ಉತ್ತರ ಕರ್ನಾಟಕದ ಥಿಯೇಟರ್‌ ಒಂದರಲ್ಲಿ ನೆಲದ ಮೇಲೆ ನಿಂತು 'ಮ್ಯಾಕ್ಸ್' ನೋಡಿದ್ದೇಕೆ?

By Shriram Bhat  |  First Published Dec 28, 2024, 5:35 PM IST

ನಟ ಕಿಚ್ಚ ಸುದೀಪ್ ಅಭಿನಯದ ಯಾವುದೇ ಸಿನಿಮಾ ತೆರೆಗೆ ಬಾರದೇ ಬರೋಬ್ಬರಿ ಎರಡೂವರೆ ವರ್ಷಗಳು ಆಗಿಹೋಗಿತ್ತು. ಅವರ ಅಭಿಮಾನಿಗಳು ಈ ಬಗ್ಗೆ ಹುಸಿ ಕೋಪದಿಂದ ಕೇಳುತ್ತಲೇ ಇದ್ದರು. ಆದರೆ ಈ ಬಾರಿ ಅವರ ಬಾಸ್ ಚಿತ್ರವು ನಿರೀಕ್ಷೆ ಮೀರಿ ಚೆನ್ನಾಗಿದೆ ಎಂಬ ಪ್ರತಿಕ್ರಿಯೆ ಪಡೆದಿದೆ. ಸೋ, ಕಿಚ್ಚ ಸುದೀಪ್ ಫ್ಯಾನ್ಸ್...


ಸ್ಯಾಂಡಲ್‌ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ (Kichcha Sudeep) ನಟನೆಯ 'ಮ್ಯಾಕ್ಸ್' ಚಿತ್ರವು (Max) ಯಶಸ್ವೀ ಪ್ರದರ್ಶನ ಕಾಣುತ್ತಿದೆ ಎಂಬುದು ಬಹತೇಕ ಎಲ್ಲರಿಗೂ ಗೊತ್ತು. 25 ಡಿಸೆಂಬರ್ 2024ರಂದು ಕನ್ನಡ ಸೇರಿದಂತೆ ತಮಿಳು ಹಾಗೂ ತೆಲುಗು ಹೀಗೆ ಮೂರು ಬಾಷೆಗಳಲ್ಲಿ ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ಬಿಡುಗಡೆಯಾಗಿ ಒಳ್ಳೆಯ ರೆಸ್ಪಾನ್ಸ್ ಪಡೆದಿದೆ. ಈ ಚಿತ್ರವು ಕನ್ನಡ ಸಿನಿಪ್ರೇಕ್ಷಕರ ಪಾಲಿಗಂತೂ ಹಬ್ಬದೂಟವಾಗಿ ಪರಿಣಮಿಸಿದೆ. ವರುಷದ ಕೊನೆಯಲ್ಲಿ ಮ್ಯಾಕ್ಸ್ ಮೂಲಕ ಹರುಷದ ಹೊನಲು ಹರಿದಿದೆ. ಕಿಚ್ಚ ಅಭಿಮಾನಗಳ ಮುಖದಲ್ಲಿ ನಗು ಮೂಡಿದೆ. 

ನಟ ಕಿಚ್ಚ ಸುದೀಪ್ ಅಭಿನಯದ ಯಾವುದೇ ಸಿನಿಮಾ ತೆರೆಗೆ ಬಾರದೇ ಬರೋಬ್ಬರಿ ಎರಡೂವರೆ ವರ್ಷಗಳು ಆಗಿಹೋಗಿತ್ತು. ಅವರ ಅಭಿಮಾನಿಗಳು ಈ ಬಗ್ಗೆ ಹುಸಿ ಕೋಪದಿಂದ ಕೇಳುತ್ತಲೇ ಇದ್ದರು. ಆದರೆ ಈ ಬಾರಿ ಅವರ ಬಾಸ್ ಚಿತ್ರವು ನಿರೀಕ್ಷೆ ಮೀರಿ ಚೆನ್ನಾಗಿದೆ ಎಂಬ ಪ್ರತಿಕ್ರಿಯೆ ಪಡೆದಿದೆ. ಸೋ, ಕಿಚ್ಚ ಸುದೀಪ್ ಫ್ಯಾನ್ಸ್ ಖುಷ್ ಹುವಾ..! ಸದ್ಯ ಚಿತ್ರವು ಬಿಡುಗಡೆಯಾದ ಬಹುತೇಕ ಚಿತ್ರಮಂದರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಸ್ಯಾಂಡಲ್‌ವುಡ್‌ನಲ್ಲಿ ಈ ವರ್ಷದ ಬ್ಲಾಕ್ ಬಸ್ಟರ್ ಸಿನಿಮಾಗಳ ಲಿಸ್ಟ್‌ನಲ್ಲಿ ಮ್ಯಾಕ್ಸ್ ಕೂಡ ಜಾಗ ಪಡೆಯುವುದು ಪಕ್ಕಾ ಎನ್ನಲಾಗುತ್ತಿದೆ. 

