Shanvi Srivastava: ಸೆನ್ಸಾರ್ ಅಂಗಳದಲ್ಲಿ ದಿನೇಶ್ ಬಾಬು ನಿರ್ದೇಶನದ ಕಸ್ತೂರಿ ಮಹಲ್

By Suvarna NewsFirst Published Jan 10, 2022, 10:31 AM IST
Highlights

ದಿನೇಶ್ ಬಾಬು ನಿರ್ದೇಶನದ, ಶಾನ್ವಿ ವಾಸ್ತವ್ ನಾಯಕಿಯಾಗಿ ನಟಿಸಿರುವ 'ಕಸ್ತೂರಿ ಮಹಲ್' ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಸದ್ಯದಲ್ಲೇ ಸೆನ್ಸಾರ್ ಆಗಲಿದೆ. ಈಗಾಗಲೇ ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಿದೆ. 

ದಿನೇಶ್ ಬಾಬು (Dinesh Babu) ನಿರ್ದೇಶನದ, ಶಾನ್ವಿ ವಾಸ್ತವ್ (Shanvi Srivastava) ನಾಯಕಿಯಾಗಿ ನಟಿಸಿರುವ 'ಕಸ್ತೂರಿ ಮಹಲ್' (Kasturi Mahal) ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಸದ್ಯದಲ್ಲೇ ಸೆನ್ಸಾರ್ ಆಗಲಿದೆ. ಈಗಾಗಲೇ ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಿದೆ. ಚಿತ್ರಕ್ಕೆ ಸೆನ್ಸಾರ್ (Censor) ಆದ ಕೂಡಲೇ ಚಿತ್ರವನ್ನು ಚಿತ್ರಮಂದಿರಗಳಲ್ಲೇ ಬಿಡುಗಡೆ ಮಾಡುವ ಪ್ಲಾನ್ ಚಿತ್ರತಂಡದ್ದು. ಇದು ದಿನೇಶ್ ಬಾಬು ಅವರ 50ನೇ ಚಿತ್ರವಾಗಿರುವುದು ಕಸ್ತೂರಿ ಮಹಲ್‌ನ ಮತ್ತೊಂದು ಹೈಲೈಟ್. ಮೊದಲ ಬಾರಿಗೆ ಶಾನ್ವಿ ಈ ಚಿತ್ರದಲ್ಲಿ ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ಈ ಹಿಂದೆ ನಟ ಪುನೀತ್ ರಾಜ್ ಕುಮಾರ್ (Puneeth Rajkumar) ಅವರು ಚಿತ್ರದ ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದ್ದರು.  ‘ನಮ್ಮ ಕುಟುಂಬಕ್ಕೆ ದಿನೇಶ್‌ ಬಾಬು ಅವರು ತುಂಬಾ ಆತ್ಮೀಯರು. ಶಿವಣ್ಣ ಅವರಿಗೆ ‘ಇನ್ಸ್‌ಪೆಕ್ಟರ್‌ ವಿಕ್ರಂ’ ಹಾಗೂ ನನ್ನ ನಟನೆಯಲ್ಲಿ ‘ಅಭಿ’ ಚಿತ್ರವನ್ನು ನಿರ್ದೇಶನ ಮಾಡಿದವರು. ‘ಕಸ್ತೂರಿ ಮಹಲ್‌’ ಅವರ ನಿರ್ದೇಶನದ 50ನೇ ಸಿನಿಮಾ ಎಂದು ತಿಳಿದು ಖುಷಿ ಆಯ್ತು. ಕನ್ನಡದಲ್ಲಿ ದಿನೇಶ್‌ ಬಾಬು ಅವರು ಉತ್ತಮ ಚಿತ್ರಗಳನ್ನು ನೀಡುತ್ತಿದ್ದಾರೆ. ‘ಕಸ್ತೂರಿ ಮಹಲ್‌’ ಚಿತ್ರ ಕೂಡ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಲಿ’ ಎಂದು ಪುನೀತ್‌ ರಾಜ್‌ಕುಮಾರ್‌ ಈ ಹಿಂದೆ ಹೇಳಿದ್ದರು.

