ಜೂನ್ 1ಕ್ಕೆ ಕಾದಿದೆ ಬಿಗ್ ಸರ್ಪ್ರೈಸ್: ಪ್ರಚಾರದ ನಡುವೆಯೇ ಭರ್ಜರಿ ಸುದ್ದಿ ನೀಡಿದ ಕಿಚ್ಚ ಸುದೀಪ್

Published : Apr 29, 2023, 01:24 PM IST
ಜೂನ್ 1ಕ್ಕೆ ಕಾದಿದೆ ಬಿಗ್ ಸರ್ಪ್ರೈಸ್: ಪ್ರಚಾರದ ನಡುವೆಯೇ ಭರ್ಜರಿ ಸುದ್ದಿ ನೀಡಿದ ಕಿಚ್ಚ ಸುದೀಪ್

ಸಾರಾಂಶ

ಜೂನ್ 1ಕ್ಕೆ ಕಿಚ್ಚನ ಅಭಿಮಾನಿಗಳಿಗೆ ಕಾದಿದೆ ಬಿಗ್ ಸರ್ಪ್ರೈಸ್. ಪ್ರಚಾರದ ನಡುವೆಯೇ ಸುದೀಪ್ ಅಭಿಮಾನಿಗಳಿಗೆ ಭರ್ಜರಿ ಸುದ್ದಿ ನೀಡಿದ್ದಾರೆ.  

ಅಭಿನಯಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ ಬಿಜೆಪಿ ಪರ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಬೆಳಗ್ಗೆಯಿಂದ ಸಂಜೆವರೆಗೂ ಕಿಚ್ಚ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈ ನಡುವೆ ಕಿಚ್ಚ ಅಭಿಮಾನಿಗಳಿಗೆ ಭರ್ಜರಿ ಸುದ್ದಿ ನೀಡಿದ್ದಾರೆ. ಈ ಹಿಂದೆಯೇ ಹೇಳಿದ್ದಂತೆ 3 ಸಿನಿಮಾಗಳಿಗೆ ಸಹಿ ಮಾಡಿದ್ದು ಚಿತ್ರದ ಕೆಲಸಗಳು ನಡೆಯುತ್ತಿವೆ ಎಂದು ಹೇಳಿದ್ದರು. ಮುಂದಿನ ಸಿನಿಮಾದ ಬಗ್ಗೆ ಇಂಟ್ರಸ್ಟಿಂಗ್ ಮಾಹಿತಿ ಬಹಿರಂಗ ಪಡಿಸಿದ್ದಾರೆ. ಕಿಚ್ಚನ ಮುಂದಿನ ಸಿನಿಮಾ ಯಾವುದು, ಯಾರ ಜೊತೆ ಸಿನಿಮಾ ಮಾಡುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಈ ಎಲ್ಲಾ ಕುತೂಹಲಕ್ಕೆ ತೆರೆ ಎಳೆಯುತ್ತಿದ್ದಾರೆ ಕಿಚ್ಚ ಸುದೀಪ್. 

ಕಿಚ್ಚ ಸುದೀಪ್ ಸದ್ಯ 46ನೇ ಅನೌನ್ಸ್ ಮಾಡಲು ಸಜ್ಜಾಗಿದ್ದಾರೆ. ಪ್ರಚಾರದ ನಡುವೆಯೂ ಸುದೀಪ್ ಸಿನಿಮಾ ಕೆಲಸದಲ್ಲೂ ತೊಡಗಿಕೊಂಡಿದ್ದಾರೆ.  ವಿಕ್ರಾಂತ್ ರೋಣ ಸಿನಿಮಾ ಬಳಿಕ ಸುದೀಪ್ ಯಾವುದೇ ಸಿನಿಮಾ ಅನೌನ್ಸ್ ಮಾಡಿಲ್ಲ. ಹಾಗಾಗಿ ಅಭಿಮಾನಿಗಳಲ್ಲಿ ಭಾರಿ ಕುತೂಹಲ ವಿದೆ. ಸದ್ಯ ಸುದೀಪ್ ಒಪ್ಪಿಕೊಂಡಿರುವ 3 ಸಿನಿಮಾಗಳಲ್ಲಿ ಒಂದು ಸಿನಿಮಾದ ಪ್ರೋಮೋ ಶೂಟ್ ಮೇ 22ರಂದು ನಡೆಯಲಿದೆ ಎಂದು ಹೇಳಿದ್ದಾರೆ. ಜೂನ್ 1ರಂದು ಹೊಸ ಸಿನಿಮಾದ ಲಾಂಚ್ ಆಗಲಿದೆ ಎಂದು ಸುದೀಪ್ ಅಭಿಮಾನಿಗಳಿಗೆ ಸಖತ್ ಥ್ರಿಲಿಂಗ್ ಸುದ್ದಿ ನೀಡಿದ್ದಾರೆ. 

ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಭರ್ಜರಿ ಸುದ್ದಿ ನೀಡಿದ್ದಾರೆ. 'ನಾನು ಪ್ರಾರಂಭಿಸುತ್ತಿರುವ ಮೂರು ಚಿತ್ರಗಳಲ್ಲಿ ಒಂದು ಸಿನಿಮಾದ ಪ್ರೋಮೋ ಶೂಟ್ ಮೇ 22 ರಂದು ನಡೆಯಲಿದೆ ಎಂದು ಹೇಳಲು ಸಂತೋಷವಾಗುತ್ತಿದೆ. ಜೂನ್ 1 ರಂದು ಲಾಂಚ್ ಆಗುತ್ತಿದೆ' ಎಂದು ಹೇಳಿದ್ದಾರೆ. 'ಒಂದು ಪ್ರಕಾರದ ಸ್ಕ್ರಿಪ್ಟ್ ನನ್ನನ್ನು ರೋಮಾಂಚನಗೊಳಿಸಿತು ಮತ್ತು ನಾನು ಎದುರು ನೋಡುತ್ತಿರುವ ಚಿತ್ರ' ಎಂದು ಕುತೂಹಲ ಹೆಚ್ಚಿಸಿದ್ದಾರೆ. 

ವೈರಲ್ ಆಯ್ತು ಜೆ.ಪಿ ನಡ್ಡಾ ಜತೆ ಕಿಚ್ಚ ಸುದೀಪ್ ಹೆಲಿಕಾಫ್ಟರ್ ಸೆಲ್ಫಿ!

ಸುದೀಪ್ ಅವರ ಸಿನಿಮಾಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಇದು ಭರ್ಜರಿ ಸುದ್ದಿಯಾಗಿದೆ. ಒಂದು ವರ್ಷಕ್ಕೂ ಅಧಿಕ ಸಮಯದಿಂದ ಅಭಿಮಾನಿಗಳು ಸಮಯಕ್ಕಾಗಿ ಕಾಯುತ್ತಿದ್ದರು. ಕೊನೆಗೂ ಆ ದಿನ ಸಮೀಪಿಸುತ್ತಿದೆ. ಸುದೀಪ್ ಮುಂದಿನ ಸಿನಿಮಾಗೆ ಯಾರು ನಿರ್ದೇಶನ ಮಾಡುತ್ತಾರೆ ಎನ್ನುವ ಚರ್ಚೆ ಪ್ರಾರಂಭವಾಗಿದೆ. ಸದ್ಯ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ ಸುದೀಪ್ ತಮಿಳು ನಿರ್ದೇಶಕರ ಜೊತೆ ಮುಂದಿನ ಸಿನಿಮಾ ಮಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ ಯಾರು ಎನ್ನುವ ಕುತೂಹಲಕ್ಕೆ ಜೂನ್ 1ರಂದು ತೆರೆಬೀಳಲಿದೆ. ಅಲ್ಲಿವರೆಗೂ ಕಾಯಲೇ ಬೇಕು.

