ನನ್ನ ಸಿನಿಮಾಗಳ ಮುಂದಿನ ಭಾಗವನ್ನು ಮಾಡಲು ನಾನೂ ಕೂಡ ಉತ್ಸುಕನಾಗಿದ್ದೇನೆ. ಆದರೆ ಅದು ಸಾಧ್ಯವಾಗುವುದು ಯಾವಾಗ ಎಂಬುದೇ ಯೋಚನೆಯಾಗಿದೆ. ಏಕೆಂದರೆ, ಸದ್ಯಕ್ಕೆ 'ಯು/ಐ' ಚಿತ್ರದ ಕೆಲಸ..
ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ (Real Star Upendra) ನಟನೆ-ನಿರ್ದೇಶನದ A ಸಿನಿಮಾ ಮತ್ತೆ ರಿಲೀಸ್ ಆಗಿದೆ. ಬರೋಬ್ಬರಿ 25 ವರ್ಷಗಳ ಬಳಿಕ ರೀರಿಲೀಸ್ ಕಂಡಿರುವ ಈ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಈ ಸಿನಿಮಾದಲ್ಲಿ ನಟ ಉಪೇಂದ್ರ ಮೊಟ್ಟಮೊದಲ ಬಾರಿಗೆ ನಟರಾಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮರುಬಿಡುಗಡೆ ವೇಳೆ, ಹಲವು ಮಾಧ್ಯಮಗಳ ಸಂದರ್ಶನಗಳಲ್ಲಿ ನಟ ಉಪೇಂದ್ರ ಅಂದು ಈ ಚಿತ್ರ ಮಾಡಿದ್ದು, ಈಗ ಬರುತ್ತಿರುವ ಒಪಿನಿಯನ್ ಬಗ್ಗೆ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಸಂದರ್ಶನದಲ್ಲಿ ಮಾತನಾಡುತ್ತ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿ ಉಪೇಂದ್ರ 'A ಸಿನಿಮಾ ಬಿಡುಗಡೆಯಾದ ಮರುದಿನವೇ ನಡೆದ ಈ ಒಂದು ಘಟನೆ ನನಗೆ ಈಗಲೂ ಜ್ಞಾಪಕದಲ್ಲಿದೆ. ಅಂದು ನಟ ಸುದೀಪ್ (Kichcha Sudeep) ನನ್ನ ಮುಂದೆ ಬಂದು ನನಗೆ ನಿಮ್ಮ ಜತೆ ಅಸಿಸ್ಟಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಲು ಒಂದು ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದರು. ನೀವು ಆರು ಅಡಿ ಇದ್ದೀರಾ, ನೋಡೋದಕ್ಕೆ ಚೆನ್ನಾಗಿಯೂ ಇದ್ದೀರಾ, ಹೀರೋ ಆಗಿ' ಎಂದಿದ್ದೆ. ಕನ್ನಡದ ಹಾಗೂ ಬೇರೆ ಬೇರೆ ನಟನಟಿಯರು ಅವಕಾಶ ಕೇಳಿಕೊಂಡು ಬಂದಿದ್ದರು. ಹಾಗೇ ಬೇರೆ ಭಾಷೆಯ ನಿರ್ದೇಶಕರು ಸಹ ಮೆಚ್ಚಿ ಮಾತನಾಡಿದ್ದರು.
ತೆಲುಗು ಸೀರಿಯಲ್‌ನಲ್ಲಿ ಕನ್ನಡಿಗ ಸಿದ್ದಾರ್ಥ್ ಮಿಂಚು; ಮನೆಮಾತಾದ ಹ್ಯಾಂಡ್‌ಸಮ್ ಬಾಯ್!
ಇತ್ತೀಚೆಗೆ, ಎ ಸಿನಿಮಾದ ರೀರಿಲೀಸ್‌ಗೆ ಸಂಬಂಧಿಸಿ ಮಾತನಾಡುತ್ತ ನಟ ಧ್ರುವ ಸರ್ಜಾ, 'ಸರ್, ನಿಮ್ಮ ಎ ಸಿನಿಮಾ ಮತ್ತೆ ಮರುಬಿಡುಗಡೆ ಆಗುತ್ತಿರುವುದು ನಿಜವಾಗಿಯೂ ಸಂತೋಷದ ಸಂಗತಿ. ಹಾಗೇ, ನಿಮ್ಮ ಎಲ್ಲಾ ಸಿನಿಮಾಗಳನ್ನೂ ಸೀಕ್ವೆಲ್ (ಪಾರ್ಟ್ 2) ಮಾಡ್ಬಹುದು, ಮಾಡುವಂತೆ ಎಲ್ಲವೂ ಎಂಡ್ ಆಗಿವೆ' ಅಂದ್ರು. 'ನಟ ಧ್ರುವ ಸರ್ಜಾರ ಅನಿಸಿಕೆಯ ಪ್ರಾಮಾಣಿಕ ಮಾತಿಗೆ ಧನ್ಯವಾದಗಳು' ಎಂದಿದ್ದಾರೆ ಉಪೇಂದ್ರ.
ಉಪೇಂದ್ರರ 'ಎ' ಸಿನಿಮಾ ರೀ-ರಿಲೀಸ್, ಧ್ರುವ ಸರ್ಜಾ ಹೇಳಿದ್ದೇನು? ಉಪ್ಪಿ ಕೌಂಟರ್?
