
ಕೀರ್ತಿ ಸುರೇಶ್ ತನ್ನ ಪ್ರೀತಿಯ ಬಗ್ಗೆ ಪೋಷಕರಿಗೆ ಹೇಳುವ ಮೊದಲೇ ಒಬ್ಬ ತೆಲುಗು ನಟನ ಬಳಿ ಹೇಳಿಕೊಂಡಿದ್ದಾರೆ!
ಕೀರ್ತಿ ಸುರೇಶ್ ಲವ್ ಸ್ಟೋರಿ : ಕೀರ್ತಿ ಸುರೇಶ್ (Keerthy Suresh) ಕಳೆದ ವರ್ಷ ಪ್ರಿಯಕರ ಆಂಟನಿ ತಟ್ಟಿಲ್ ಅವರನ್ನು ಮದುವೆಯಾದರು. 15 ವರ್ಷಗಳ ಪ್ರೀತಿಯನ್ನು ರಹಸ್ಯವಾಗಿಟ್ಟಿದ್ದರು. ಇತ್ತೀಚೆಗೆ ಜಗಪತಿ ಬಾಬು (Jagapathi Babu) ಅವರ 'ಜಯಮ್ಮು ನಿಶ್ಚಯಮ್ಮುರಾ' ಕಾರ್ಯಕ್ರಮದಲ್ಲಿ ತಮ್ಮ ಪ್ರೀತಿಯ ರಹಸ್ಯಗಳನ್ನು ಹಂಚಿಕೊಂಡಿದ್ದಾರೆ.
ಕೀರ್ತಿಯ ಪೋಷಕರಾದ ಮೇನಕಾ-ಸುರೇಶ್ ಕುಮಾರ್ ಕೂಡ ಪ್ರೀತಿಸಿ ಮದುವೆಯಾದವರು. 'ನಿಮ್ಮ ಮನೆಯಲ್ಲಿ ಎಲ್ಲರೂ ವರ್ಷಗಟ್ಟಲೆ ಪ್ರೀತಿಸುತ್ತೀರಾ' ಎಂದು ಜಗಪತಿ ಬಾಬು ತಮಾಷೆ ಮಾಡಿದರು. ಅಮೆರಿಕಕ್ಕೆ ಹೋಗಲು ಇಷ್ಟವಿಲ್ಲದ ಕಾರಣ, ಟೋಫೆಲ್ ಪರೀಕ್ಷೆಯಲ್ಲಿ ಬೇಕಂತಲೇ ಫೇಲ್ ಆಗಿದ್ದಾಗಿ ಕೀರ್ತಿ ಹೇಳಿದರು.
ಶಾಲಾ ದಿನಗಳಿಂದಲೇ ಕೀರ್ತಿ ಸುರೇಶ್ ಮತ್ತು ಆಂಟನಿ ತಟ್ಟಿಲ್ ನಡುವೆ ಪ್ರೀತಿ ಚಿಗುರಿತ್ತು. ಮದುವೆಗೆ ಯಾಕೆ ಇಷ್ಟು ವರ್ಷ ಕಾದಿರಿ ಎಂದು ಜಗಪತಿ ಬಾಬು ಕೇಳಿದರು. 'ಪ್ರೀತಿಸುವಾಗ ಕಾಲೇಜು ಕೂಡ ಮುಗಿದಿರಲಿಲ್ಲ. ಕೆರಿಯರ್ ಬಗ್ಗೆ ಸ್ಪಷ್ಟತೆ ಇರಲಿಲ್ಲ. 5 ವರ್ಷಗಳ ಕಾಲ ದೂರದ ಸಂಬಂಧದಲ್ಲಿದ್ದೆವು' ಎಂದರು ಕೀರ್ತಿ.
ನಾನು ಸಿನಿಮಾದಲ್ಲಿ ನಟಿಸಲು ಶುರುಮಾಡಿದೆ. ಅವರು ಬ್ಯುಸಿನೆಸ್ ಶುರು ಮಾಡಲು ಬಯಸಿದ್ದರು. ನಮ್ಮ ಧರ್ಮಗಳು ಬೇರೆ ಬೇರೆ ಆಗಿದ್ದರಿಂದ, ಮನೆಯಲ್ಲಿ ಹೇಗೆ ಒಪ್ಪಿಕೊಳ್ಳುತ್ತಾರೆ ಎಂಬ ಆತಂಕವಿತ್ತು. ಅದಕ್ಕಾಗಿಯೇ ಮನೆಯಲ್ಲಿ ಹೇಳಲು ತಡವಾಯಿತು. ಆದರೆ, ಮನೆಯಲ್ಲಿ ಹೇಳುವ ಮೊದಲೇ ನಿಮ್ಮ ಬಳಿ ಹೇಳಿದ್ದೆ' ಎಂದು ಜಗಪತಿ ಬಾಬುಗೆ ಕೀರ್ತಿ ಹೇಳಿದರು.
ನಾನು ನನ್ನ ಹಾಗೂ ಆಂಟನಿ ಲವ್ ಹಾಗೂ ನಾವಿಬ್ಬರೂ ಮದುವೆ ಆಗಲು ನಿರ್ಧರಿಸಿರುವುದಾಗಿ ನಾಲ್ಕು ವರ್ಷಗಳ ಹಿಂದೆ ಅಪ್ಪನ ಬಳಿ ಹೇಳಿದೆ. ಅವರು ಸುಲಭವಾಗಿ ನಮ್ಮ ಮದುವೆಗೆ ಒಪ್ಪಿಗೆ ನೀಡಿದರು. ಒಟ್ಟಿನಲ್ಲಿ, ಕೀರ್ತಿ ತನ್ನ ಪ್ರೇಮ ಕಥೆಯನ್ನು ಕುಟುಂಬದವರಿಗಿಂತ ಮುಂಚೆಯೇ ಜಗಪತಿ ಬಾಬು ಬಳಿ ಹೇಳಿಕೊಂಡಿದ್ದಾರೆ. ಇಬ್ಬರೂ 'ಅಣ್ಣಾತ್ತೆ', 'ಮಿಸ್ ಇಂಡಿಯಾ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.