Sudeep: ಕೊನೆಗೂ ರಿಲೀಸ್ ಆಯ್ತು ಸುದೀಪ್ 46ನೇ ಸಿನಿಮಾದ ಟೀಸರ್: ಕಿಚ್ಚನ ಆರ್ಭಟಕ್ಕೆ ಫ್ಯಾನ್ಸ್ ಫಿದಾ

Published : Jul 02, 2023, 12:01 PM ISTUpdated : Jul 03, 2023, 08:50 AM IST
Sudeep: ಕೊನೆಗೂ ರಿಲೀಸ್ ಆಯ್ತು ಸುದೀಪ್ 46ನೇ ಸಿನಿಮಾದ ಟೀಸರ್: ಕಿಚ್ಚನ ಆರ್ಭಟಕ್ಕೆ ಫ್ಯಾನ್ಸ್ ಫಿದಾ

ಸಾರಾಂಶ

ಸುದೀಪ್ ನಟನೆಯ 46ನೇ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಕಿಚ್ಚ ಸುದೀಪ್ ಮತ್ತೆ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 46ನೇ ಸಿನಿಮಾದ ಅಪ್‌ಡೇಟ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಜುಲೈ 2ಕ್ಕೆ ಸಿನಿಮಾದ ತುಣುಕು ರಿಲೀಸ್ ಮಾಡುವುದಾಗಿ ಬಹಿರಂಗ ಪಡಿಸುವ ಮೂಲಕ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಿಸಿದ್ದರು. ಜುಲೈ 2ಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದರು. ವಿಕ್ರಾಂತ್ ರೋಣ ಸಿನಿಮಾ ಬಳಿಕ ಸುದೀಪ್ ಯಾವುದೇ ಸಿನಿಮಾ ಅನೌನ್ಸ್ ಮಾಡಿರಲಿಲ್ಲ. ಹಾಗಾಗಿ ಕಿಚ್ಚನ ಮುಂದಿನ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿತ್ತು. ಇದೀಗ 46ನೇ ಸಿನಿಮಾ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಜುಲೈ 2ಕ್ಕೆ ಕಾಯುತ್ತಿದ್ದ ಅಭಿಮಾನಿಗಳಿಗೆ  ಕೊನೆಗೂ ಕಿಚ್ಚನ ಗ್ಲಿಂಪ್ಸ್ ಸಿಕ್ಕಿದೆ. 

ಸುದೀಪ್ ಮತ್ತೆ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರಕ್ತಸಿಕ್ತವಾಗಿ ಸಿಕ್ಕಾಪಟ್ಟೆ ರಾ ಲುಕ್ ನಲ್ಲಿ ಸುದೀಪ್ ಕಾಣಿಸಿಕೊಂಡಿದ್ದಾರೆ. ಸುದೀಪ್ ಸಖತ್ ಥ್ರಿಲಿಂಗ್ ಆಗಿದ್ದು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. 'ಯುದ್ಧ ಹುಟ್ಟುಹಾಕುವವರನ್ನು ಕಂಡ್ರೆ ನನಗೆ ಆಗಲ್ಲ, ಯುದ್ಧಕ್ಕೆ ಹೆದರಿ ಓಡಿಹೋಗೊರನ್ನ ಕಂಡ್ರೂ ಆಗಲ್ಲ' ಎಂದು ಕಿಚ್ಚ ಖಡಕ್ ಡೈಲಾಗ್ ಹೇಳುತ್ತಾ ಎಂಟ್ರಿ ಕೊಟ್ಟಿದ್ದಾರೆ. ಅಂದಹಾಗೆ ಸಿನಿಮಾಗೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. 'ರಾಕ್ಷಸನ ಯುದ್ಧ ಆರಂಭ...' ಎಂದು ಟೀಸರ್ ರಿಲೀಸ್ ಮಾಡಲಾಗಿದೆ. ಅಂದಹಾಗೆ ಈ ಸಿನಿಮಾ ತಮಿಳಿನ ಖ್ಯಾತ ನಿರ್ಮಾಪಕ ಕಲೈಪುಲಿ ಎಸ್ ತನು ನಿರ್ಮಾಣದಲ್ಲಿ ಮೂಡಿ ಬರುತ್ತಿದೆ. ಅಂದಹಾಗೆ ಚಿತ್ರಕ್ಕೆ ವಿಜಯ್ ಕಾರ್ತಿಕೇಯನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ತಮಿಳಿನ ಯುವ ನಿರ್ದೇಶಕ ವಿಜಯ್, ಕಿಚ್ಚ ಸುದೀಪ್ ಅವರ 46ನೇ ಸಿನಿಮಾಗೆ ಆಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶಕರಾಗಿ ಹೊರಹೊಮ್ಮುತ್ತಿದ್ದಾರೆ. ಚೊಚ್ಚಲ ನಿರ್ದೇಶನದಲ್ಲಿ ವಿಜಯ್ ಕಾರ್ತಿಕೇಯನ್ ಅಭಿಮಾನಿಗಳ ಹೃದಯ ಗೆಲ್ತಾರಾ ಎಂದು ಕಾದುನೋಡಬೇಕಿದೆ. 

ಇನ್ನು ಈ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ರಿವೀಲ್ ಮಾಡದ ಸಿನಿಮಾತಂಡ ಕೇವಲ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದೆ.  ಅಂದಹಾಗೆ ಈ ಸಿನಿಮಾದಲ್ಲಿ ಇನ್ನೂ ಯಾರೆಲ್ಲ ನಟಿಸಲಿದ್ದಾರೆ, ಕಿಚ್ಚನಿಗೆ ನಾಯಕಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಇನ್ನೂ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿದೆ ಎನ್ನಲಾಗಿದೆ. ಈ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

ಹಾಡು ಮೆಚ್ಚಿ ಅಪ್ಪ ತಬ್ಬಿಕೊಂಡ ಕ್ಷಣ ವಿಶೇಷ: ಸಾನ್ವಿ ಸುದೀಪ್

ಕಲೈಪುಲಿ ಎಸ್‌.ತನು ತಮಿಳುನಾಡಿನಲ್ಲಿ ಪ್ರಸಿದ್ಧ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ರಜನಿಕಾಂತ್‌ ನಟನೆಯ ಕಬಾಲಿ, ಧನುಷ್ ನಟನೆಯ ಕರ್ಣನ್‌ ಸೇರಿದಂತೆ ಅನೇಕ ಹಿಟ್ ಸಿನಿಮಾಗಳನ್ನು ಕಲೈಪುಲಿ ಎಸ್‌.ತನು ನಿರ್ಮಾಣ ಮಾಡಿದ್ದಾರೆ. ಇದೀಗ ಕನ್ನಡದ ಸ್ಟಾರ್ ಸುದೀಪ್ ನಟನೆಯ 46ನೇ ಸಿನಿಮಾಗೆ  ನಿರ್ಮಾಪಕ ಕಲೈಪುಲಿ ಎಸ್‌.ತನು ತಮ್ಮ ವಿ.ಕ್ರಿಯೇಷನ್ಸ್‌ ಬ್ಯಾನರ್‌ ಅಡಿಯಲ್ಲಿ ಬಂಡವಾಳ ಹೂಡುತ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?