ಭರ್ಜರಿ ಪ್ರದರ್ಶನ ಕಾಣುತ್ತಿರುವ ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಭರ್ಜರಿ ಪ್ರದರ್ಶನದ ಮಧ್ಯೆ ಚಿತ್ರಕ್ಕೆ ಪೈರೇಸಿ ಕಾಟ ಶುರುವಾಗಿದೆ. ಇದರಿಂದ ಸಿನಿಮಾ ಆಕ್ರೋಶ ವ್ಯಕ್ತಪಡಿಸಿದೆ.
ಕಿಚ್ಚ ಸುದೀಪ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ 'ವಿಕ್ರಾಂತ್ ರೋಣ' ವಿಶ್ವದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ, ಪೈರೇಸಿ ಸಂಕಷ್ಟ ಎದುರಾಗಿದೆ.
ಹೌದು....ವಾರ್ಡನ್ ಒಬ್ಬರು ಮುಳಬಾಗಿಲು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ನಲ್ಲಿ ಸಿನಿಮಾ ತೋರಿಸಿದ್ದಾರೆ.
ಮುಳಬಾಗಿಲಿನ ಕುತಂಡ್ಲಹಳ್ಳಿ ಮೂರಾರ್ಜಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪೈರಸಿಯಲ್ಲಿ ಸಿನಿಮಾ ತೋರಿಸಿದ್ದಾರೆ ಎಂದು ತಿಳಿದುಬಂದಿದೆ.
'ವಿಕ್ರಾಂತ್ ರೋಣ' ಪರಾಕ್ರಮಕ್ಕೆ ಜೈ ಹೋ ಎಂದ ಚಿತ್ರರಂಗದ ಬಿಗ್ ಸ್ಟಾರ್ಸ್!
ಪೈರಸಿಯಲ್ಲಿ ಸಿನಿಮಾ ತೋರಿಸಿದ್ದಕ್ಕೆ ನಿರ್ಮಾಪಕ ಜಾಕ್ ಮಂಜು ಆಕ್ರೋಶ ಹೊರಕಾಕಿದ್ದಾರೆ. ಅಲ್ಲದೇ ಕಾನೂನು ಹೋರಾಟಕ್ಕೆ ಮುಂದಾಗ್ತಿವಿ ಎಂದು ಹೇಳಿದ್ದಾರೆ. ಮತ್ತೊಂದೆಡೆ ಇಂತ ಕೆಟ್ಟ ಕೆಲಸಕ್ಕೆ ಕೈ ಹಾಕಿದವರು ಕ್ಷಮೆ ಕೇಳಲು ಕಿಚ್ಚನ ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ. ವಿಶೇಷವಾಗಿ ಮಕ್ಕಳಿಗೆ ಇಷ್ಟ ಆಗೋ ಸಿನಿಮಾ ಅನ್ನೋ ಕಾರಣಕ್ಕೆ ಸಿನಿಮಾ ಪ್ರಚಾರ ಪಡೆದುಕೊಳ್ತಿದೆ. ಇದರಿಂದ ವಾರ್ಡನ್ ವಿದ್ಯಾರ್ಥಿಗಳಿಗೆ ತೋರಿಸಿದ್ದಾರೆ ಎನ್ನಲಾಗಿದೆ.
ವಿಶ್ವದಾದ್ಯಂತ 3,200ಕ್ಕೂ ಅಧಿಕ ತೆರೆಗಳಲ್ಲಿ ತೆರೆಕಂಡಿದ್ದ ವಿಕ್ರಾಂತ್ ರೋಣ ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿಸುತ್ತಿದೆ.
ವಿಕ್ರಾಂತ್ ರೋಣ’ ಸಿನಿಮಾದ ಕಲೆಕ್ಷನ್ ಬಗ್ಗೆ ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿವೆ.
ವಿಕ್ರಾಂತ್ ರೋಣನ ಅಬ್ಬರಕ್ಕೆ ದಾಖಲೆಗಳು ಉಡೀಸ್; ಪ್ರೇಕ್ಷಕರಿಂದ ಫುಲ್ ಮಾರ್ಕ್ಸ್!
