
ಸ್ಯಾಂಡಲ್‌ವುಡ್ ರಾಕಿಂಗ್ ಕಪಲ್ ಮನೆಗೆ ಕೆಲ ದಿನಗಳ ಹಿಂದೆ ಹೊಸ ಅತಿಥಿ ಬಂದಿದ್ದಾನೆ. ರಾಧಿಕಾ ಪಂಡಿತ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಪುಟಾಣಿ ಐರಾ ಅಕ್ಕ ಆಗಿದ್ದಾಳೆ.
ಯಶ್- ರಾಧಿಕಾ ಮಗನ ಫೋಟೋವನ್ನು ಎಲ್ಲಿಯೂ ರಿವೀಲ್ ಮಾಡಿರಲಿಲ್ಲ. ಮಾಳವಿಕಾ ಅವಿನಾಶ್ ಐರಾ ಜೊತೆ ತೆಗೆಸಿಕೊಂಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದರು. ಅದರಲ್ಲಿ ಮಗನ ಫೋಟೋವೂ ರಿವೀಲಾಗಿದೆ. ಅಕ್ಕ-ತಮ್ಮನನ್ನು ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ರಾಧಿಕಾ -ಯಶ್ ಮಕ್ಕಳ ಫೋಟೋವನ್ನು ರಿವೀಲ್ ಮಾಡುವುದರಲ್ಲಿ ಬಹಳ ಚ್ಯೂಸಿ. ಮಗಳು ಐರಾ ಫೋಟೋವನ್ನೂ ಬಹಳ ದಿನಗಳ ಬಳಿಕ ರಿವೀಲ್ ಮಾಡಿದ್ದರು. ಮಗನ ಫೋಟೋವನ್ನು ಅದೇ ರೀತಿ ರಿವೀಲ್ ಮಾಡಲಿದ್ದಾರೆ. ಅಷ್ಟೊರೊಳಗೆ ಆಕಸ್ಮಿಕವಾಗಿ ಫೋಟೋ ಹೊರ ಬಿದ್ದಿದೆ.
ಯಶ್ ಸದ್ಯ ಕೆಜಿಎಫ್ 2 ನಲ್ಲಿ ಬ್ಯುಸಿಯಾಗಿದ್ದಾರೆ. ಬಹುನಿರೀಕ್ಷಿತ ಕೆಜಿಎಫ್ 2 ಪೋಸ್ಟರ್ ಕೂಡಾ ರಿಲೀಸಾಗಿದೆ. ಯಶ್ ಲುಕ್‌ಗೆ ಅಭಿಮಾನಿಗಳ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ.
ಡಿಸೆಂಬರ್ 25ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.