ದರ್ಶನ್ ಬಂಧನದ ಲಾಭ ಪಡೆದ ಮ್ಯಾಕ್ಸ್‌?: ಡೆವಿಲ್ ಕಣ್ಣಿಟ್ಟಿದ್ದ ತಿಂಗಳ ಮೇಲೆ ಕಿಚ್ಚನ ಮ್ಯಾಕ್ಸ್ ಕಣ್ಣು

By Sathish Kumar KH  |  First Published Sep 27, 2024, 11:15 AM IST

ದರ್ಶನ್ ಅವರ 'ಡೆವಿಲ್' ಸಿನಿಮಾ ಬಿಡುಗಡೆ ಮುಂದೂಡಲ್ಪಟ್ಟಿದ್ದು, ಕಿಚ್ಚ ಸುದೀಪ್ ಅವರ 'ಮ್ಯಾಕ್ಸ್' ಚಿತ್ರತಂಡ ಡಿಸೆಂಬರ್ 20 ರಂದು ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ.


ಬೆಂಗಳೂರು (ಸೆ.27): ಕನ್ನಡ ಚಿತ್ರರಂಗದಲ್ಲಿ ಎಲ್ಲವೂ ಸರಿಯಾಗಿದ್ದರೆ ನಟ ದರ್ಶನ್ ತೂಗುದೀಲ ನಟನೆಯ ಡೆವಿಲ್ ಸಿನಿಮಾ ಡಿ.27ಕ್ಕೆ ರಿಲೀಸ್ ಆಗಬೇಕಿತ್ತು. ಆದರೆ, ಈಗ ದರ್ಶನ್ ಕೊಲೆ ಆರೋಪದಲ್ಲಿ ಜೈಲಿನಲ್ಲಿರುವ ಕಾರಣ ಡೆವಿಲ್ ಸಿನಿಮಾ ಅರ್ಧಕ್ಕೆ ನಿಂತಿದೆ. ಇದನ್ನು ಸದುಪಯೋಗ ಮಾಡಿಕೊಂಡಿರುವ ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾ ತಂಡವು ಅದಕ್ಕೂ ಒಂದು ವಾರ ಮುಂಚಿತವಾಗಿ ಅಂದರೆ ಡಿ.20ಕ್ಕೆ ಮ್ಯಾಕ್ಸ್ ಸಿನಿಮಾ ರಿಲೀಸ್‌ ಮಾಡಲು ಸಿದ್ಧತೆ ಮಾಡಿಕೊಂಡಿದೆ.

ಕಳೆದ ನಾಲ್ಕೈದು ತಿಂಗಳ ಹಿಂದೆ ಕನ್ನಡ ಚಿತ್ರರಂಗಕ್ಕೆ ಬಂದೆರಗಿದ ಚಿತ್ರದುರ್ಗದ ರೇಣುಕಾಸ್ವಾಮಿಯ ಅದೊಂದು ಕೆಟ್ಟ ಸಂದೇಶ ಇಡೀ ದಿಕ್ಕನ್ನೇ ಬದಲಿಸಿದೆ. ಹೀಗೆ ನಟಿ ಪವಿತ್ರಾ ಗೌಡಗೆ ಕೆಟ್ಟ ಸಂದೇಶ ಕಳಿಸಿದ್ದ ರೇಣುಕಾಸ್ವಾಮಿಯನ್ನು ನಟ ದರ್ಶನ್ ಗ್ಯಾಂಗ್ ಕೊಂದು ಹಾಕಿದ್ದಾರೆ. ಈ ಆರೋಪದಲ್ಲಿ ಸಿಲುಕಿರುವ ದರ್ಶನ್ ತೂಗುದೀಪ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ. ಇದರಿಂದಾಗಿ ತಾವು ತೊಡಗಿಕೊಂಡಿದ್ದ ಡೆವಿಲ್ ಸಿನಿಮಾದ ಚಿತ್ರೀಕರಣದ ಕಾರ್ಯ ಅರ್ಧಕ್ಕೆ ನಿಂತಿವೆ. ಆದ್ದರಿಂದ ಡೆವಿಲ್ ಸಿನಿಮಾವನ್ನು ಡಿ.27ಕ್ಕೆ ರಿಲೀಸ್ ಮಾಡಲು ರೂಪಿಸಿದ್ದ ಯೋಜನೆ ಕೈಕೊಟ್ಟಿದೆ. ಆದರೆ, ಇದನ್ನು ಸದುಪಯೋಗ ಮಾಡಿಕೊಂಡಿರುವ ಮ್ಯಾಕ್ಸ್ ಸಿನಿಮಾದ ನಿರ್ದೇಶಕರು ಇದೇ ಡಿ.20ರಂದು ಕಿಚ್ಚ ಸುದೀಪ್ ನಟನೆಯ ಮಾಸ್ ಮ್ಯಾಕ್ಸ್ ಸಿನಿಮಾ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ.

