ವೆಸ್ಟ್ ಇಂಡೀಸ್ ವಿರುದ್ಧ ಭಾರತ ವಿಶ್ವಕಪ್ ಗೆದ್ದ ಕಥೆಯೇ 83. ರಣವೀರ್ ಸಿಂಗ್, ದೀಪಿಕಾ ಡಿಫರೆಂಟ್ ಲುಕ್ ಝಲಕ್ ಹೇಗಿದೆ?
ಬಾಲಿವುಡ್ (Bollywood) ಚಿತ್ರರಂಗದ ಸ್ಟೈಲಿಷ್ ನಟ ರಣವೀರ್ ಸಿಂಗ್ (Ranveer Singh) ಮತ್ತು ಮಡದಿ ಡಿಂಪಲ್ ಹುಡುಗಿ ದೀಪಿಕಾ ಪಡುಕೋಣೆ (Deepika Padukone) ಬಾಜಿರಾವ್ ಮಸ್ತಾನಿ ಚಿತ್ರದ ನಂತರ ಮತ್ತೆ ಒಟ್ಟಾಗಿ ಕಾಣಿಸಿಕೊಂಡಿರುವ 83 ಚಿತ್ರದಲ್ಲಿ. 1983ರಲ್ಲಿ ಭಾರತ ವಿಶ್ವಕಪ್ ಗೆದ್ದ ರೋಚನ ಕಥೆಯನ್ನು 83 ಸಿನಿಮಾದಲ್ಲಿ ಅದ್ಭುತವಾಗಿ ತೋರಿಸಲಾಗಿದೆ. 3 ನಿಮಿಷ 50 ಸೆಕೆಂಡ್ ರಿಲೀಸ್ ಮಾಡಿರುವ ಟ್ರೈಲರ್ ವೈರಲ್ ಆಗಿ ಕೆಲವೇ ನಿಮಿಷಗಳಲ್ಲಿ ಯುಟ್ಯೂಬ್ ಟ್ರೆಂಡಿಂಗ್ ಲಿಸ್ಟ್ ಸೇರಿದೆ.
ವಿಶ್ವಕಪ್ ಟೀಮ್ ಇಂಡಿಯಾ ಕ್ಯಾಪ್ಟನ್ ಕಪಿಲ್ ದೇವ್ (Kapil dev) ಪಾತ್ರದಲ್ಲಿ ರಣವೀರ್ ಸಿಂಗ್ ಕಾಣಿಸಿಕೊಂಡರೆ, ಅವರ ಪತ್ನಿಯಾಗಿ ದೀಪಿಕಾ ಪಡುಕೋಣೆ ಮಿಂಚಿದ್ದಾರೆ. ಟ್ರೈಲರ್‌ನಲ್ಲಿ ಲಾರ್ಡ್ಸ್ ಸ್ಟೇಡಿಯಂನಲ್ಲಿ ನಡೆದ ರೋಚಕ ಫಿನಾಲೆ ಪಂದ್ಯವನ್ನು ತೋರಿಸಲಾಗಿದೆ. ಕಬೀರ್ ಖಾನ್ ನಿರ್ದೇಶನ ಮಾಡಿರುವ ಈ ಸಿನಿಮಾ ಡಿಸೆಂಬರ್ 24ರಂದು ಬಿಡುಗಡೆ ಅಗಲಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಟ್ರೇಲರ್ ಹೇಗಿದೆ? ಸೋಷಿಯಲ್ ಮೀಡಿಯಾದಲ್ಲಿ ಈಗಾಗಲೇ ಸೆಲೆಬ್ರಿಟಿಗಳು ಟ್ವೀಟ್ ಮಾಡಿದ್ದಾರೆ.
ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ 83 ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಕನ್ನಡಿಗರಿಗೆ ಹತ್ತಿರವಾಗಲು ಮತ್ತೊಂದು ಕಾರಣವಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕನ್ನಡ ಅವತರಣಿಕೆಯನ್ನು ಬಿಡುಗಡೆ ಮಾಡುತ್ತಿದ್ದಾರೆ. 'ಇದು ಬಹಳ ಸಂತೋಷ ಮತ್ತು ಹೆಮ್ಮಯ ವಿಚಾರ. ಕಿಚ್ಚ ಸುದೀಪ್ (Kiccha Sudeep) ಅವರು ನಮ್ಮ ತಂಡದೊಂದಿಗೆ ಸೇರಿಕೊಂಡಿರುವುದರಿಂದ 83 ಸಿನಿಮಾ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳಲಿದೆ,'ಎಂದು ಕಬೀರ್ ಖಾನ್ ಹೇಳಿದ್ದಾರೆ.
'The incredible true story of the underdogs who pulled off the unthinkable!' ಎಂದು ಬರೆದುಕೊಂಡು ಸುದೀಪ್ ಟ್ರೇಲರ್ ಲಿಂಕ್ ಹಂಚಿಕೊಂಡಿದ್ದಾರೆ. 'ಇಡೀ ತಂಡಕ್ಕೆ ನನ್ನ ಶುಭಾಶಯಗಳು. ಈ ವಿಡಿಯೋ ನನಗೆ gooose bumps ನೀಡಿತ್ತು. ಬಾನಫೈಡ್ ಬ್ಲಾಕ್ ಬಸ್ಟರ್ ಕಬೀರ್. ರಣವೀರ್ ನೀವು ಕಪಿಲ್ ದೇವ್ ಆಗಿಬಿಟ್ಟೆ,' ಎಂದು ಕರಣ್ ಜೋಹಾರ್ ಬರೆದುಕೊಂಡಿದ್ದಾರೆ.
