ಹುಟ್ಟುಹಬ್ಬದ ಸಂಭ್ರಮದಲ್ಲಿ ಗೋಲ್ಡನ್ ಸ್ಟಾರ್: 'ಕೃಷ್ಣಂ ಪ್ರಣಯ ಸಖಿ'ಯಾಗಿ ಎಂಟ್ರಿ ಕೊಟ್ಟ ಗಣೇಶ್

Published : Jul 02, 2023, 10:45 AM ISTUpdated : Jul 03, 2023, 02:19 PM IST
ಹುಟ್ಟುಹಬ್ಬದ ಸಂಭ್ರಮದಲ್ಲಿ ಗೋಲ್ಡನ್ ಸ್ಟಾರ್: 'ಕೃಷ್ಣಂ ಪ್ರಣಯ ಸಖಿ'ಯಾಗಿ ಎಂಟ್ರಿ ಕೊಟ್ಟ ಗಣೇಶ್

ಸಾರಾಂಶ

ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಇಂದು (ಜುಲೈ 2) ಹುಟ್ಟುಹಬ್ಬದ ಸಂಭ್ರಮ. ಬರ್ತಡೇ ದಿನ 'ಕೃಷ್ಣಂ ಪ್ರಣಯ ಸಖಿ'ಯಾಗಿ ಗಣೇಶ್ ಎಂಟ್ರಿ ಕೊಟ್ಟಿದ್ದು ವಿಭಿನ್ನ ಲುಕ್ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.

ಸ್ಯಾಂಡಲ್‌ವುಡ್‌ ಹೀರೋ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಇಂದು (ಜುಲೈ 2) ಹುಟ್ಟುಹಬ್ಬದ ಸಂಭ್ರಮ. ಗಣೇಶ್ ಅಭಿಮಾನಿಗಳಿಗೆ ಇಂದು ಸಂಭ್ರಮ ದಿನ. ಅಭಿಮಾನಿಗ ಗಣಿ ಹುಟ್ಟುಹಬ್ಬವನ್ನು ವಿವಿಧ ರೀತಿಯಲ್ಲಿ ಆಚರಿಸುತ್ತಿದ್ದಾರೆ. ಗಣೇಶ್ ಮನೆ ಮುಂದೆ ಅಭಿಮಾನಿಗಳ ದಂಡೇ ನೆರೆದಿದೆ. ಗೋಲ್ಡನ್ ಸ್ಟಾರ್ ನೋಡಿ ವಿಶ್ ಮಾಡಿ ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ್ಭಿಮಾನಿಗಳು ಮಾತ್ರವಲ್ಲದೆ ಗಣೇಶ್‌ಗೆ ಅನೇಕ ಗಣ್ಯರು ವಿಶ್ ಮಾಡುತ್ತಿದ್ದಾರೆ. ಹುಟ್ಟುಹಬ್ಬ ದಿನ ಗಣೇಶ್ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ನೀಡಿದ್ದಾರೆ. ಹೊಸ ಸಿನಿಮಾದ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಗಿಫ್ಟ್ ನೀಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಗಣೇಶ್ ಹೊಸ ಸಿನಿಮಾದ ಪೋಸ್ಟರ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. 

ಗಣೇಶ್ ಹೊಸ ಸಿನಿಮಾಗೆ 'ಕೃಷ್ಣಂ ಪ್ರಣಯ ಸಖಿ' ಎಂದು ಟೈಟಲ್ ಇಡಲಾಗಿದೆ. ಸದ್ಯ ರಿಲೀಸ್ ಆಗಿರುವ ಪೋಸ್ಟರ್ ನಲ್ಲಿ ಗಣೇಶ್ ಮನೆ ಕೆಲಸ ಮಾಡುವ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸೂಟ್ ಧರಿಸಿ ಹೈ ಫೈ ಆಗಿರುವ ಗಣೇಶ್ ಕೈಯಲ್ಲಿ ಬಕೆಟ್, ಪೊರಕೆ,  ನೆಲ ಒರೆಸುವ ಸ್ಟಿಕ್ ಹಿಡಿದು ಹೊರಟಿದ್ದಾರೆ. ಟೈಟಲ್ ಕೇಳಿದ್ರೆ ಗಣೇಶ್ ಲವರ್ ಬಾಯ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಗೊತ್ತಾಗುತ್ತಿದೆ. ಗೋಲ್ಡನ್ ಸ್ಟಾರ್ ರಗಡ್ ಲುಕ್‌ನಿಂದ ಲವರ್ ಬಾಯ್ ಪಾತ್ರಗಳ ಮೂಲಕೇ ಹೆಚ್ಚು ಗಮನ ಸೆಳೆದಿದ್ದಾರೆ.