Tap to resize

Latest Videos

undefined

ಶಿವಣ್ಣನ ದೊಡ್ಡ ಮನಸ್ಸಿಗೆ ಧ್ರುವ ಸರ್ಜಾ ಫಿದಾ: ಮಾರ್ಟಿನ್ ಗೆ ದಾರಿ ಮಾಡಿಕೊಟ್ಟ ಬೈರತಿ ರಣಗಲ್

ಡೆವಿಲ್ ಕಣ್ಣಿಟ್ಟಿದ್ದ ತಿಂಗಳ ಮೇಲೆ ಮಾಸ್ ಮ್ಯಾಕ್ಸ್ ಕಣ್ಣು ಇಟ್ಟಿದೆ. ಕನ್ನಡ ಚಿತ್ರರಂಗಕ್ಕೆ ಅದೃಷ್ಟದ ತಿಂಗಳೆಂದೇ ಭಾವಿಸಲಾದ ಲಕ್ಕಿ ಡಿಸೆಂಬರ್ ತಿಂಗಳಲ್ಲಿ ಕಿಚ್ಚ ಸುದೀಪ್ ಅವರ ಪ್ಯಾನ್ ಇಂಡಿಯಾ ಸಿನಿಮಾ ಮ್ಯಾಕ್ಸ್ ರಿಲೀಸ್ ಪ್ಲಾನ್ ಮಾಡಿಕೊಂಡಿದೆ. ಅಂದರೆ, ಡಿ.20 ಕ್ಕೆ ಮ್ಯಾಕ್ಸ್ ರಿಲೀಸ್ ಮಾಡಲು ಚಿತ್ರತಂಡ ತಯಾರಿ ಮಾಡಿಕೊಂಡಿದೆ. ಇನ್ನು ಡಿ.27ಕ್ಕೆ ಥಿಯೇಟರ್‌ಗೆ ಬರೋಕೆ ಪ್ಲಾನ್ ಮಾಡಿದ್ದ ದರ್ಶನ್ ಅಭಿನಯದ ಡೆವಿಲ್ ಸಿನಿಮಾದ ಕಾರ್ಯ ತಾತ್ಕಾಲಿಕ ಸ್ಥಗಿತಗೊಂಡಿದೆ. ಮತ್ತೊಂದೆಡೆ, ಅದೇ ಡಿ.20ರಂದು ರಿಲೀಸ್ ಮಾಡುವುದಾಗಿ ಘೋಷಣೆ ಮಾಡಿದ್ದ ಧ್ರುವ ಸರ್ಜಾ ಅಭಿನಯದ ಕೆಡಿ (KD) ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಯದ ಕಾರಣ ಡಿಸೆಂಬರ್ ರಿಲೀಸ್ ಅನುಮಾನವಾಗಿದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 20ರಂದು ಮ್ಯಾಕ್ಸ್ ಸಿನಿಮಾ ರಿಲೀಸ್ ಮಾಡುವುದಕ್ಕೆ ಬಹುತೇಕ ಮುಹೂರ್ತ ಫಿಕ್ಸ್ ಮಾಡಲಾಗಿದೆ.

