ನೀಮೋ ಹೆಸರಿನ ನಾಯಿಯ ಸಾವಿನಿಂದ ಶಿವಣ್ಣರ ಕುಟುಂಬದಲ್ಲಿ ಅಕ್ಷರಶಃ ಸೂತಕದ ವಾತಾವರಣ ನಿರ್ಮಾಣವಾಗಿದೆ ಎಂದು ಆ ಪತ್ರದಿಂದ ತಿಳಿದುಬರುತ್ತಿದೆ. ಶಿವಣ್ಣ ಅಳಿಯ ದಿಲೀಪ್ ಕೊಟ್ಟ ನಾಯಿ ಬಳಿಕ ದೊಡ್ಮನೆ ದೊಡ್ಮಗನ ಮನೆಯ ಸದಸ್ಯನಂತೆ ಆಗಿಬಿಟ್ಟಿತ್ತು. ಆದರೆ ಇಂದು ನಾಯಿ ಮೃತಪಟ್ಟಿದೆ...
ಸ್ಯಾಂಡಲ್‌ವುಡ್ ನಟ, ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ (Shiva Rajkumar) ವಾರ ಮನೆ ನಾಯಿ ನೀಮೋ ನಿಧನ ಹೊಂದಿದೆ. ಶಿವಣ್ಣ ಅವರ ದೊಡ್ಡ ಮಗಳು ನಿರುಪಮಾ ಪತಿ ಮದುವೆಗೆ ಮೊದಲು ಆ ನಾಯಿಯನ್ನು ಗಿಫ್ಟ್ ಆಗಿ ಕೊಟ್ಟಿದ್ದರು. ನಿರುಪಮಾ ಅವರು ಡಾಕ್ಟರ್ ಆಗಿರುವ ಕಾರಣಕ್ಕೆ ಅದನ್ನು ಸಮಯಕ್ಕೆ ಸರಿಯಾಗಿ ನೋಡಿಕೊಳ್ಳಲು ಆಗೋದಿಲ್ಲ ಎಂಬ ಕಾರಣಕ್ಕೆ ಅದು ಶಿವಣ್ಣರ ಮನೆಯಲ್ಲೇ ಇತ್ತು ಎನ್ನಲಾಗಿದೆ. ಆದರೆ ಇಂದು ನಾಯಿ ನೀಮೋ ಅಸು ನೀಗಿದೆ. ಈ ಬಗ್ಗೆ ಅಮೆರಿಕಾದಲ್ಲಿರುವ ಗೀತಾ ಶಿವರಾಜ್‌ಕುಮಾರ್ (Geetha Shivarajkumar) ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸುದೀರ್ಘ ಪತ್ರವೊಂದನ್ನು ಬರೆದು ಪೋಸ್ಟ್ ಮಾಡಿದ್ದಾರೆ.
ನಟ ಶಿವಣ್ಣ ಅವರು ಕಳೆದ ವಾರ ಅಮೆರಿಕಾಗೆ ಚಿಕಿತ್ಸೆಗೆ ಹೊರಡುವ ವೇಳೆ ನಾಯಿ ನೀಮೋ ಅವರ ಜೊತೆಯಲ್ಲೇ ಇದ್ದು ಬೀಳ್ಕೊಟ್ಟಿದೆ. ಆದರೆ, ಅಲ್ಲಿ ಶಿವಣ್ಣ ಅವರು ಸರ್ಜರಿ ಮುಗಿಸಿಕೊಂಡು ವಿಶ್ರಾಂತಿಯಲ್ಲಿ ಇರುವಾಗ ನೀಮೋ ಮೃತಪಟ್ಟಿದೆ. ಆ ನಾಯ ಬಗ್ಗೆ ಶಿವರಾಜ್‌ಕುಮಾರ್, ಗೀತಾ ಶಿವರಾಜ್‌ಕುಮಾರ್ ಸೇರಿದಂತೆ ಎಲ್ಲರಿಗೂ ಬಹಳಷ್ಟು ಅಟ್ಯಾಚ್‌ಮೆಂಟ್ ಇತ್ತು ಎಂಬುದು ಗೀತಾ ಅವರ ಪತ್ರದಿಂದ ತಿಳಿದುಬರುತ್ತಿದೆ. ಆ ಪತ್ರದಲ್ಲಿ ಆ ನಾಯಿ ನೀಮೋ ಮನೆಯಲ್ಲಿ ಹೇಗಿರುತ್ತಿತ್ತು, ಗೀತಾ ಅವರನ್ನು ಅದೆಷ್ಟು ಇಷ್ಟಪಡುತ್ತಿತ್ತು ಎಂಬ ಬಗ್ಗೆ ಬರೆದಿದ್ದಾರೆ.
