
ಯಶ್ ಇದೀಗ ಹಾಲಿವುಡ್ ಅಂಗಳದಲ್ಲಿ ನಿಂತು ‘ರಾಮಾಯಣ’ ಮತ್ತು ‘ಟಾಕ್ಸಿಕ್’ ಸಿನಿಮಾಗಳ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಅಮೆರಿಕಾದ ಲಾಸ್ ವೇಗಾಸ್‌ನ ಬೀದಿಗಳಲ್ಲಿ ಅವರು ನಟಿಸಿರುವ ರಾವಣನ ಕಟೌಟ್ ರಾರಾಜಿಸುತ್ತಿದೆ.
ಜೇಮ್ಸ್ ಕ್ಯಾಮರಾನ್‌ನಂಥಾ ಜಗದ್ವಿಖ್ಯಾತ ನಿರ್ದೇಶಕರು, ಲಕೀತ್ ಸ್ಟ್ಯಾನ್‌ಫೀಲ್ಡ್, ಆ್ಯಡಂ ಸ್ಕಾಟ್, ಟಾಮ್ ಕ್ರೂಸ್‌ರಂಥಾ ಸ್ಟಾರ್‌ಗಳ ಜೊತೆಗೆ ನಿಂತ, ಹಾಲಿವುಡ್ ಅಂಗಳದಲ್ಲಿ ಭಾರತವನ್ನು ಪ್ರತಿನಿಧಿಸಿರುವ ಏಕೈಕ ನಟ ಎನಿಸಿಕೊಂಡಿದ್ದಾರೆ. ಅವರು ಇಂದು ಹಾಲಿವುಡ್ ಲೆವೆಲ್‌ಗೆ ಬೆಳೆಯಲು ಮೆಟ್ಟಿಲಾದದ್ದೇ ‘ಕೆಜಿಎಫ್’ ಸಿನಿಮಾ. ಈ ಸಿನಿಮಾದ ಎರಡನೇ ಭಾಗ ಬಂದು ಇದೀಗ ನಾಲ್ಕು ವರ್ಷಗಳಾಗಿವೆ.
ಈ ಸಿನಿಮಾದಲ್ಲಿ ಯಶ್ ಅವರ ಹೇರ್‌ಸ್ಟೈಲ್, ಗಡ್ಡದ ವಿನ್ಯಾಸ ಎಷ್ಟು ಫೇಮಸ್ ಆಯ್ತು ಅಂದರೆ ಸದಾ ಗಡ್ಡ, ಮೀಸೆ ಬೋಳಿಸಿಕೊಂಡಿರುತ್ತಿದ್ದ ಬಾಲಿವುಡ್ ಹೀರೋಗಳೆಲ್ಲ ಕುರುಚಲು ಗಡ್ಡ, ದಪ್ಪ ಮೀಸೆಯ ಸ್ಟೈಲಿಗೆ ಶರಣಾದರು. ಇಂದಿಗೂ ಆ ಸ್ಟೈಲ್ ಜೀವಂತವಿದೆ. ಆಮೇಲೆ ಬಂದ ಅನೇಕ ಭಾರತೀಯ ಸಿನಿಮಾಗಳು ಕೆಜಿಎಫ್‌ನಿಂದ ಸ್ಫೂರ್ತಿ ಪಡೆದವು.
1. ಲಾರ್ಜರ್ ದ್ಯಾನ್ ಲೈಫ್ ಕಾನ್ಸೆಪ್ಟ್
2. ಹಸಿವು, ಪವರ್ ಮತ್ತು ಕಂಟ್ರೋಲ್ ಎಂಬ ಲೇಯರ್‌ನಡಿ ಹೊಸ ಸ್ಟೋರಿ ಟೆಲ್ಲಿಂಗ್
3. ಮಾಸ್ ಹೀರೋನ ಹೊಸ ಮಾದರಿ.
4. ಪವರ್‌ಫುಲ್ ಸ್ಟೈಲ್ ಐಕಾನ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.