ಇನ್ನು ಕನ್ನಡ ಚಿತ್ರರಂಗಕ್ಕೆ ಅದೃಷ್ಟದ ತಿಂಗಳೆಂದೇ ಭಾವಿಸಲಾದ ಡಿಸೆಂಬರ್ ತಿಂಗಳಲ್ಲಿ ಘಟಾನುಘಟಿ ನಾಯಕರು ತಮ್ಮ ಸಿನಿಮಾಗಳನ್ನು ರಿಲೀಸ್ ಮಾಡುವುದಕ್ಕೆ ಹಾಗೂ ಥಿಯೇಟರ್‌ಗಳನ್ನು ಬುಕಿಂಗ್ ಮಾಡುವುದಕ್ಕೆ ಮುಂದಾಗುತ್ತಾರೆ. ಇದೇ ರೀತಿ 2024 ವರ್ಷಾರಂಭದಲ್ಲಿಯೇ ಡಿಸೆಂಬರ್ ತಿಂಗಳು ಸಿನಿಮಾ ರಿಲೀಸ್ ಮಾಡುವುದಕ್ಕೆ ಯೋಜನೆ ರೂಪಿಸಿದ್ದ ಡೆವಿಲ್ ಮತ್ತು ಕೆಡಿ ಸಿನಿಮಾಗಳು ಚಿತ್ರಮಂದಿರಗಳ ಕಾಯ್ದಿರಿಸುವಿಕೆ ರೇಸ್‌ನಿಂದ ಹಿಂದೆ ಸರಿದಿವೆ. ಈ ಹಿನ್ನೆಲೆಯಲ್ಲಿ ರೇಸ್‌ನಲ್ಲಿಯೇ ಇರದ ಮ್ಯಾಕ್ಸ್ ಸಿನಿಮಾ ಚಿತ್ರಮಂದಿರಗಳನ್ನು ತನ್ನತ್ತ ಸೆಳೆಯುತ್ತಿದೆ. ಇಬ್ಬರು ಸ್ಟಾರ್ ನಾಯಕರ ಬಿಗ್ ಸಿನಿಮಾಗಳು ಸಿನಿಮಾ ರಿಲೀಸ್‌ನಿಂದ ಹೊರಗುಳಿದ ಬೆನ್ನಲ್ಲೇ ಎಲ್ಲ ಸಿನಿಮಾ ಮಂದಿರಗಳಲ್ಲಿಯೂ ಮ್ಯಾಕ್ಸ್ ಭರ್ಜರಿ ಪ್ರದರ್ಶನ ಆಗಲಿದೆ ಎಂಬ ನಿರೀಕ್ಷೆ ಹೆಚ್ಚಾಗಿದೆ.

ಸುದೀಪ್​​ಗೆ ಕಾಡುತ್ತಿದೆ 'ಮ್ಯಾಕ್ಸ್​' ರಿಲೀಸ್​​​​​ ಟೆನ್ಷನ್: ಕಿಚ್ಚ ಫುಲ್ ಕನ್ಫ್ಯೂಷನ್ ಆಗಿದ್ದೇಕೆ?

ಸದ್ಯಕ್ಕೆ ಬಿಗ್ ಬಾಸ್ ಕನ್ನಡ ಸೀಸನ್ 11ರ ರಿಯಾಲಿಟಿ ಶೋನಲ್ಲಿ ಬ್ಯೂಸಿ ಆಗಿರುವ ನಟ ಕಿಚ್ಚ ಸುದೀಪ್ ಅವರು ಕಿರುತೆರೆಯ ಜೊತೆಗೆ ಹಿರಿತೆರೆಯಲ್ಲೂ ಮಿಂಚಲು ಮುಂದಾಗಿದ್ದಾರೆ. ಬಿಗ್ ಬಾಸ್ ಜೊತೆ ಜೊತೆಗೆ ಮ್ಯಾಕ್ಸ್ ಚಿತ್ರದ ಮೂಲಕವೂ ಅಭಿಮಾನಿಗಳನ್ನು ರಂಜಿಸುವುದಕ್ಕೆ ಕಿಚ್ಚ ಸುದೀಪ್ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

click me!