ನಟ-ನಿರ್ದೇಶಕ ಉಪೇಂದ್ರ ಮಾತನಾಡುತ್ತ 'ಈ ಚಿತ್ರವನ್ನು ನಾನು ಕೇವಲ ಚಿತ್ರಕತೆಯಲ್ಲಿ ಆಟವಾಡಿದ್ದೇನೆ ಎನ್ನಬಹುದು. ನಿಜವಾಗಿಯೂ ಹೇಳಬೇಕೆಂದರೆ, ಅಂದು ನನ್ನ ಈ ಎ ಸಿನಿಮಾವನ್ನು ನೋಡಿದ ಹಲವರು ನಿಮ್ಮ ಸಿನಿಮಾ ನೋಡಿ ನಮಗೆ ನಟನಾಗಬೇಕು, ನಿರ್ದೇಶಕನಾಗಬೇಕು ಎನಿಸಿದೆ ಅಂದಿದ್ದರು. ಅದು ನನಗೆ ಸಿಕ್ಕ ದೊಡ್ಡ ಬಹುಮಾನ ಎನ್ನಬಹುದು. ಜೊತೆಗೆ, ಹಲವರು ಈ ಸಿನಿಮಾದಲ್ಲಿ ನನ್ನ ನಟನೆಯನ್ನೂ ಒಪ್ಪಿಕೊಂಡು ಹರಿಸಿರುವುದು ಇಂದಿಗೂ ನಾನು ನಟನಾಗಿ ಸಿನಿರಂಗದಲ್ಲಿ ಇರಲು ಸಹಾಯ ಮಾಡಿದೆ.
ಭಾರೀ ಮೊತ್ತಕ್ಕೆ ಸೇಲ್ ಆಯ್ತು ರಿಷಬ್ ಶೆಟ್ಟಿ 'ಕಾಂತಾರ' ಸಿನಿಮಾ ಡಿಜಿಟಲ್ ರೈಟ್ಸ್!
ಹೌದು, ನನ್ನ ಸಿನಿಮಾಗಳ ಮುಂದಿನ ಭಾಗವನ್ನು ಮಾಡಲು ನಾನೂ ಕೂಡ ಉತ್ಸುಕನಾಗಿದ್ದೇನೆ. ಆದರೆ ಅದು ಸಾಧ್ಯವಾಗುವುದು ಯಾವಾಗ ಎಂಬುದೇ ಯೋಚನೆಯಾಗಿದೆ. ಏಕೆಂದರೆ, ಸದ್ಯಕ್ಕೆ 'ಯು/ಐ' ಚಿತ್ರದ ಕೆಲಸ ಹಾಗು ಬಿಡುಗಡೆಯ ಪ್ಲಾನ್ ಮಾಡುತ್ತಿದ್ದೇನೆ. ಬಳಿಕ, ನಾನು ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾ ನಟನೆಯ ಶೂಟಿಂಗ್ ಮುಗಿಸಬೇಕಿದೆ. ಅದಾದ ಬಳಿಕವಷ್ಟೇ ನಾನು ನನ್ನ ಹಳೆಯ ಸಿನಿಮಾಗಳ 'ಪಾರ್ಟ್ 2' ಹೊಸ ಸಿನಿಮಾ ನಿರ್ದೇಶನದ ಬಗ್ಗೆ ಯೋಚನೆ, ಯೋಜನೆ ಕೈಗೆತ್ತಿಕೊಳ್ಳಬೇಕು.
ನಮ್ಮಿಬ್ಬರಲ್ಲಿ ಹತ್ತು ವರ್ಷಗಳ ಅಂತರವಿದೆ; ಪ್ರಿಯಾಂಕಾ ಮಾತಿಗೆ ಗುಸುಗುಸು ಶುರುವಾಗಿದ್ದೇಕೆ?
ಹಾಗೆ ನಾನು ನನ್ನ ಮೊದಲಿನ ಸಿನಿಮಾದ ಸೀಕ್ವೆಲ್ ಮಾಡುವ ಮೊದಲು ನಾನಾ ಆಯಾ ಸಿನಿಮಾದ ಕಾಲಘಟ್ಟದ ಮೆಂಟಾಲಿಟಿಗೆ ಹೋಗಬೇಕು.
ಇವೆಲ್ಲ ಕಾರಣಕ್ಕೆ, ನನ್ನ ಸಿನಿಮಾಗಲಳ ಸೀಕ್ವೆಲ್ ಯೋಜನೆ ಕಾರ್ಯರೂಪಕ್ಕೆ ಬರಲು ಸ್ವಲ್ಪ ತಡವಾಗಬಹುದು' ಎಂದಿದ್ದಾರೆ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ. ಒಟ್ಟಿನಲ್ಲಿ, ಉಪೇಂದ್ರ ನಟನೆ-ನಿರ್ದೇಶನದ ಎ ಚಿತ್ರವನ್ನು ಈಗಿನ ಜನರೇಶನ್ ಮೊದಲ ಬಾರಿಗೆ ನೋಡಿ ಇಷ್ಟಪಟ್ಟು ಮತ್ತೆಮತ್ತೆ ನೋಡುತ್ತಿದ್ದಾರೆ, ಎಂಜಾಯ್ ಮಾಡುತ್ತಿದ್ದಾರೆ. ದಿನದಿನಕೂ ಎ ಚಿತ್ರವು ಹೆಚ್ಚು ಹೆಚ್ಚು ಚಿತ್ರಮಂದಿರಗಳಲ್ಲಿ ಮರುಬಿಡುಗಡೆ ಕಾಣುತ್ತಿದೆ.