ಈ ಟ್ರೇಲರ್‌ನ ಆರಂಭದಿಂದ ನೋಡಿದರೆ ಒಂದು ಕ್ಷಣವೂ ಗಮನ ಕಳೆದುಕೊಳ್ಳದೇ ನೋಡುತ್ತೇವೆ. ಚಿತ್ರದ ಸಂಭಾಷನೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ. ಹಾಗೇ ರೋಮಿ ಭಾಟಿಯಾ ಲುಕ್‌ನಲ್ಲಿ ದೀಪಿಕಾ ಎಲ್ಲರ ಗಮನ ಸೆಳೆದಿದ್ದಾರೆ. ಕಪಿಲ್ ದೇವ್ ಜೊತೆಗೆ ಪ್ರತಿಯೊಬ್ಬ ಕ್ರಿಕೆಟರ್‌ಗೂ ಸಿನಿಮಾದಲ್ಲಿ ಹೆಚ್ಚಿನ ಪ್ರಮುಖ್ಯತೆ ನೀಡಲಾಗಿದೆ. ಕೆಲವರಿಗೆ ಟ್ರೇಲರ್ ನೋಡುವಾಗ ಭಾವುಕರಾಗಿದ್ದೇವೆ ಎಂದು ಕಾಮೆಂಟ್ ಮಾಡಿದ್ದಾರೆ.
The incredible true story of the underdogs who pulled off the unthinkable! in Kannada Out Now - https://t.co/Pdmbe7EVS7
83 RELEASING IN CINEMAS ON 24TH DEC, 2021, in Kannada Hindi, Tamil, Telugu, and Malayalam. Also in 3D. pic.twitter.com/QFEtFdCyn8
'83 ಡಿಸೆಂಬರ್ 24, 2021 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಕಪಿಲ್ ದೇವ್ ಪತ್ನಿ ರೋಮಿ ದೇವ್ ಆಗಿ ತೆರೆಮೇಲೆ ಕಾಣಿಸಿಕೊಳ್ಳಲಿರುವ ದೀಪಿಕಾ ಪಡುಕೋಣೆ ಲುಕ್ ಬಗ್ಗೆ ಅಭಿಮಾನಿಗಳಲ್ಲಿ ಅಪಾರ ನಿರೀಕ್ಷೆ ಇದೆ. ಎಂದಿನಂತ ರಣವೀರ್ ಸಿಂಗ್ ಮತ್ತು ಬಾಲಿವುಡ್ ಪದ್ಮಾವತ್ ತೆರೆ ಮೇಲೆ ಮೋಡಿ ಮಾಡುವುದರಲ್ಲಿ ಅನುಮಾನವೇ ಇಲ್ಲ.
ಒಮ್ಮೆ ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟ ಬಳಿಕ, ನಿಮಗಿಂತ ಉತ್ತಮರು ಮತ್ತೊಬ್ಬರಿಲ್ಲ: ಕಪಿಲ್ ದೇವ್ಸಿನಿಮಾದ ಚಿತ್ರೀಕರಣವು 2019 ರಲ್ಲಿಯೇ ಪ್ರಾರಂಭವಾಗಿತ್ತು. ಈ ಮೊದಲುಏಪ್ರಿಲ್ 10, 2020ರಂದು ಚಿತ್ರ ಬಿಡುಗಡೆಯಾಗುವ ನಿರೀಕ್ಷೆ ಇತ್ತು. ಕೊರೋನಾದಿಂದಾಗಿ ರಿಲೀಸನ್ನು 2020ರ ಕ್ರಿಸ್ಮಸ್‌ಗೆ ಮುಂದೂಡಲಾಯಿತು. ಕೊರೋನಾ ಮತ್ತು ಲಾಕ್‌ಡೌನ್‌ಗಳಿಂದಾಗಿ ಬಿಡುಗಡೆಯ ದಿನಾಂಕಗಳಲ್ಲಿ ಹಲವಾರು ಬಾರಿ ಬದಲಾವಣೆಗಳಾದ ವರ್ಷದ ನಂತರ ಕೊನೆಗೂ ಡಿಸೆಂಬರ್ 21, 2021 ರಂದು ತೆರೆಗೆ ಬರಲಿದೆ.
83 Teaser: ಭಾರತ ವಿಶ್ವಕಪ್ ಗೆದ್ದ ರೋಚಕ ಕ್ಷಣಗಳು ತೆರೆಯ ಮೇಲೆ, ಕಪಿಲ್ ದೇವ್ ಪಾತ್ರದಲ್ಲಿ ರಣವೀರ್ ರಾಕಿಂಗ್83 ರಲ್ಲಿ ಪಂಕಜ್ ತ್ರಿಪಾಠಿ ಮ್ಯಾನೇಜರ್ PR ಮಾನ್ ಸಿಂಗ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಲ್ವಿಂದರ್ ಸಿಂಗ್ ಸಂಧು ಪಾತ್ರದಲ್ಲಿ ಅಮ್ಮಿ ವಿರ್ಕ್, ಸೈಯದ್ ಕಿರ್ಮಾನಿಯಾಗಿ ಸಾಹಿಲ್ ಖಟ್ಟರ್ ಮತ್ತು ಸುನಿಲ್ ಗವಾಸ್ಕರ್ ಪಾತ್ರದಲ್ಲಿ ತಾಹಿರ್ ಭಾಸಿನ್ ನಟಿಸಿದ್ದಾರೆ.