Tap to resize

Latest Videos

undefined

ಕನ್ನಡದ ಸ್ಟಾರ್ ನಟ ಯಶ್‌ಗೆ ಭಾರತದಲ್ಲೇ ಅತೀ ಹೆಚ್ಚು ಸಂಭಾವನೆ, ಆದ್ರೆ....

ಅದರಲ್ಲೂ ಮುಖ್ಯವಾಗಿ ಉತ್ತರ ಕರ್ನಾಟಕದ ಹಲವು ಕಡೆಗಳಲ್ಲಿ ಜನರು ತಂಡೋಪತಂಡವಾಗಿ ಬಂದಿದ್ದಾರೆ. ಒಟ್ಟಿಗೇ ಬಂದಿರುವ ಜನರು ಸಿಟ್ ಇಲ್ಲ ಎಂದಾಗ ಹಾಗೇ ಮನೆಗೆ ಹೋಗಲು ಮನಸ್ಸು ಮಾಡದೇ, ನೆಲದ ಮೇಲೆ ನಿಂತುಕೊಂಡು ಹಾಗೂ ಎಕ್ಸ್‌ಟ್ರಾ ಚೇರ್ ಹಾಕಿಸಿಕೊಂಡು ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾವನ್ನು ನೋಡಿ ಖುಷಿ ಅನುಭವಿಸಿದ್ದಾರೆ. ನಾಳೆ ಬನ್ನಿ ಎಂದರೂ ಕೇಳದೇ ನಿಂತುಕೊಂಡೇ ಸಿನಿಮಾ ನೋಡಿದ್ದಾರೆ ಎಂದರೆ ಸುದೀಪ್ ಸಿನಿಮಾ ಬಗ್ಗೆ ಅವರಿಗೆ ಅದೆಷ್ಟು ಕ್ರೇಜ್ ಇರಬಹುದು!?

ಲೇಟ್ ಆಗಿ ಬಂದರೂ ಕಿಚ್ಚಸುದೀಪ್ ಅವರು ಲೇಟೆಸ್ಟ್ ಆಗಿ ಬಂದಿದ್ದಾರೆ ಎಂಬ ಮಾತು ಓಡಾಡುತ್ತಿದೆ. ಕಾರಣ, ಈ ಮೊದಲು ಅಂದರೆ ಎರಡೂವರೆ ವರ್ಷಗಳ ಹಿಂದೆ ಬಿಡುಗಡೆ ಆಗಿದ್ದ ಕಿಚ್ಚ ಸುದೀಪ್ ನಟನೆಯ ಸಿನಿಮಾಗಳು ವಿಭಿನ್ನವಾಗಿ ಇದ್ದ ಕಾರಣಕ್ಕೆ ಅವರ ಅಭಿಮಾನಿಗಳಿಗೇ ಇಷ್ಟವಾಗಿರಲಿಲ್ಲ. ಆದರೆ, ಈಗ ಬಂದಿರುವ ಮ್ಯಾಕ್ಸ್ ಸಿನಿಮಾ ಹಾಗಾಗಿಲ್ಲ, ಅಭಿಮಾನಿಗಳು ಸೇರಿದಂತೆ ಆಲ್‌ಮೋಸ್ಟ್ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿದೆ ಎಂಬ ಮಾತು ಬಹತೇಕ ಎಲ್ಲೆಡೆ ಕೇಳಿಬರುತ್ತಿದೆ. ಜೊತೆಗೆ, ಕಲೆಕ್ಷನ್ ವಿಷಯದಲ್ಲಿ ಕೂಡ ಮ್ಯಾಕ್ಸ್ ಹಿಂದೆ ಬಿದ್ದಿಲ್ಲ. ಆದರೆ, ಅಂಕಿಅಂಶಗಳು ಇನ್ನಷ್ಟೇ ಬಿಡುಗಡೆ ಆಗಬೇಕಿದೆ. 

ಶಿವಣ್ಣ ಮನೆ ನಾಯಿ ನೀಮೋ ನಿಧನ, ಕಣ್ಣೀರು ಉಕ್ಕಿಸುವ ಪತ್ರ ಬರೆದ ಗೀತಾ ಶಿವರಾಜ್‌ಕುಮಾರ್!

click me!