ಜೊತೆ ಜೊತೆಯಲಿ ಧಾರಾವಾಹಿ ಬದುಕು ಬದಲಿಸಿತು: Megha Shetty

ಸದ್ಯ ಚಿತ್ರದ ಟೀಸರ್ (Teaser) ನೋಡುಗರ ಮೆಚ್ಚುಗೆಗೆ ಪಾತ್ರ ವಾಗಿದೆ. ಸ್ಕಂದ ಅಶೋಕ್, ರಂಗಾಯಣ ರಘು, ಶ್ರುತಿ ಪ್ರಕಾಶ್, ಕಾಶಿಮ ರಫಿ, ನೀನಾಸಂ ಅಶ್ವಥ್, ಅಕ್ಷರ್ ಮುಂತಾದವರು ಚಿತ್ರದ ಮುಖ್ಯ ಪಾತ್ರಧಾರಿಗಳಾಗಿ ನಟಿಸಿದ್ದಾರೆ. ಹಾರರ್ ಹಾಗೂ ಕಾಮಿಡಿ ಈ ಚಿತ್ರದ ಪ್ರಧಾನ ಅಂಶಗಳು. ಶ್ರೀಭವಾನಿ ಆರ್ಟ್ಸ್ ಲಾಂಛನದಲ್ಲಿ ರವೀಶ್ ಆರ್ ಸಿ ನಿರ್ಮಿಸಿರುವ ಈ ಚಿತ್ರಕ್ಕೆ ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ ಮಾಡಿದ್ದಾರೆ.

ಇನ್ನು ಈ ಚಿತ್ರಕ್ಕೆ  ‘ಕಸ್ತೂರಿ ನಿವಾಸ’ ಎನ್ನುವ ಟೈಟಲ್‌ ಇಡಲಾಗಿತ್ತು. ಆದರೆ, ಡಾ ರಾಜ್‌ಕುಮಾರ್‌ ನಟನೆಯ ಕ್ಲಾಸಿಕ್‌ ಸಿನಿಮಾಗಳಲ್ಲಿ ಒಂದಾದ ಚಿತ್ರದ ಹೆಸರನ್ನು ಬಳಸುವುದು ಸರಿಯಲ್ಲ ಎಂದು ಸೋಷಿಯಲ್‌ ಮೀಡಿಯಾಗಳಲ್ಲಿ ಬಿಸಿ ಬಿಸಿ ಚರ್ಚೆ ನಡೆದ ಪರಿಣಾಮ ಹೆಸರು ಬದಲಾಗಿದೆ. ಹೊಸ ಟೈಟಲ್‌ ಆಯ್ಕೆ ಮಾಡಿರುವ ವಿಷಯವನ್ನು ಹಿರಿಯ ನಿರ್ದೇಶಕ ಭಗವಾನ್‌ ಅವರಿಗೂ ತಿಳಿಸಿ ಚಿತ್ರ ನಿರ್ಮಾಪಕ ರವೀಶ್‌ ಆರ್‌ಸಿ ಹಾಗೂ ರುಬಿನ್‌ ರಾಜ್‌ ಆಶೀರ್ವಾದ ಪಡೆದಿದ್ದರು. 

Actor Pramod: ಪ್ರೀಮಿಯರ್ ಪದ್ಮಿನಿ ಹುಡುಗನ ಕೈಯಲ್ಲಿ 6 ಚಿತ್ರಗಳು

ಸದ್ಯ ಶಾನ್ವಿ ಗಣೇಶ್‌ ಪರುಶುರಾಮ್‌ ನಿರ್ದೇಶನ ಮಾಡುತ್ತಿರುವ 'ಬ್ಯಾಂಗ್‌' (Baang) ಚಿತ್ರದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ‘ನಾನು ಇಲ್ಲಿಯವರೆಗೂ ಗ್ಲಾಮರ್‌, ರೆಗ್ಯುಲರ್‌ ನಾಯಕಿ ಪಾತ್ರಗಳಲ್ಲೇ ಹೆಚ್ಚು ಕಾಣಿಸಿಕೊಂಡಿದ್ದೇನೆ. ಆದರೆ, ‘ಬ್ಯಾಂಗ್‌’ ಚಿತ್ರದ ಮೂಲಕ ಹೊಸ ಅವತಾರದಲ್ಲಿ ತೆರೆ ಮೇಲೆ ಬರುತ್ತಿದ್ದೇನೆ. ನಟಿಯರು ಗ್ಯಾಂಗ್‌ಸ್ಟರ್‌ಗಳಾದರೆ ನೋಡಲು ತುಂಬಾ ಚೆನ್ನಾಗಿರುತ್ತದೆ. ಅದೇ ಕುತೂಹಲದಲ್ಲಿ ಒಪ್ಪಿಕೊಂಡಿರುವ ಸಿನಿಮಾ ಇದು. ಫೆಬ್ರವರಿ ಮೊದಲ ವಾರದಿಂದ ನನ್ನ ಪಾತ್ರದ ಚಿತ್ರೀಕರಣ ಶುರುವಾಗಲಿದೆ’ ಎಂದು ನಟಿ ಶಾನ್ವಿ ಶ್ರೀವಾಸ್ತವ ಹೇಳಿದ್ದಾರೆ.

click me!