ಸಿಎಂ ಸಹಾಯ ಕೋರಿ ನಿರ್ದೇಶಕರ ಸಂಘದಿಂದ ಮನವಿ ಪತ್ರ!

By Suvarna NewsFirst Published May 20, 2021, 11:15 AM IST
Highlights

ಕನ್ನಡ ಚಿತ್ರೋದ್ಯಮಕ್ಕೂ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡುವಂತೆ ನಿರ್ದೇಶಕರ ಸಂಘದಿಂದ ಮುಖ್ಯಮಂತ್ರಿಗೆ ಮನವಿ ಪತ್ರ ಬರೆಯಲಾಗಿದೆ.

ಕೊರೋನಾ ಎರಡನೇ ಅಲೆಯಿಂದ ಅದೆಷ್ಟೋ ಮಂದಿ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಐಟಿ, ಬಿಟಿ ಕ್ಷೇತ್ರಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದು, ಒಂದು ರೀತಿಯ ದುಡಿಮೆ ಕೈಯಲ್ಲಿದೆ. ಆದರೆ ಚಿತ್ರಮಂದಿರಗಳು ಬಂದ್ ಆಗಿ, ಚಿತ್ರೀಕರಣವೂ ಸ್ಥಗಿತಗೊಂಡಿರುವ ಕಾರಣ ನಿರ್ದೇಶಕರ ಜೀವನದ ಮೇಲೆ ದೊಡ್ಡ ಪ್ರಮಾಣದ ಹೊಡೆತ ಬಿದ್ದಿದೆ. ಹೀಗಾಗಿ ಆರ್ಥಿಕ ನೆರವು ನೀಡುವಂತೆ ಪತ್ರದ ಮೂಲಕ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಂಘ ಮನವಿ ಮಾಡಿಕೊಂಡಿದೆ. 

ಪತ್ರದಲ್ಲಿ ಏನಿದೆ?
ಸುಮಾರು 85  ವರ್ಷಗಳ ಕಾಲ ಇತಿಹಾಸವಿರುವ ಕನ್ನಡ ಚಿತ್ರರಂಗದಲ್ಲಿ ಸುಮಾರು 36 ವರ್ಷಗಳಿಂದ ನಿರ್ದೇಶಕರ ಸಂಘ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಚಿತ್ರರಂಗದ ಮೂಲ ಆಧಾರ ಸ್ತಂಭವಾಗಿರುವ ನಿರ್ದೇಶಕರು, ಆರ್ಥಿಕವಾಗಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈಗ ಸಂಘದಲ್ಲಿ ಸುಮಾರು 2300 ಸದಸ್ಯರಿದ್ದು ತಕ್ಷಣವೇ 1000 ಮಂದಿಗಾದರೂ ಅರ್ಥಿಕವಾಗಿ ಕೈ ಹಿಡಿಯುವ ಕೆಲಸ ಸರ್ಕಾರದಿಂದ ಮಾಡಬೇಕಾಗಿದೆ. 

Latest Videos

ಚಿತ್ರರಂಗವನ್ನು ಕೈಗಾರಿಕಾ ವಲಯವೆಂದು ಘೋಷಿಸಿ; ಸಿನಿ ಪ್ರದರ್ಶಕರ ಮನವಿಗೆ ಸರ್ಕಾರದ ಪ್ರತಿಕ್ರಿಯೆ ಏನು?

ಈ ಸಮುದಾಯ ಕೇವಲ ಕ್ರಿಯಾಶೀಲ ಚಿಂತನೆಯಲ್ಲೇ ತೊಡಗಿರುವ ಕಾರಣ ಬೇರೆ ಉದ್ಯೋಗವನ್ನು ಅವಲಂಬಿಸಲು ಸಾದ್ಯವಾಗುವುದಿಲ್ಲ. ಆದ ಕಾರಣ 1000 ಸದಸ್ಯರಿಗೆ ತಲಾ 10,000 ರೂಗಳನ್ನು ತಕ್ಷಣವೇ ನೀಡುವ ಮೂಲಕ ನಿರ್ದೇಶಕ ಸಮುದಾಯವನ್ನು ಅಪತ್ಕಾಲದ ಆರ್ಥಿಕ ಆಕ್ಸಿಜನ್ ನೀಡಿ, ರಕ್ಷಿಸಬೇಕೆಂದು ತಮ್ಮಲ್ಲಿ ಕಳಕಳಿಯಿಂದ ಮತ್ತು ಗೌರವಗಳಿಂದ ಬೇಡಿಕೊಳ್ಳುತ್ತೇವೆ ಎಂದು ಪತ್ರದಲ್ಲಿ ಕೇಳಿಕೊಳ್ಳಲಾಗಿದೆ.

(ಪತ್ರಗಳು ಇಲ್ಲಿವೆ..)

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!