀಪ್ ಬಗ್ಗೆ ಮಾತನಾಡಿದ ನಿರ್ದೇಶಕ ಇಂದ್ರಜಿತ್ ಲಂಕೇಶ್, ಸುದೀಪ್ ಹೀರೋ ಆಗೋಕೂ ಮುಂಚೆ ನನಗೆ ಪರಿಚಯ. ಸುದೀಪ್ ನಂದು 25 ವರ್ಷಗಳ ಪರಿಚಯ. ಹುಚ್ಚ ದೊಡ್ಡ ಹಿಟ್ ಆಗಿತ್ತು, ಆ ಸಮಯದಲ್ಲಿ ತುಂಟಾಟದಲ್ಲಿ ಭಾಗಿ ಆಗಿ ಶೂಟ್ ಮುಗಿಸಿದ್ರು. ಸುದೀಪ್ ಮಗಳಿಗೆ ಡೈಮಂಡ್ ನೆಕ್ಲೆಸ್ ಗಿಫ್ಟ್ ಆಗಿ ಕೊಟ್ಟಿದೆ. ಆದ್ರೆ ಸುದೀಪ್ ಬೈದು ಡೈಮಂಡ್ ನೆಕ್ಲೆಸ್ ವಾಪಾಸ್ ಕೊಟ್ರು. ಸುದೀಪ್ ಅವರಿಗೆ ಗಿಫ್ಟ್ ಕೊಟ್ರೆ ಇಸ್ಕೊಳೋದಿಲ್ಲ. ಸುದೀಪ್‌ಗೆ ಕ್ರಿಕೆಟ್ ಅಂದ್ರೆ ತುಂಬಾ ಇಷ್ಟ.  ಹೀಗಾಗಿ ಕ್ರಿಕೆಟ್ ಆಡಲು ಬ್ಯಾಟ್ ಉಡುಗೊರೆ ಆಗಿ ಕೊಡ್ಬೇಕು ಅನ್ಸಿದೆ ಕೊಡ್ತಿದಿನಿ ಎಂದು ಇಂದ್ರಜಿತ್ ತಿಳಿಸಿದರು.

click me!