ಈ ಬಗ್ಗೆ ಜಾಕ್ ಮಂಜು ಖಾಸಗಿ ಸುದ್ದಿ ವಾಹಿನಿಯೊಂದರ ಸಂದರ್ಶನದಲ್ಲಿ ಅಸಲಿ ಲೆಕ್ಕ ಕೊಟ್ಟಿದ್ದು, ಮೊದಲ ದಿನ 32-35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ರೆ, ಎರಡನೇ ದಿನ 20-25 ಕೋಟಿ ರೂಪಾಯಿ ಗಳಿಕೆ ಮಾಡಿಕೊಂಡಿದೆ. ಇನ್ನು ವೀಕೆಂಡ್ ಮುಗಿಯುವಷ್ಟರಲ್ಲಿ ಇನ್ನಷ್ಟು ಕಲೆಕ್ಷನ್ ಆಗುವ ನಿರೀಕ್ಷೆ ಇದೆ.
ಭಾರತದ ಜೊತೆ 50 ದೇಶದಲ್ಲಿ ಸುದೀಪ್ ವಿಕ್ರಾಂತ್ ರೋಣ ಸಿನಿಮಾ ಪ್ರದರ್ಶನ ಆಗುತ್ತಿದೆ. ಈ ಸಿನಿಮಾದಲ್ಲಿ ಕಿಚ್ಚನನ್ನ ನೋಡಿದ ಭಾರತೀಯ ಚಿತ್ರರಂಗದ ಸೆಲೆಬ್ರೆಟಿಗಳು ಹೆಬ್ಬುಲಿಗೆ ಶುಭಾಷಯಗಳ ಹೂ ಮಳೆ ಸುರಿದ್ದಾರೆ.
ಭಾರತೀಯ ಚಿತ್ರರಂಗದ ಟಾಪ್ ಡೈರೆಕ್ಟರ್ ಎಸ್,ಎಸ್ ರಾಜಮೌಳಿ ಹಾಗು ಕರ್ನಾಟಕ ಪ್ರೈಡ್ ಪ್ರಶಾಂತ್ ನೀಲ್ ಸುದೀಪ್ರ ವಿಕ್ರಾಂತ್ ರೋಣ ಸಿನಿಮಾವನ್ನ ಕೊಂಡಾಡಿದ್ದಾರೆ. ಟ್ವೀಟ್ ಮಾಡಿರೋ ರಾಜಮೌಳಿ, ಪ್ರಯೋಗಗಳನ್ನು ಮಾಡುವಲ್ಲಿ ಸವಾಲುಗಳನ್ನು ಸ್ವೀಕರಿಸುವಲ್ಲಿ ಸುದೀಪ್ ಮೊದಲಿಗರು. ವಿಶ್ಯುವಲ್ಸ್ ಅದ್ಭುತವಾಗಿದೆ ಸುದೀಪ್ ತಂಡಕ್ಕೆ ನನ್ನ ಶುಭಾಶಯ ಅಂತ ಬರೆದುಕೊಂಡ್ರೆ ಪ್ರಶಾಂತ್ ನೀಲ್ ದೃಶ್ಯ ವೈಭವದಂತಿರುವ ವಿಕ್ರಾಂತ್ ರೋಣ ಚಿತ್ರದಿಂದ ಕಿಚ್ಚ ಸುದೀಪ್ ಸರ್ ಹಾಗೂ ನಿರ್ದೇಶಕ ಅನೂಪ್ ಭಂಡಾರಿ ಅವರಿಗೆ ಎಲ್ಲ ಯಶಸ್ಸು ಸಿಗಲಿ ಎಂದು ಹರಿಸಿದ್ದಾರೆ.
ಅಷ್ಟೆ ಅಲ್ಲ ಕಾಲಿವುಡ್ ಸ್ಟಾರ್ ಆರ್ಯ, ಟಾಲಿವುಡ್ ಸ್ಟಾರ್ ಕಾರ್ತಿ, ಬಾಲಿವುಡ್ ನಟಿ ಜೆನಿಲಿಯಾ, ಕನ್ನಡ ನಟಿ ರಮ್ಯಾ, ಡಾಲಿ ಧನಂಜಯ್. ರಕ್ಷಿತ್ ಶೆಟ್ಟಿ, ಗಣೇಶ್, ರಮೇಶ್ ಅರವಿಂದ್ ಸೇರಿದಂತೆ ಹಲವು ಸ್ಟಾರ್ ಕಲಾವಿಧರು ಕಿಚ್ಚನ ಸಿನಿಮಾಗೆ ಶುಭ ಹಾರೈಸಿದ್ದಾರೆ.