
ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಹು ನಿರೀಕ್ಷಿತ 'ಫ್ಯಾಂಟಮ್' ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ವಿಕ್ರಾಂತ್ ರೋಣ ಪಾತ್ರದಲ್ಲಿ ಸುದೀಪ್ ಹೇಗಿದ್ದಾರೆ, ನೀವೇ ನೋಡಿ...
ಫ್ಯಾಂಟಮ್ ಚಿತ್ರದ ಬಗ್ಗೆ ದಿನೆ ದಿನೇ ಕುತೂಹಲ ಹೆಚ್ಚಾಗುತ್ತಿದ್ದು, ನಿರ್ದೇಶಕ ಅನೂಪ್ ಬಂಡಾರಿ ಕಥೆಯ ನಾಯಕ ವಿಕ್ರಾಂತ್ ರೋಣ ಚಿತ್ರದಲ್ಲಿ ಹೇಗಿರುತ್ತಾನೆ ಎಂಬುವುದು ರಿವೀಲ್ ಮಾಡಿದ್ದಾರೆ. ಇಂದು ಬೆಳಗ್ಗೆ ರಿಲೀಸ್ ಆದ ಪೋಸ್ಟರ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಷೇ ಅಲ್ಲದೇ ಸುದೀಪ್ ಪಾತ್ರದ ಬಗ್ಗೆ ಮಾತನಾಡಿ, ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ ಅನೂಪ್.
'ಫ್ಯಾಂಟಮ್ ಚಿತ್ರದ ಮುಖ್ಯ ಪಾತ್ರಧಾರಿ ವಿಕ್ರಾಂತ್ ರೋಣ. ವಿಕ್ರಾಂತ್ ರೋಣ ಅನ್ನೊ ಹೆಸರಿನಲ್ಲಿ ಎಷ್ಟು ಪವರ್ ಇದ್ಯೋ, ಆ ಕ್ಯಾರೆಕ್ಟರ್ ಕೂಡ ಅಷ್ಟೆ ಪವರ್ ಫುಲ್. ಏನು ಮಾಡುತ್ತಾನೆ, ಯಾಕೆ ಮಾಡುತ್ತಾನೆ ಇದು ಯಾರಿಗೂ ಆರ್ಥವಾಗುವುದಿಲ್ಲ. ಆದರೆ ಅವನು ಏನೇ ಮಾಡಿದರೂ ಅದಕ್ಕೊಂದು ಕಾರಣ ಇರುತ್ತದೆ' ಎಂದು ಅನೂಪ್ ಮಾತನಾಡಿದ್ದಾರೆ.
ಅನ್‌ಲಾಕ್ ಪ್ರಕ್ರಿಯೆ ಶುರುವಾಗುತ್ತಿದ್ದಂತೆ ಕಿಚ್ಚ ಸುದೀಪ್ ಹೈದರಾಬಾದ್‌ನಲ್ಲಿ ಹಾಕಲಾಗಿದ್ದ ಅರಣ್ಯದ ಸೆಟ್‌ನಲ್ಲಿ ಚಿತ್ರೀಕರಣ ಪ್ರಾರಂಭಿಸಿದ್ದರು. ಅದರಲ್ಲೂಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ 'ಗುಮ್ಮ ಬಂತು ಗುಮ್ಮ' ಹಾಗೂ ರಾ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿವೆ.
"
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.