undefined
ಕನ್ನಡದ ಸ್ಟಾರ್ ನಟ ಯಶ್‌ಗೆ ಭಾರತದಲ್ಲೇ ಅತೀ ಹೆಚ್ಚು ಸಂಭಾವನೆ, ಆದ್ರೆ....
ನೀಮೋ ಹೆಸರಿನ ನಾಯಿಯ ಸಾವಿನಿಂದ ಶಿವಣ್ಣರ ಕುಟುಂಬದಲ್ಲಿ ಅಕ್ಷರಶಃ ಸೂತಕದ ವಾತಾವರಣ ನಿರ್ಮಾಣವಾಗಿದೆ ಎಂದು ಆ ಪತ್ರದಿಂದ ತಿಳಿದುಬರುತ್ತಿದೆ. ಶಿವಣ್ಣ ಅಳಿಯ ದಿಲೀಪ್ ಕೊಟ್ಟ ನಾಯಿ ಬಳಿಕ ದೊಡ್ಮನೆ ದೊಡ್ಮಗನ ಮನೆಯ ಸದಸ್ಯನಂತೆ ಆಗಿಬಿಟ್ಟಿತ್ತು. ಆದರೆ ಇಂದು ನಾಯಿ ಮೃತಪಟ್ಟಿದೆ, ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದೆ. ಈ ಬಗ್ಗೆ ಗೀತಾ ಶಿವರಾಜ್‌ಕುಮಾರ್ ಬರೆದಿರುವ ಪತ್ರ ಓದಿದರೆ ಯಾರಿಗಾದರೂ ಕಣ್ಣು ತುಂಬಿ ಬರುತ್ತದೆ. ಆದರೆ, ನೀಮೋ ಈ ಜಗತ್ತನ್ನು ಅಗಲಿ ಹೋಗಿದ್ದಾನೆ. ಪತ್ರದ ಪ್ರತಿ ಇದೆ, ಓದಿಕೊಳ್ಳಿ..
ಅಂದಹಾಗೆ, ನಟ ಶಿವರಾಜ್‌ಕುಮಾರ್ ಅವರು ಅಮೆರಿಕಾದಲ್ಲಿ ಕ್ಯಾನ್ಸರ್ ಸರ್ಜರಿಗೆ ಒಳಗಾಗಿ ಈಗ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಜನವರಿ 26ರತನಕ ಅಮೆರಿಕಾದಲ್ಲಿ ಇದ್ದು ವಿಶ್ರಾಂತಿ ಪಡೆಯಲಿರುವ ನಟ ಶಿವಣ್ಣ ಅವರು ಆ ಬಳಿಕ ಭಾರತಕ್ಕೆ ವಾಪಸ್ಸಾಗಿ ಎಂದಿನಂತೆ ಸಿನಿಮಾ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ. ಫೆಬ್ರವರಿ ತಿಂಗಳಿನಿಂದ ಹಲವಾರು ತಿಂಗಳುಗಳ ಕಾಲ ನಟ ಶಿವರಾಜ್‌ಕುಮಾರ್ ಅವರು ಸಾಕಷ್ಟು ಸಿನಿಮಾಗಳಿಗೆ ಡೇಟ್ಸ್ ಕೊಟ್ಟಿದ್ದಾರಂತೆ. ಒಟ್ಟಿನಲ್ಲಿ, ಅಮೆರಿಕಾದಲ್ಲಿ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು ನಟ ಶಿವಣ್ಣ ಚೇತರಿಸಿಕೊಳ್ಳುತ್ತಿದ್ದಾರೆ.
ಒಂದು ಕಾಲದ ಆಪ್ತ ಗೆಳೆಯರು ಕಿಚ್ಚ, ದಚ್ಚು, ಮತ್ತೆ ಒಂದಾಗಲು ವೇದಿಕೆ ರೆಡಿಯಾಗಿದ್ಯಾ?