ಹೊಸ ಕ್ಲಾಸಿ ಲುಕ್‌ನಲ್ಲಿ ಯಶ್: KGF‌ ಸ್ಟಾರ್‌ನ ನ್ಯೂ ಹೇರ್‌ಸ್ಟೈಲ್ ಇದು

Suvarna News   | Asianet News
Published : Apr 13, 2021, 05:48 PM IST
ಹೊಸ ಕ್ಲಾಸಿ ಲುಕ್‌ನಲ್ಲಿ ಯಶ್: KGF‌ ಸ್ಟಾರ್‌ನ ನ್ಯೂ ಹೇರ್‌ಸ್ಟೈಲ್ ಇದು

ಸಾರಾಂಶ

ಹೊಸ ಲುಕ್‌ನಲ್ಲಿ ರಾಕಿ ಭಾಯ್ | ನ್ಯೂ ಹೇರ್‌ಸ್ಟೈಲ್‌ನಲ್ಲಿ ಮಿಂಚಿದ ಕೆಜಿಎಫ್ ನಟ

ಕೆಜಿಎಫ್ 1 ರಲ್ಲಿ ಕಾಣಿಸಿಕೊಂಡಾಗಿನಿಂದಲೂ ಯಶ್ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ನಟ ಸಿನಿಮಾದಲ್ಲಿ ತನ್ನ ಸ್ಟೈಲಿಶ್ ಲುಕ್ ಮತ್ತು ನಟನೆಯಿಂದ ಸಿನಿ ವೀಕ್ಷಕರನ್ನು ಬೆರಗುಗೊಳಿಸಿದ್ದರು.

ಕೆಜಿಎಫ್1 ರಲ್ಲಿ ಅವರನ್ನು ನೋಡುವುದು ಸಿನಿ ಪ್ರಿಯರಿಗೆ ಹಬ್ಬವಾಗಿತ್ತು. ಎರಡನೇ ಭಾಗ ಫ್ರ್ಯಾಂಚೈಸ್‌ಗಾಗಿ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿರುವಾಗ, ಯಶ್ ಮತ್ತೊಮ್ಮೆ ತನ್ನ ಹೊಸ ಲುಕ್‌ನಿಂದ ಸುದ್ದಿಯಾಗಿದ್ದಾರೆ.

ಹೊಟ್ಟೆಹೊರೆಯೋರಿಗ್ಯಾಕೆ ಅನ್ಯಾಯ ಮಾಡ್ತೀರಿ : ಯಶ್‌

ಫೋಟೋದಲ್ಲಿ, ಸ್ಯಾಂಡಲ್ ವುಡ್ ಸೂಪರ್‌ಸ್ಟಾರ್‌ಗೆ ಕ್ಲಾಸಿ ಮೇಕ್ ಓವರ್ ನೀಡಿದ ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಆಲಿಮ್ ಹಕೀಮ್ ಅವರೊಂದಿಗೆ ಯಶ್ ಪೋಸ್ ಕೊಡುತ್ತಿರುವುದು ಕಂಡುಬಂದಿದೆ. ಕೆಜಿಎಫ್ ಸ್ಟಾರ್ ಕಪ್ಪು ಟೀ ಶರ್ಟ್ ಧರಿಸಿ ಕಾಣಿಸಿಕೊಂಡಿದ್ದಾರೆ.

ಕುತೂಹಲಕಾರಿಯಾಗಿ, ಲಕ್ಷಾಂತರ ಹೃದಯಗಳನ್ನು ಒಂದೇ ನೋಟದಲ್ಲಿ ಸೋಲಿಸುವವಂತೆ ಮಾಡಿದ ಯಶ್ ಅವರ ಹೊಸ ನೋಟ ವೈರಲ್ ಆಗಿದೆ. ಆಲಿಮ್ ಅವರು ಯಶ್ ಬಗ್ಗೆ "ಯಶ್ ಅವರನ್ನು ವರ್ಷಗಳಿಂದ ತಿಳಿದಿರುವಿರಿ ಮತ್ತು ಅವನು ಇನ್ನೂ ಅದೇ ವಿನಮ್ರ ಮತ್ತು ಸಿಂಪಲ್ ವ್ಯಕ್ತಿ... ಯಾವಾಗಲೂ ಇತರರಿಗೆ ಹೇಗೆ ನೆರವು ನೀಡಬೇಕು ಮತ್ತು ಎಲ್ಲರಿಗೂ  ಅತ್ಯುತ್ತಮವಾದದನ್ನು ನೀಡಬೇಕೆಂದು ಯೋಚಿಸುತ್ತಾರೆ.. ಈ ರೀತಿಯ ನಿಸ್ವಾರ್ಥ ಮನೋಭಾವವನ್ನು ನೋಡುವುದು ಬಹಳ ಅಪರೂಪ. ಅವರು ಅದ್ಭುತ ವ್ಯಕ್ತಿ. ಅವರ ಜೊತೆಗಿದ್ದರೆ ಹೆಚ್ಚು ಕಲಿಯಬಹುದು. ಇದು ಅವರ ಪಾಸಿಟಿವ್ ಶಕ್ತಿಯಾಗಿದ್ದು, ಅವರಿಗೆ ಯಶಸ್ಸನ್ನು ನೀಡಿದೆ. ಅವರು ನಿಜವಾಗಿಯೂ ಸೂಪರ್ ಸ್ಟಾರ್ ಎಂದು ಬರೆದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

‘ನೀನಾದೆ ನಾ’ ಹಾಡು 100 Million Views ದಾಟಿದ ಖುಷಿಯಲ್ಲಿ ‘ಯುವರತ್ನ’ ನಾಯಕಿ ಸಯ್ಯೇಷಾ ಸೈಗಲ್
ಬಿಗ್ ಬಜೆಟ್ '45' ಅದ್ದೂರಿ ಇವೆಂಟ್, ಕರ್ನಾಟಕದ ಏಳು ಜಿಲ್ಲೆಗಳ ಚಿತ್ರಮಂದಿರದಲ್ಲಿ ಇವೆಂಟ್ ನೇರ ಪ್ರಸಾರ!