ದುಬೈ ವಿಮಾನ ನಿಲ್ದಾಣದಲ್ಲೇ ಸುದೀಪ್‌ಗೆ ಸಿಕ್ತು ಅದ್ಧೂರಿ ಸ್ವಾಗತ, ದುಬಾರಿ ಗಿಫ್ಟ್!

By Suvarna News  |  First Published Jan 28, 2021, 10:51 AM IST

ವಿಕ್ರಾಂತ್ ರೋಣ ಟೈಟಲ್‌ ಲಾಂಚ್‌ ಮಾಡಲು ದುಬೈಗೆ ತೆರಳಿದ ಕಿಚ್ಚ ಸುದೀಪ್ ಮತ್ತು ಟೀಂ, ಹೇಗಿತ್ತು ಗೊತ್ತಾ ಸ್ವಾಗತ? 


ಜನವರಿ 31ರಂದು ದುಬೈನ ಬುರ್ಜ್ ಖಲೀಫಾದಲ್ಲಿ ವಿಕ್ರಾಂತ್ ರೋಣ ಟೀಸರ್ ರಿಲೀಸ್‌ ಮಾಡಲು ಇಡೀ ಚಿತ್ರ ತಂಡ ಜನವರಿ 27ರಂದು ದುಬೈಗೆ ಹಾರಿದೆ. ವಿಮಾನ ನಿಲ್ದಾಣದಲ್ಲಿ ಇಡೀ ತಂಡಕ್ಕೆ ಅದ್ಧೂರಿ ಸ್ವಾಗತ ನೀಡಲಾಗಿದೆ....

ಫ್ಯಾಂಟಮ್‌ ಬೇಡ, ವಿಕ್ರಾಂತ್‌ ರೋಣ ಇರಲಿ ಎಂದಿದ್ದೇ ನಾನು: ಸುದೀಪ್

Tap to resize

Latest Videos

ದುಬೈನ ಸಂಪ್ರದಾಯದಂತೆ ಕನ್ನಡ ಸಿನಿ ಅತಿಥಿಗಳನ್ನು ಬರ ಮಾಡಿಕೊಂಡಿದ್ದಾರೆ. ಸುದೀಪ್‌ಗೆ ಹೂವಿನ ಹಾರ, ಹೂಗುಚ್ಛ ಹಾಗೂ  ಉಡುಗೊರೆ ನೀಡಿದ್ದಾರೆ.  ಸುದೀಪ್‌ ಜೊತೆ ಪತ್ನಿ ಪ್ರಿಯಾ ಕೂಡ ದುಬೈಗೆ ತೆರಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೋಟೋದಲ್ಲಿ ಸುದೀಪ್ ಗಿಫ್ಟ್ ಹಿಡಿದುಕೊಂಡಿದ್ದಾರೆ, ಅದರೊಳಗೆ ಏನಿದೆ ಎಂಬುದು ಅಭಿಮಾನಿಗಳ ಕ್ಯೂರಿಯಾಸಿಟಿ. 

ಸುದೀಪ್ ಹಾಗೂ ಅನೂಪ್ ಭಂಡಾರಿ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ 'ವಿಕ್ರಾಂತ್ ರೋಣ' ಎಂದು ಹೆಸರು ಬದಲು ಮಾಡುವುದಕ್ಕೆ ಕಾರಣವೇನು ಎಂದು ಸುದೀಪ್‌ ರಿವೀಲ್ ಮಾಡಿದ್ದಾರೆ.  ಶೂಟಿಂಗ್‌ ಹೊರಡುವ ಮುನ್ನ 'ವಿಕ್ರಾಂತ್ ರೋಣ ರೀಪೋರ್ಟಿಂಗ್' ಎಂದು ಸುದೀಪ್ ಬರೆದು ಫೋಟೋವೊಂದನ್ನು ಪೋಸ್ಟ್ ಮಾಡಿದ್ದರು, ಫ್ಯಾಂಟಮ್‌ ಹೆಸರಿಗಿಂತ ವಿಕ್ರಾಂತ್ ರೋಣ ಹೆಸರು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಕಾರಣ ನಿರ್ಮಾಪಕ  ಜಾಕ್ ಮಂಜು ಅವರಿಗೆ ಇದೇ ಟೈಟಲ್‌ ನೋಂದಾಯಿಸಿಕೊಳ್ಳುವಂತೆ ಹೇಳಿದ್ದರಂತೆ.

 

31st Jan it issss. https://t.co/LYHsiuhEYG

— Kichcha Sudeepa (@KicchaSudeep)
click me!