ಚಿತ್ರದುರ್ಗ, ದಾವಣಗೆರೆಯಲ್ಲಿ ಕಿಚ್ಚನ ಹವಾ: ಸುದೀಪ್‌ ನೋಡಲು ಜನಸಾಗರ

ಮೂರು ಸಿನಿಮಾ ಒಪ್ಪಿಕೊಂಡ ಬಗ್ಗೆ ಸುದೀಪ್ ಪೋಸ್ಟ್ 

'ಕಿಚ್ಚ 46 (ಎಲ್ಲರೂ ಕರೆಯುತ್ತಿರುವ ಹೆಸರು) ಸಿನಿಮಾದ ಬಗ್ಗೆ ಯಾರು ಟ್ವೀಟ್, ಮೀಮ್‌ಗಳನ್ನು ಮಾಡುತ್ತಿದ್ದೀರಿ. ಇದು ನನಗೆ ತುಂಬಾ ವಿಶೇಷವಾಗಿದೆ. ತುಂಬಾ ಧನ್ಯವಾದಗಳು. ನಾನು ಈಗ ಈ ಬಗ್ಗೆ ಸ್ಪಷ್ಟನೆ ನೀಡಲು ಬಯಸುತ್ತೇನೆ. ನಾನು ಬ್ರೇಕ್ ತೆಗೆದುಕೊಂಡೆ. ತುಂಬ ಶ್ರಮವಹಿಸಿ, ಬಹಳ ಸಮಯ ತೆಗೆದುಕೊಂಡು ವಿಕ್ರಾಂತ್​ ರೋಣ ಶೂಟಿಂಗ್​ ಮಾಡಿದ್ದರಿಂದ ಹಾಗೂ ಸತತವಾಗಿ ಬಿಗ್​ಬಾಸ್​ ಒಟಿಟಿ ಮತ್ತು ಟಿವಿ ಸೀಸನ್​ನಲ್ಲಿ ಪಾಲ್ಗೊಂಡಿದ್ದರಿಂದ ಈ ಬ್ರೇಕ್​ನ ಅವಶ್ಯಕತೆ ಇತ್ತು. ನನ್ನನ್ನು ಹೆಚ್ಚು ಖುಷಿಯಾಗಿಸುವ ರೀತಿಯಲ್ಲಿ ಈ ದಿನಗಳನ್ನು ಕಳೆಯಬೇಕು ಎನಿಸಿತು. ಕ್ರಿಕೆಟ್​ನಿಂದ ನನಗೆ ರಿಲ್ಯಾಕ್ಸ್​ ಸಿಗುತ್ತದೆ. ಕೆಸಿಸಿಯಲ್ಲಿ ತೊಡಗಿಕೊಂಡು ಸಮಯ ಕಳೆದಿದ್ದು ತುಂಬ ಖುಷಿ ನೀಡಿತು’ ಎಂದು ಸುದೀಪ್​ ಬರೆದುಕೊಂಡಿದ್ದಾರೆ.
    
‘ಈ ಬ್ರೇಕ್​ನಲ್ಲಿ ಹೊಸ ಸ್ಕ್ರಿಪ್ಟ್​ ಬಗ್ಗೆ ಚರ್ಚೆ ಮತ್ತು ಮೀಟಿಂಗ್​ಗಳು ಪ್ರತಿದಿನದ ಆಗುತ್ತಿತ್ತು. ಮೂರು ಸ್ಕ್ರಿಪ್ಟ್​ಗಳನ್ನು ಫೈನಲ್​ ಮಾಡಿದ್ದೇನೆ. ಅಂದರೆ, 3 ಸಿನಿಮಾಗಳನ್ನು ಆಯ್ಕೆ ಮಾಡಿದ್ದೇನೆ. ಇವುಗಳಿಗೆ ದೊಡ್ಡ ಮಟ್ಟದ ತಯಾರಿ ಬೇಕು. ಮೂರೂ ಚಿತ್ರಗಳಿಗೆ ಹೋಮ್​ವರ್ಕ್​ ನಡೆಯುತ್ತಿದೆ. ಆ ತಂಡದವರು ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಅನೌನ್ಸ್​ ಮಾಡುತ್ತೇನೆ’ ಎಂದು ಸುದೀಪ್​ ಅವರು ದೀರ್ಘವಾದ ಪತ್ರ ಬರೆದಿದ್ದಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!