‘ಚೆಲ್ಲಾಟ’ ಸಿನಿಮಾದಿಂದ ಪ್ರಾರಂಭವಾದ ಗಣೇಶ್ ಪಯಣ ಈವರೆಗೆ ಹಲವಾರು ಬಗೆಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಈಗ ಅನಾವರಣ ಆಗಿರುವ ‘ಕೃಷ್ಣಂ ಪ್ರಣಯ ಸಖಿ’ ಪೋಸ್ಟರ್​ನಲ್ಲೂ ಸಖತ್​ ಭಿನ್ನವಾಗಿ ಕಾಣಿಸಿಕೊಂಡಿದ್ದು ಸಿಕ್ಕಾಪಟ್ಟೆ ಕುತೂಹಲ ಮೂಡಿಸಿದ್ದಾರೆ. 

Bollywood Show: ' ದಿ ಕಪಿಲ್ ಶರ್ಮಾ ಶೋ'ನಲ್ಲಿ ಗೋಲ್ಡನ್ ಸ್ಟಾರ್ ; ಬಾಲಿವುಡ್ ಕಿರುತೆರೆಯಲ್ಲಿ ಗಣೇಶ್ ಮೋಡಿ

‘ತ್ರಿಶೂಲ್ ಎಂಟರ್​ಟೇನ್ಮೆಂಟ್’ ಬ್ಯಾನರ್​ ಮೂಲಕ ಪ್ರಶಾಂತ್ ಜಿ. ರುದ್ರಪ್ಪ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ‘ದಂಡುಪಾಳ್ಯ’ ಖ್ಯಾತಿಯ ನಿರ್ದೇಶಕ ಶ್ರೀನಿವಾಸ್​ ರಾಜು ಈ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳುತ್ತಿರುವುದು ವಿಶೇಷ. ಗಣೇಶ್​ ಅಭಿನಯದ 41ನೇ ಚಿತ್ರವಾಗಿ ‘ಕೃಷ್ಣಂ ಪ್ರಣಯ ಸಖಿ'. ಅರ್ಜುನ್ ಜನ್ಯ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಗಣೇಶ್​​ ಅವರಿಗೆ ಜೋಡಿಯಾಗಿ ಮಾಳವಿಕಾ ನಾಯರ್ ಅಭಿನಯಿಸುತ್ತಿದ್ದಾರೆ. ಸಾಧುಕೋಕಿಲ, ಶಶಿಕುಮಾರ್, ರಂಗಾಯಣ ರಘು, ಸುಧಾರಾಣಿ, ಶ್ರುತಿ, ಶಿವಧ್ವಜ್ ಶೆಟ್ಟಿ, ಬೆನಕ ಗಿರಿ, ಶ್ರೀನಿವಾಸಮೂರ್ತಿ ಸೇರಿದಂತೆ ಹಲವು ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಹಿಂದಿ ರಿಯಾಲಿಟಿ ಶೋನಲ್ಲಿ ಗೋಲ್ಡನ್ ಸ್ಟಾರ್ ಬಿರುದು ದಕ್ಕಿದ ಗುಟ್ಟು ಬಿಚ್ಚಿಟ್ಟ ನಟ ಗಣೇಶ್

‘ಕೃಷ್ಣಂ ಪ್ರಣಯ ಸಖಿ’ ಸಿನಿಮಾಗೆ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಮೈಸೂರು, ರಾಜಸ್ಥಾನ ಮತ್ತು ಯುರೋಪ್​ನಲ್ಲಿ ಕೂಡ ಶೂಟಿಂಗ್ ಮಾಡಲಾಗುವುದು. ಗಣೇಶ್​ ಮತ್ತು ಶ್ರೀನಿವಾಸ್​ ರಾಜು ಕಾಂಬಿನೇಷನ್​ ಇರುವುದರಿಂದ ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ತುಸು ಹೆಚ್ಚಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟರ್ ವೈರಲ್ ಆಗಿದ್ದು ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?